ಹೈದರಾಬಾದ್: ರಣಬೀರ್ ಇದೇ ಮೊದಲ ಬಾರಿಗೆ ನಟಿ ಶ್ರದ್ದಾ ಕಪೂರ್ ಜೊತೆ ನಟಿಸುತ್ತಿದ್ದು, ಇವರ ನಟನೆಯ 'ತೂ ಜೂಟಿ ಮೇ ಮಕ್ಕರ್' ಚಿತ್ರದ ಟ್ರೈಲರ್ ಬಿಡುಗಡೆ ಗೊಂಡಿದೆ. 'ತೂ ಜೂಟಿ ಮೇ ಮಕ್ಕರ್' ಪ್ರೇಮ ಹಾಸ್ಯ ಭರಿತ ಚಿತ್ರವಾಗಿದ್ದು, ಜನರಿಗೆ ಪಕ್ಕಾ ಎಂಟರ್ಟೈನ್ಮೆಂಟ್ ಸಿನಿಮಾ ಎನ್ನಲಾಗಿದೆ. ಲವ್ ರಂಜನ್ ನಿರ್ದೇಶನ ಈ ಚಿತ್ರ ರಣಬೀರ್ ರೋಮ್ಯಾಂಟಿಕ್ - ಕಾಮಿಡಿ ಪಾತ್ರದಲ್ಲಿ ಮಿಂಚಲಿದ್ದಾರೆ. ರಣಬೀರ್ ಅಭಿನಯದ 'ಬ್ರಹ್ಮಾಸ್ತ್ರ' ಮತ್ತು 'ಶಂಶೇರಾ'ದಂತಹ ಗಂಭೀರ ರೋಮ್ಯಾಂಟಿಕ್ ಚಿತ್ರಕ್ಕಿಂತ ಭಿನ್ನವಾಗಿದೆ. ತಮ್ಮ ಚಾರ್ಮ್ ಮೂಲಕ ರಣಬೀರ್ 'ತೂ ಜೂಟಿ ಮೇ ಮಕ್ಕರ್' ಸಿನಿಮಾದಲ್ಲಿ ಪ್ರೇಕ್ಷಕರನ್ನು ಸೆಳೆಯಲಿದ್ದಾರೆ.
ಮೊದಲ ಬಾರಿ ಒಟ್ಟಿಗೆ:ರಣಬೀರ್ ಮತ್ತು ಶ್ರದ್ಧಾ ನಡುವಿನ ಕೆಮಿಸ್ಟ್ರಿ ಕೂಡ ಚಿತ್ರದ ಹೈಲೈಟ್ ಆಗಿದೆ. ಇದೇ ಮೊದಲ ಬಾರಿ ಇಬ್ಬರು ಒಟ್ಟಿಗೆ ನಟಿಸುತ್ತಿದ್ದು, ಇವರ ಜೋಡಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರದ ಜೂಟಿ ಪಾತ್ರದಲ್ಲಿ ಶ್ರದ್ದಾ ಕಂಡು ಬಂದರೆ, ಮಕ್ಕರ್ ಪಾತ್ರದಲ್ಲಿ ರಣಬೀರ್ ಕಾಣಲಿದ್ದಾರೆ. ಟ್ರೈಲರ್ನಲ್ಲಿ ಇಬ್ಬರ ನಡುವಿನ ಚೇಷ್ಟೆ ಮತ್ತು ತಮಾಷೆ ಜೊತೆಗೆ ರೋಮ್ಯಾನ್ಸ್ ಅನ್ನು ಕಾಣಬಹುದಾಗಿದೆ.
ಈಗಾಗಲೇ ಬಿಡುಗಡೆಯಾಗಬೇಕಿದ್ದ ಚಿತ್ರ ಹಲವು ಕಾರಣದಿಂದ ಮುಂದೆ ಹೋಗಿದ್ದು, ಈಗ ಇದೇ ಜನವರಿ ಬಿಡುಗಡೆಯಾಗಲಿದೆ ಎನ್ನಲಾಗಿತ್ತು. ಆದರೆ, ಇದೀಗ ಅಂತಿಮವಾಗಿ ಚಿತ್ರವೂ ಹೋಳಿ ಹಬ್ಬದಂದು ಅಂದರೆ ಮಾರ್ಚ್ 8 ರಂದು ಬಿಡುಗಡೆಯಾಗಲಿದೆ.
ಹೊಸ ಜೋಡಿಗೆ ಮೆಚ್ಚುಗೆ: ಚಿತ್ರದ ಪ್ರಮುಖ ಪಾತ್ರದಲ್ಲಿ ಬೋನಿ ಕಪೂರ್ ಮತ್ತು ಡಿಂಪಲ್ ಕಪಾಡಿಯಾ ಕೂಡ ಇದ್ದಾರೆ. ಇನ್ನು ಚಿತ್ರದ ಟ್ರೈಲರ್ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಟಿ. ಈ ಪೋಸ್ಟರ್ ಸಂಪೂರ್ಣವಾಗಿ ಕಲ್ಪನಿಕವಾಗಿದೆ. ನಿಜವಾದ ಪ್ರೀತಿಗೆ ಯಾವುದೇ ಹೋಲಿಕೆಯು ಸಂಪೂರ್ಣವಾಗಿ ಕಾಕತಾಳೀಯವಾಗಿದೆ ಎಂದು ವಿಶೇಷವಾಗಿ ಡಿಸ್ಕ್ಲೇಮರ್ ಕೂಡ ತಿಳಿಸಿದ್ದಾರೆ. ಇನ್ನು ಶ್ರದ್ಧಾ ಪೋಸ್ಟ್ಗೆ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದು, ನನ್ನ ಇಬ್ಬರು ಫೇವರಿಟ್ ನಟರು ಒಟ್ಟಿಗೆ ನಟಿಸುತ್ತಿರುವುದು ಖುಷಿ ನೀಡಿದೆ ಎಂದಿದ್ದಾರೆ. ಮತ್ತೊಬ್ಬ ಅಭಿಮಾನಿ, ಹೊಸ ಜೋಡಿಗಳು ನೋಡುವುದು ಖುಷಿ ನೀಡುತ್ತಿದೆ ಎಂದಿದ್ದಾರೆ.