ಇತ್ತೀಚೆಗೆ ಬಿಡುಗಡೆಯಾದ ಫ್ಯಾಮಿಲಿ ಆಕ್ಷನ್ ಸೀರಿಸ್ 'ರಾಣಾ ನಾಯ್ಡು' ಟೀಕೆಗಳಿಗೆ ಗುರಿಯಾಗಿದೆ. ಕೌಟುಂಬಿಕ ಚಿತ್ರಗಳ ರೂವಾರಿಯಾಗಿದ್ದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ ಅಭಿನಯದ ಈ ಸೀರಿಸ್ ಅಭಿಮಾನಿಗಳಿಗೆ ಮುಜುಗರ ಉಂಟುಮಾಡಿದೆ. ರಾಣಾ ನಾಯ್ಡು ಸೀರಿಸ್ನಲ್ಲಿ ಬಳಸಲಾದ ಭಾಷೆ ಮತ್ತು ಕೆಲವು ದೃಶ್ಯಗಳು ಅಪಮಾನಕ್ಕೆ ಒಳಗಾಗಿದೆ. ರಾಣಾ ದಗ್ಗುಬಾಟಿ ಮತ್ತು ಅವರ ಚಿಕ್ಕಪ್ಪ ಟಾಲಿವುಡ್ ಹಿರಿಯ ನಟ ವೆಂಕಟೇಶ್ ದಗ್ಗುಬಾಟಿ ಮೊದಲ ಬಾರಿಗೆ ಜೊತೆಯಾಗಿ ನಟಿಸಿದ ಸೀರಿಸ್ ಇದಾಗಿದ್ದು, ಫ್ಯಾನ್ಸ್ ನಿರೀಕ್ಷೆಯನ್ನು ಹುಸಿ ಮಾಡಿದೆ.
ರಾಣಾ ದಗ್ಗುಬಾಟಿ ಮತ್ತು ವೆಂಕಟೇಶ್ ದಗ್ಗುಬಾಟಿ ಅಭಿನಯದ ರಾಣಾ ನಾಯ್ಡು ವೆಬ್ಸೀರಿಸ್ ಆಕ್ಷನ್ ಮತ್ತು ಕ್ರೈಮ್ ಕಥೆಯನ್ನಾಧಾರಿಸಿದೆ. ಅಮೆರಿಕನ್ ಕ್ರೈಮ್ ಸೀರಿಸ್ ಒಂದನ್ನು ಸ್ಪೂರ್ತಿಯಾಗಿಟ್ಟುಕೊಂಡು ಈ ಕಥೆಯನ್ನು ಹೆಣೆಯಲಾಗಿದೆ. ಸುಪರ್ಣ್ ವರ್ಮ ಮತ್ತು ಕರಣ್ ಅಶುಮನ್ ಅವರು ಈ ಸೀರಿಸ್ ಅನ್ನು ನಿರ್ದೇಶನ ಮಾಡಿದ್ದಾರೆ. ಬಾಲಿವುಡ್ ಅನ್ನು ಮುಖ್ಯವಾಗಿಟ್ಟುಕೊಂಡು ಈ ಕಾಲ್ಪನಿಕ ಕಥೆಯನ್ನು ಚಿತ್ರೀಕರಿಸಲಾಗಿದೆ. ಹಿಂದಿ ಮತ್ತು ತೆಲುಗು ಭಾಷೆಯಲ್ಲಿ ಈ ವೆಬ್ಸಿರೀಸ್ ಮಾರ್ಚ್ 10 ರಂದು ಬಿಡುಗಡೆ ಮಾಡಲಾಗಿದೆ.
ಆದರೆ, ಸೀರಿಸ್ ಟ್ರೇಲರ್ ನೋಡಿದ ಅನೇಕರು ರಾಣಾ ನಾಯ್ಡು ಮೆಚ್ಚಿಕೊಂಡಿದ್ದರು. ಜೊತೆಗೆ ಈ ವೆಬ್ಸೀರಿಸ್ ಮೇಲೆ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಆದಾಗ್ಯೂ, ರಾಣಾ ನಾಯ್ಡು ಸೀರಿಸ್ ಅನ್ನು ಸಿನಿ ಪ್ರೇಕ್ಷಕರು ಸ್ವೀಕರಿಸಿಲ್ಲ. ಫ್ಯಾಮಿಲಿ ಆಕ್ಷನ್ ಸೀರಿಸ್ ಎಂಬುದಾಗಿ ಹೇಳಲಾಗಿತ್ತಾದರೂ, ಅದರ ವಿರುದ್ಧವಾಗಿ ಸೀರಿಸ್ ಅನ್ನು ಚಿತ್ರೀಕರಿಸಲಾಗಿದೆ. ಕೆಳಮಟ್ಟದ ಶಬ್ದ ಮತ್ತು ಪದಗಳನ್ನು ಈ ಸೀರೀಸ್ನಲ್ಲಿ ಬಳಸಲಾಗಿದೆ. ಅಲ್ಲದೇ ಕೆಲವೊಂದು ದೃಶ್ಯಗಳು ಸಿರೀಸ್ನ ಮೇಲಿದ್ದ ನಿರೀಕ್ಷೆಯನ್ನು ಕೆಳಮಟ್ಟಕ್ಕೆ ಕೊಂಡೊಯ್ದಿದೆ ಎಂದು ನೆಟ್ಟಿಗರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:"RRR ಪ್ರತಿ ಭಾರತೀಯನ ಹೆಮ್ಮೆ": ಆಸ್ಕರ್ ಪ್ರಶಸ್ತಿ ಸ್ವೀಕರಿಸಿ ಚಿತ್ರತಂಡ ಭಾವುಕ