ಬಿಗ್ ಬಜೆಟ್ನಲ್ಲಿ ನಿರ್ಮಾಣಗೊಳ್ಳುತ್ತಿರುವ ಕಬ್ಜ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಭಾರಿ ಪ್ರಶಂಸೆ ವ್ಯಕ್ತವಾಗ್ತಿದೆ. ಉಪೇಂದ್ರ ಅಭಿಮಾನಿಗಳೂ ಸೇರಿದಂತೆ ಸಿನಿಪ್ರಿಯರು ವಿಭಿನ್ನ ಟೀಸರ್ಗೆ ಮನಸೋತಿದ್ದಾರೆ. ಸೆಪ್ಟೆಂಬರ್ 17ರಂದು ರಿಲೀಸ್ ಆಗಿರುವ ಟೀಸರ್ ಈಗಾಗಲೇ ಒಂದೂವರೆ ಕೋಟಿಗೂ ಹೆಚ್ಚು ವೀಕ್ಷಣೆ ಗಳಿಸಿದೆ. ಪರಭಾಷೆಯಲ್ಲೂ ಚಿತ್ರಕ್ಕೆ ಜನಪ್ರಿಯತೆ ಗಳಿಸುತ್ತಿದೆ.
ಯೂಟ್ಯೂಬ್ನಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿರುವ ಟೀಸರ್ಗೆ ಚಿತ್ರ ನಿರ್ದೇಶಕ ರಾಮ್ಗೋಪಾಲ್ ವರ್ಮಾ ಸೂಪರ್ ಅಂದಿದ್ದಾರೆ. ಕೇವಲ 24 ಗಂಟೆಗಳಲ್ಲಿ ಕಬ್ಜ ಟೀಸರ್ 1 ಕೋಟಿ 21 ಲಕ್ಷ ವೀಕ್ಷಣೆ ಕಂಡಿದೆ. ಮುಂದಿನ ಪ್ಯಾನ್ ಇಂಡಿಯಾ ಚಿತ್ರಕ್ಕೆ ಸ್ವಾಗತ ಎಂದಿದ್ದು, ನಿರ್ದೇಶಕ ಆರ್ ಚಂದ್ರು, ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಅವರಿಗೆ ಆಲ್ ದಿ ಬೆಸ್ಟ್ ಎಂದು ಆರ್‌ಜಿವಿ ಹೇಳಿದ್ದಾರೆ.
ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಚಿತ್ರದಲ್ಲಿ ನಟನೆ ಮಾಡಿದ್ದು, ಉಪ್ಪಿ ಮಾಸ್ ಲುಕ್ನಲ್ಲಿ ಮಿಂಚಿದ್ದಾರೆ. ಚಿತ್ರ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಮರಾಠಿ, ಬೆಂಗಾಲಿ ಸೇರಿ 7 ಭಾಷೆಯಲ್ಲಿ ರಿಲೀಸ್ ಆಗಲಿದೆ. 7 ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಕನ್ನಡದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಈ ಟೀಸರ್ಗೆ ಯೂಟ್ಯೂಬ್ನಲ್ಲಿ ನಾಲ್ಕೂವರೆ ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. 50 ಸಾವಿರಕ್ಕೂ ಅಧಿಕ ಕಮೆಂಟ್ಗಳು ಬಂದಿವೆ. ಬಹುತೇಕ ಎಲ್ಲರೂ ಪಾಸಿಟಿವ್ ಆಗಿಯೇ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ರಿಯಲ್ ಸ್ಟಾರ್, ಅಭಿನಯ ಚಕ್ರವರ್ತಿ ಅಭಿನಯದ ಕಬ್ಜ ಟೀಸರ್ ರಿಲೀಸ್...ಉಪ್ಪಿ ಮಾಸ್ ಲುಕ್ಗೆ ಫ್ಯಾನ್ಸ್ ಫಿದಾ
ಕಬ್ಜ ತಾರಾ ಬಳಗ:ಉಪೇಂದ್ರ ಅವರ ಜೋಡಿಯಾಗಿ ಸೌತ್ ಬ್ಯೂಟಿ ಶ್ರೀಯಾ ಸರಣ್ ಕಾಣಿಸಿಕೊಂಡಿದ್ದಾರೆ. ಐ ಮೂವಿ ಖ್ಯಾತಿಯ ಕಾಮರಾಜನ್, ನವಾಬ್ ಷಾ, ಜಗಪತಿ ಬಾಬು, ರಾಹುಲ್ ಜಗತಪ್, ಅನೂಪ್ ರೇವಣ್ಣ, ಜಾನ್ ಕೊಕ್ಕಿನ್, ರಾಹುಲ್ ದೇವ್, ನವೀನ್, ಕೋಟ ಶ್ರೀನಿವಾಸ್, ಜಯಪ್ರಕಾಶ್, ಕಾಟ್ ರಾಜು, ಸುಬ್ಬರಾಜು, ತೆಲುಗಿನ ಬೇಡಿಕೆಯ ನಟರಾದ ಪೊಸನಿ ಕೃಷ್ಣ ಮುರಳಿ ಮತ್ತು ಮುರಳಿ ಶರ್ಮಾ ಕಬ್ಜ ಚಿತ್ರದಲ್ಲಿ ಪಾತ್ರವಹಿಸಿದ್ದಾರೆ. ಕೆ.ಜಿ.ಎಫ್ 2 ಚಿತ್ರ ಈಗಾಗಲೇ ವಿಶ್ವಾದ್ಯಂತ ವಿಜಯ ಪತಾಕೆ ಹಾರಿಸಿದ್ದು, ಇದೀಗ "ಕಬ್ಜ" ಚಿತ್ರ ಕೂಡ ಗೆಲ್ಲುವ ನಿರೀಕ್ಷೆಯಲ್ಲಿದೆ. ಈ ಚಿತ್ರ ಗೆದ್ದರೆ ಮತ್ತೊಮ್ಮೆ ಬಾಲಿವುಡ್ನಲ್ಲಿ ಕನ್ನಡ ಚಿತ್ರ ನಂಬರ್ ಒನ್ ಪಟ್ಟ ಪಡೆದುಕೊಳ್ಳಲಿದೆ ಎಂಬುದು ಸಿನಿ ಪಂಡಿತರ ಅಭಿಪ್ರಾಯ.