ಕರ್ನಾಟಕ

karnataka

ETV Bharat / entertainment

ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಮತ್ತೆ ಕಾಣಿಸಿಕೊಳ್ಳಲಿರುವ ರಾಮ್ ಚರಣ್ - Ram Charan next movie

ಟಾಲಿವುಡ್ ನಟ ರಾಮ್​ಚರಣ್ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ. ಹೊಸ ಸಿನಿಮಾದ ಹೆಸರು ಅಂತಿಮಗೊಂಡಿಲ್ಲ.

ram-charan-to-star-in-yet-another-pan-india-entertainer
ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಮತ್ತೇ ಕಾಣಿಸಿಕೊಳ್ಳಲಿರುವ ರಾಮ್ ಚರಣ್

By

Published : Nov 28, 2022, 5:34 PM IST

ಹೈದರಾಬಾದ್: ಉಪೆನ್ನಾ ಖ್ಯಾತಿಯ ನಿರ್ದೇಶಕ ಬುಚ್ಚಿ ಬಾಬು ಸನಾ ಟಾಲಿವುಡ್ ನಟ ರಾಮ್​ ಚರಣ್​ಗೆ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ. ಪ್ಯಾನ್​ ಇಂಡಿಯಾ ಸಿನಿಮಾ ಇದಾಗಿರಲಿದ್ದು ಇನ್ನೂ ಹೆಸರು ಫೈನಲೈಸ್ ಮಾಡಿಲ್ಲ. ಪುಷ್ಪ ಖ್ಯಾತಿಯ ಸುಕುಮಾರ್ ಮಾಲೀಕತ್ವದ ವೃದ್ಧಿ ಸಿನಿಮಾಸ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಲಿದ್ದು, ಸುಕುಮಾರ್ ಪ್ರೊಡಕ್ಷನ್​ನ ಮೊದಲ ಸಿನಿಮಾವಾಗಿ ಮೂಡಿಬರಲಿದೆ.

ದಕ್ಷಿಣ ಸಿನಿಮಾ ರಂಗದ​ ಮೈತ್ರಿ ಸಿನಿಮಾಸ್​ ಬ್ಯಾನರ್​ ಅಡಿಯಲ್ಲಿ ಚಿತ್ರ ನಿರ್ಮಾಣ ಆಗುತ್ತಿದೆ. ಕಾಸ್ಟಿಂಗ್​ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ. ಸದ್ಯಕ್ಕಂತೂ ರಾಮ್​ ಚರಣ್​ ಕೈಯಲ್ಲಿ ಆರ್​ಸಿ 15 ಸಿನಿಮಾ ಇದೆ.

ಬುಚ್ಚಿ ಬಾಬು ಸನಾ ಸೋಮವಾರ ಟ್ವೀಟ್​ ಮಾಡಿದ್ದು, ಕೆಲವೊಮ್ಮೆ ದಂಗೆ ಅನಿವಾರ್ಯವಾಗುತ್ತದೆ. ರಾಮ್​ ಚರಣ್​ ಜೊತೆಗೆ ಕೆಲಸ ಮಾಡುವುದು ಯಾವಾಗಲೂ ಸಂತಸ ಕೊಡುತ್ತದೆ. ಪ್ಯಾನ್​ ಇಂಡಿಯಾ ಸಿನಿಮಾಕ್ಕಾಗಿ ತಯಾರಿ ಮಾಡಲಾಗುತ್ತಿದ್ದು, ಸುಕುಮಾರನ್​ ಪ್ರಸ್ತುತ ಪಡಿಸುತ್ತಿದ್ದಾರೆ. ಮೈತ್ರಿ ಸಿನಿಮಾ ಹೌಸ್​ ನಿರ್ಮಾಣ ಮಾಡುತ್ತಿದೆ ಎಂದು ಬರೆದುಕೊಂಡಿದ್ದಾರೆ.

ರಾಮ್​ ಚರಣ್ ​ಕೂಡ ಇನ್‌ಸ್ಟಾ ಪೋಸ್ಟ್‌ ಹಾಕಿದ್ದಾರೆ. ಚಿತ್ರದ ಪೋಸ್ಟರ್​ ಹಂಚಿಕೊಂಡಿದ್ದು ನಟಿಸಲು ಉತ್ಸುಕನಾಗಿದ್ದೇನೆ. ಬುಚ್ಚಿ ಬಾಬು ಸನಾ ಮತ್ತು ಚಿತ್ರತಂಡದೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಪಾಂಡವಪುರದಲ್ಲಿ ವೇದ ಚಿತ್ರದ ಆಡಿಯೋ ಬಿಡುಗಡೆ: ಭರ್ಜರಿ ಸ್ಟೆಪ್ ಹಾಕಿದ ಹ್ಯಾಟ್ರಿಕ್ ಹೀರೋ

ABOUT THE AUTHOR

...view details