ಕರ್ನಾಟಕ

karnataka

ETV Bharat / entertainment

'ನಾನು ಸಲ್ಲು ಫ್ಯಾನ್​​, ನನ್ನ ಪತ್ನಿ ಶಾರುಖ್​ ಅಭಿಮಾನಿ': RRR ಸ್ಟಾರ್ ರಾಮ್​​ಚರಣ್ ​ - ನಾಟು ನಾಟು

'ತಾನು ಸಲ್ಮಾನ್ ಖಾನ್ ಫ್ಯಾನ್​' ಎಂದು ಟಾಲಿವುಡ್ ನಟ ರಾಮ್​​ಚರಣ್ ​ಬಹಿರಂಗಪಡಿಸಿದ್ದಾರೆ.

Ram Charan upasana couple
ರಾಮ್​​ಚರಣ್ ​ಉಪಾಸನಾ ದಂಪತಿ

By

Published : Mar 18, 2023, 1:58 PM IST

ಆಸ್ಕರ್​ 2023 ಬಳಿಕ ಸೌತ್ ಫಿಲ್ಮ್ ಇಂಡಸ್ಟ್ರಿಯ ಸೂಪರ್‌ಹಿಟ್ ಚಿತ್ರ 'ಆರ್‌ಆರ್‌ಆರ್' ಮತ್ತು ನಾಟು ನಾಟು ಹಾಡು ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ. ದಕ್ಷಿಣ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರ ಈ ಚಿತ್ರದಲ್ಲಿ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಉತ್ತಮ ಕೆಲಸ ಮಾಡಿದ್ದಾರೆ. ತಮ್ಮ ಅಮೋಘ ಅಭಿನಯದಿಂದ ಅಭಿಮಾನಿಗಳ ಸಂಖ್ಯೆ ಹೆಚ್ಚಿಸಿಕೊಂಡಿದ್ದಾರೆ. ಚಿತ್ರದ ನಾಟು ನಾಟು ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆಯುವ ಮೂಲಕ ರಾಷ್ಟ್ರದ ಘನತೆ ಹೆಚ್ಚಿಸಿದೆ.

'ನಾನು ಸಲ್ಮಾನ್ ಖಾನ್ ಫ್ಯಾನ್'​:ಆಸ್ಕರ್ ವಿಜೇತ ನಟ ರಾಮ್​​ಚರಣ್ ತಾಯ್ನಾಡಿಗೆ ಮರಳಿದ್ದಾರೆ. ಈವರೆಗೆ ನಡೆದ ಮಾಧ್ಯಮ ಸಂದರ್ಶನಗಳಲ್ಲಿ ನಟ ಅನೇಕ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಈ ಸಂದರ್ಭದಲ್ಲಿ, ತಾನು ಸಲ್ಮಾನ್ ಖಾನ್ ಫ್ಯಾನ್​ ಮತ್ತು ತಮ್ಮ ಪತ್ನಿ ಉಪಾಸನಾ ಶಾರುಖ್​ ಖಾನ್​ ಅವರ ಅಭಿಮಾನಿ ಎಂಬ ವಿಷಯ ತಿಳಿಸಿದ್ದಾರೆ.

'ನನ್ನ ಪತ್ನಿ ಶಾರುಖ್ ಖಾನ್ ಅವರ ಅಭಿಮಾನಿ':ಮಾಧ್ಯಮ ಸಂದರ್ಶನವೊಂದರಲ್ಲಿ, ನಟ ರಾಮ್ ಚರಣ್ ತಮ್ಮ ಆರ್​ಆರ್​ಆರ್​ ಸಿನಿಮಾ ಮತ್ತು ಕುಟುಂಬಕ್ಕೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳನ್ನು ತೆರೆದಿಟ್ಟರು. ರಾಮ್ ಚರಣ್ ಬಾಲಿವುಡ್ ನಟರ ಬಗ್ಗೆ ಮಾತನಾಡುವ ವೇಳೆ, ಬಾಲಿವುಡ್‌ನಲ್ಲಿ ನೀವು ಯಾವ ನಟನನ್ನು ಇಷ್ಟಪಡುತ್ತೀರಿ ಎಂದು ಕೇಳಿದಾಗ, ರಾಮ್​​ಚರಣ್ ಅವರು ಸಲ್ಮಾನ್ ಖಾನ್ ಎಂದು ಉತ್ತರಿಸಿದರು. ನನ್ನ ಪತ್ನಿ ಶಾರುಖ್ ಖಾನ್ ಅವರ ಅಭಿಮಾನಿ ಎಂದು ಸಹ ಹೇಳಿದರು.

ಶೂಟಿಂಗ್​ ವೇಳೆ ಎದುರಾದ ಸವಾಲುಗಳಿವು..ಆಸ್ಕರ್ ವಿಜೇತ 'ನಾಟು - ನಾಟು' ಹಾಡಿನ ಚಿತ್ರೀಕರಣ ಸಮಯದಲ್ಲಿ ಎದುರಾದ ಸವಾಲುಗಳ ಬಗ್ಗೆಯೂ ರಾಮ್​​ಚರಣ್ ಅವರಲ್ಲಿ ಕೇಳಲಾಯಿತು. ಈ ಕುಣಿತಕ್ಕೆ ಸಾಕಷ್ಟು ಬೆವರು ಸುರಿಸಿದ್ದೇವೆ. ನಾನು ಮತ್ತು ತನ್ನ ಸಹನಟ ಜೂನಿಯರ್ ಎನ್‌ಟಿಆರ್ ಪರಸ್ಪರರ ಹೆಜ್ಜೆಗಳನ್ನು ನೋಡದೇ ಡ್ಯಾನ್ಸ್ ಮಾಡಬೇಕಾಗಿತ್ತು. ಇದು ದೊಡ್ಡ ಸವಾಲಾಗಿತ್ತು ಎಂದು ರಾಮ್​ಚರಣ್​ ತಿಳಿಸಿದರು. ಅಲ್ಲದೇ 17 ಬಾರಿ ಇಬ್ಬರೂ ಒಟ್ಟಾಗಿ ಅಭ್ಯಾಸ ಮಾಡಿದ ನಂತರ ಇದು (ಡ್ಯಾನ್ಸ್) ಸಾಧ್ಯವಾಯಿತು ಎಂದು ಸಹ ಮಾಹಿತಿ ಹಂಚಿಕೊಂಡರು.

ಇದನ್ನೂ ಓದಿ:ಆಸ್ಕರ್​ ವೇದಿಕೆಯಲ್ಲಿ ಮಿಂಚಿದ್ದ ದೀಪಿಕಾ ಮರಳಿ ಸ್ವದೇಶಕ್ಕೆ: ಪಡುಕೋಣೆ ಏರ್​ಪೋರ್ಟ್​ ಲುಕ್​ ವೈರಲ್​

ತಾಯ್ನಾಡಿಗೆ ಮರಳಿದ RRR ಸ್ಟಾರ್: ಆರ್​ಆರ್​ಆರ್​ ನಟ ರಾಮ್​ಚರಣ್ ನಿನ್ನೆ ರಾತ್ರಿ ಹೈದರಾಬಾದ್​ಗೆ ಮರಳಿದ್ದು, ಅದ್ಧೂರಿಯಾಗಿ ಸ್ವಾಗತ ಕೋರಲಾಗಿದೆ. ಅಮೆರಿಕದಿಂದ ಮೊದಲು ದೆಹಲಿಗೆ ಬಂದ ನಟ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಟ ರಾಮ್​ಚರಣ್ ಮತ್ತು ಅವರ ತಂದೆ, ನಟ ಚಿರಂಜೀವಿ ಅವರೊಂದಿಗೆ ಮಾತುಕತೆ ನಡೆಸಿ, ಆಸ್ಕರ್​ ಗೆಲುವಿನ ಹಿನ್ನೆಲೆ ಅವರನ್ನು ಸನ್ಮಾನಿಸಿದ್ದರು.

ಇದನ್ನೂ ಓದಿ:ತಾಯ್ನಾಡಿಗೆ ಹಿಂತಿರುಗಿದ RRR ಖ್ಯಾತಿಯ ನಟ ರಾಮ್​ಚರಣ್​ಗೆ ಅದ್ದೂರಿ ಸ್ವಾಗತ

ರಾಮ್​ಚರಣ್ ಮುಂದಿನ ಸಿನಿಮಾ: 'ಆರ್ 15' ರಾಮ್​ಚರಣ್​ ಅವರ ಮುಂದಿನ ಸಿನಿಮಾ. ಇದನ್ನು ದಕ್ಷಿಣದ ಹಿರಿಯ ನಿರ್ದೇಶಕ ಎಸ್ ಶಂಕರ್ ನಿರ್ದೇಶಿಸುತ್ತಿದ್ದಾರೆ. ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ABOUT THE AUTHOR

...view details