ಭಾರತೀಯರಿಗೆ ವಿಶೇಷವಾಗಿ ತೆಲುಗು ಮಂದಿಗೆ 'ಸಂಕ್ರಾಂತಿ' ಮಹತ್ವದ ಹಬ್ಬಗಳಲ್ಲೊಂದು. 'ಸಂಕ್ರಾತಿ' ಸುಗ್ಗಿ, ಗಾಳಿಪಟ, ಸಿಹಿತಿಂಡಿ, ಹೊಸ ವರ್ಷ ಆರಂಭದಂತಹ ವಿಚಾರಗಳನ್ನು ಸಂಕೇತಿಸುತ್ತದೆ. ಇಂದು ಆರ್ಆರ್ಆರ್ ಸ್ಟಾರ್ ರಾಮ್ ಚರಣ್ ಅವರ ಪತ್ನಿ ಉಪಾಸನಾ ಕಾಮಿನೇನಿ ಕೊನಿಡೇಲಾ ಅವರು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಸ್ಟೋರಿನಲ್ಲಿ ಸರಣಿ ಫೋಟೋ - ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಸಂಕ್ರಾತಿ ಸಂಭ್ರಮದ ಕ್ಷಣಗಳು ಇದಾಗಿವೆ.
ಸಂಕ್ರಾಂತಿ ಸಂಭ್ರಮದ ಹಲವು ಗ್ಲಿಂಪ್ಸ್ ಅನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಉಪಾಸನಾ ಹಂಚಿಕೊಂಡಿದ್ದಾರೆ. ಮೊದಲ ಫೋಟೋ, ಸುಂದರವಾಗಿ ಅಲಂಕೃತಗೊಂಡ ಮನೆಯನ್ನು ತೊರಿಸಿದೆ. ಫೋಟೋ ಶೇರ್ ಮಾಡುತ್ತಾ, "ಎಲ್ಲ ಆಹಾರ ಪ್ರೇಮಿಗಳಿಗಾಗಿ, ಸ್ಟೇ ಟ್ಯೂನ್ಡ್!!" ಎಂದು ಬರೆಕೊಂಡಿದ್ದಾರೆ. ಅಪ್ಪುಗೆ ಮತ್ತು ಹಾರ್ಟ್ ಫೇಸ್ ಎಮೋಜಿಯೊಂದಿಗೆ ಸ್ಟೋರಿ ಶೇರ್ ಮಾಡಿದ್ದಾರೆ. ನಂತರ ಬಂದ ದೃಶ್ಯಗಳು ತಿಂಡಿ - ತಿನಿಸು, ಆಹಾರ ತಯಾರಿಕೆಗೆ ಸಂಬಂಧಿಸಿದ್ದಾಗಿದೆ.
ಇಂದೇ ಶೇರ್ ಆದ ವಿಡಿಯೋವೊಂದರಲ್ಲಿ ಮಗಳು ಕ್ಲಿನ್ ಕಾರಾ ಜೊತೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಬೆಂಗಳೂರಿಗೆ ಹೊರಡುವ ಮೊದಲು ಹೈದರಾಬಾದ್ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡಿದ್ದು, ಪಾಪರಾಜಿಗಳು ವಿಡಿಯೋ ಶೇರ್ ಮಾಡಿದ್ದಾರೆ. ಪವರ್ಫುಲ್ ಕಪಲ್ ಎಂದಿನಂತೆ ತಮ್ಮ ಮುದ್ದಿನ ಶ್ವಾನ ರಿದಮ್ ಜೊತೆ ಪ್ರಯಾಣ ಬೆಳೆಸಿದರು. ಅಲ್ಲದೇ ಪುತ್ರಿ ಕ್ಲಿನ್ ಕಾರಾಗಿದು ಮೊದಲ ಸಂಕ್ರಾಂತಿ. ಇನ್ನು ನಟ ಪವನ್ ಕಲ್ಯಾಣ್ ಅವರ ಮಕ್ಕಳಾದ ಅಕಿರಾ ನಂದನ್ ಮತ್ತು ಆದ್ಯ ಕೂಡ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ.