ಕರ್ನಾಟಕ

karnataka

ETV Bharat / entertainment

ವಿಡಿಯೋ: ತಂದೆಯಾದ ಖುಷಿ ವ್ಯಕ್ತಪಡಿಸಿ​, ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ರಾಮ್‌ ಚರಣ್ - Ram Charan baby

ಪತ್ನಿ ಉಪಾಸನಾ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ರಾಮ್ ಚರಣ್ ತಂದೆಯಾಗಿರುವ ಖುಷಿಯನ್ನು ಮಾಧ್ಯಮಗಳೆದುರು ವ್ಯಕ್ತಪಡಿಸಿದರು.

Ram Charan upasana
ರಾಮ್​ ಚರಣ್​​ ಉಪಾಸನಾ

By

Published : Jun 23, 2023, 4:40 PM IST

ಸೌತ್ ಸೂಪರ್ ಸ್ಟಾರ್ ರಾಮ್ ಚರಣ್ ಮನೆಯಲ್ಲೀಗ ಸಂತಸದ ವಾತಾವರಣ. ರಾಮ್ ಚರಣ್ ಮತ್ತು ಉಪಾಸನಾ ದಂಪತಿ ಮದುವೆಯಾದ 11 ವರ್ಷಗಳ ಬಳಿಕ ಪೋಷಕರಾಗಿ ಭಡ್ತಿ ಪಡೆದಿದ್ದಾರೆ. ಜೂನ್​ 20ರಂದು ಮೆಗಾಸ್ಟಾರ್ ಚಿರಂಜೀವಿ ಕುಟುಂಬಕ್ಕೆ ಅದೃಷ್ಟ ಲಕ್ಷ್ಮಿ ಎಂಟ್ರಿ ಕೊಟ್ಟಿದ್ದಾಳೆ. ಇಂದು ರಾಮ್ ಚರಣ್ ತಮ್ಮ ಪತ್ನಿ ಉಪಾಸನಾ ಅವರನ್ನು ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿ ಮನೆಗೆ ಕರೆದೊಯ್ದರು. ಅದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿ, ಮಗಳಿಗೆ ಆಶೀರ್ವದಿಸಿದ ಸರ್ವರಿಗೂ ಧನ್ಯವಾದ ಸಲ್ಲಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ರಾಮ್​ ಚರಣ್​​, ತಮ್ಮಲ್ಲಿ ಅಡಗಿರುವ ಸಂತಸವನ್ನು ವ್ಯಕ್ತಪಡಿಸಿದರು. ಮಾತುಗಳೇ ಹೊರಡುತ್ತಿಲ್ಲ, ಏನನ್ನೂ ಹೇಳಲು ಸಾಧ್ಯವಾಗುತ್ತಿಲ್ಲ. ಈ ಖುಷಿಯನ್ನು ವ್ಯಕ್ತಪಡಿಸಲು ನನ್ನಲ್ಲಿ ಪದಗಳಿಲ್ಲ ಎಂದರು. ಮಗು ಯಾರನ್ನು ಹೋಲುತ್ತದೆ ಎಂಬ ಪ್ರಶ್ನೆಗೆ ಸುಂದರವಾಗಿ ಪ್ರತಿಕ್ರಿಯಿಸಿದ ನಟ, ತಂದೆ ತಾಯಿ ಇಬ್ಬರಂತೆ ಕಾಣುತ್ತದೆ ಎಂದು ತಿಳಿಸಿದರು.

ನನ್ನ ತಂದೆಗೆ ಹೆಚ್ಚು ಸಂತೋಷವಾಗಿದೆ: ಈ ಬಗ್ಗೆ ಮನೆಯಲ್ಲಿ ಯಾರು ಹೆಚ್ಚು ಸಂತೋಷ ಪಡುತ್ತಾರೆ ಎಂದು ಕೇಳಿದಾಗ?, ಮಗಳ ಜನನದಿಂದ ಇಡೀ ಕುಟುಂಬ ಮತ್ತು ಸಂಬಂಧಿಕರು ಸಂತೋಷ ಪಟ್ಟಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ನನ್ನ ತಂದೆ ಹೆಚ್ಚು ಸಂತೋಷಪಟ್ಟಿದ್ದಾರೆ. ನನಗಿಂತ ನನ್ನ ತಂದೆ ತಾಯಿಗೆ ಹೆಚ್ಚು ಖುಷಿಯಾಗಿದೆ. ನನ್ನ ಪೋಷಕರು ಅಜ್ಜ ಅಜ್ಜಿ ಆಗುತ್ತಿರುವ ಖುಷಿಯನ್ನು ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.

ಶೀಘ್ರದಲ್ಲೇ ಪುತ್ರಿಯ ಹೆಸರು ಪ್ರಕಟ: ಶೀಘ್ರದಲ್ಲೇ ತಮ್ಮ ಮಗಳ ಹೆಸರನ್ನು ತಿಳಿಸಲಾಗುವುದು. ಪುತ್ರಿಯ ಹೆಸರು ಆದಷ್ಟು ಬೇಗ ಅಭಿಮಾನಿಗಳ ನಡುವೆ ಇರಲಿದೆ. ಶುಭ ಕೋರಿದ, ಆಶೀರ್ವದಿಸಿದ ಸರ್ವರಿಗೂ ತುಂಬು ಹೃದಯದ ಧನ್ಯವಾದಗಳು ಎಂದು ಹೇಳಿದರು.

ಇದನ್ನೂ ಓದಿ:ಈ ಭೂಮಿ ಮೇಲಿರುವ ಅತ್ಯಂತ ಕ್ರೂರವಾದ ಸ್ಥಳವದು.. ಟೈಟಾನಿಕ್​ ಮುಳುಗಿದ್ದ ಸ್ಥಳಕ್ಕೆ 33 ಬಾರಿ ಭೇಟಿ ನೀಡಿದ್ದ ಜೇಮ್ಸ್ ಕ್ಯಾಮರೂನ್

ಅಭಿಮಾನಿಗಳಿಗೆ ಧನ್ಯವಾದ: ಅಭಿಮಾನಿಗಳಿಲ್ಲದೇ ಏನೂ ಇಲ್ಲ. ತನ್ನ ಜೀವನದ ಪ್ರತಿ ಕ್ಷಣದಲ್ಲಿ ಅಭಿಮಾನಿಗಳು ಮೊದಲು ನಿಲ್ಲುತ್ತಾರೆ. ಅಭಿಮಾನಿಗಳ ಆಶೀರ್ವಾದ, ಪ್ರೀತಿ ಸದಾ ನನ್ನೊಂದಿಗಿದೆ. ಅವರು ನಮ್ಮ ಜೀವನದ ಅವಿಭಾಜ್ಯ ಅಂಗ. ಅಭಿಮಾನಿಗಳು ನನಗೆ ಮತ್ತು ನನ್ನ ಕುಟುಂಬಕ್ಕಾಗಿ ಮಾಡಿದ್ದನ್ನು ಮರೆಯಲು ಸಾಧ್ಯವಿಲ್ಲ. ಅಷ್ಟು ಪ್ರೀತಿ ಕೊಟ್ಟಿದ್ದಾರೆ. ನನ್ನ ಎಲ್ಲಾ ಅಭಿಮಾನಿಗಳ ಪ್ರೀತಿ ಮತ್ತು ಆಶೀರ್ವಾದಕ್ಕಾಗಿ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ:ಭಾರತೀಯ ಮಕ್ಕಳು ಸ್ಪೈಡರ್​ಮ್ಯಾನ್​ ವೇಷ ಧರಿಸಿದ್ರೆ, ಅಮೆರಿಕ ಯುವಕರು ನಾಟುನಾಟು ಹಾಡಿಗೆ ಹೆಜ್ಜೆ ಹಾಕುತ್ತಾರೆ: ಪ್ರಧಾನಿ ಮೋದಿ

ನಟ ರಾಮ್ ಚರಣ್ ಅವರ ವೃತ್ತಿಜೀವನದ ಬಗ್ಗೆ ಗಮನಿಸುವುದಾದರೆ, ಕೊನೆಯದಾಗಿ ಸೂಪರ್ ಹಿಟ್​ ಆರ್​ಆರ್​ಆರ್​ನಲ್ಲಿ ಕಾಣಿಸಿಕೊಂಡರು. ಈ ಚಿತ್ರದ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿ ಪಡೆಯೋ ಮೂಲಕ ಇಡೀ ಜಗತ್ತೇ ಭಾರತೀಯ ಸಿನಿಮಾ ಕಡೆ ನೋಡುವಂತಾಯ್ತು. ಕಳೆದ ಒಂದುವರೆ ವರ್ಷದಿಂದ ​ ಆರ್​ಆರ್​ಆರ್ ವಿಚಾರವಾಗಿ ಸುದ್ದಿಯಲ್ಲಿರುವ ನಟ ರಾಮ್ ಚರಣ್ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ ಗೇಮ್ ಚೇಂಜರ್. ಎಸ್.ಶಂಕರ್ ನಿರ್ದೇಶನದ ಈ ಚಿತ್ರದ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.

ABOUT THE AUTHOR

...view details