ಕರ್ನಾಟಕ

karnataka

ETV Bharat / entertainment

ರಾಮ್ ಚರಣ್ ಗ್ರ್ಯಾಂಡ್​ ಬರ್ತ್ ಡೇಯಲ್ಲಿ ಗಣ್ಯರ ಸಮಾಗಮ: ಉಪಾಸನಾ ಬೇಬಿ ಬಂಪ್ ಫೋಟೋ ವೈರಲ್ - ರಾಮ್ ಚರಣ್ ಜನ್ಮ ದಿನ

ನಿನ್ನೆ ಸಂಜೆ ಹೈದರಾಬಾದ್‌ನ ಐಷಾರಾಮಿ ಹೋಟೆಲ್‌ನಲ್ಲಿ ಆರ್​ಆರ್​ಆರ್​ ಸ್ಟಾರ್ ರಾಮ್​​ ಚರಣ್​ ಬರ್ತ್ ಡೇ ಪಾರ್ಟಿ ನಡೆದಿದ್ದು, ಸಿನಿಮಾ ಗಣ್ಯರು ಭಾಗಿ ಆಗಿದ್ದರು.

Ram Charan birthday
ರಾಮ್ ಚರಣ್ ಬರ್ತ್ ಡೇ

By

Published : Mar 28, 2023, 1:47 PM IST

ಆಸ್ಕರ್​ 2023 ಬಳಿಕ ಜಗತ್ತಿನಾದ್ಯಂತ ಜನಪ್ರಿಯತೆ ಸಂಪಾದಿಸಿರುವ ಆರ್‌ಆರ್‌ಆರ್ ಸ್ಟಾರ್ ರಾಮ್ ಚರಣ್ ಸೋಮವಾರ ಅದ್ಧೂರಿಯಾಗಿ ಜನ್ಮ ದಿನ (39) ಆಚರಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಮಾಧ್ಯಮಗಳಿಂದ ದೂರವುಳಿದು ಸದ್ದಿಲ್ಲದೇ ಹುಟ್ಟುಹಬ್ಬ ಆಚರಿಸಿಕೊಳ್ಳಲು ಇಷ್ಟಪಡುವ ನಟ ರಾಮ್ ಚರಣ್ ಈ ಬಾರಿ ಹೈದರಾಬಾದ್‌ನಲ್ಲಿ ಗ್ರ್ಯಾಂಡ್ ಪಾರ್ಟಿ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ತೆಲುಗು ಚಿತ್ರರಂಗ ಭಾಗಿಯಾಗಿತ್ತು.

ಹೈದರಾಬಾದ್‌ನ ಐಷಾರಾಮಿ ಹೋಟೆಲ್‌ನಲ್ಲಿ ನಡೆದ ಈ ಬರ್ತ್ ಡೇ ಪಾರ್ಟಿಯಲ್ಲಿ ರಾಮ್ ಚರಣ್ ಅವರು ಪತ್ನಿ ಉಪಾಸನಾ ಜೊತೆ ಸಖತ್​ ಸ್ಟೈಲಿಶ್​ ಅಗಿ ಕಾಣಿಸಿಕೊಂಡರು. ರಾಮ್​​ ಚರಣ್​ ಬ್ಲ್ಯಾಕ್​ ಆ್ಯಂಡ್​ ಬ್ಲ್ಯಾಕ್​ ಡ್ರೆಸ್​, ಪತ್ನಿ ಉಪಾಸನಾ ಬ್ಲ್ಯೂ ಮಾರ್ಡೆನ್​​ ಡ್ರೆಸ್​ನಲ್ಲಿ ಕಂಗೊಳಿಸಿದರು. ಉಪಾಸನಾ ಬೇಬಿ ಬಂಪ್ ಫೋಟೋ ಈಗ ವೈರಲ್ ಆಗುತ್ತಿದ್ದು, ಶೀಘ್ರದಲ್ಲೇ ಪೋಷಕರಾಗಲಿರುವ ಈ ದಂಪತಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರ ಹರಿದುಬಂದಿದೆ.

ಅಕ್ಕಿನೇನಿ ನಾಗಾರ್ಜುನ, ಪತ್ನಿ ಅಮಲಾ ಅಕ್ಕಿನೇನಿ ಮತ್ತು ಮಕ್ಕಳಾದ ನಾಗ ಚೈತನ್ಯ ಮತ್ತು ಅಖಿಲ್ ಈ ಸಮಾರಂಭಕ್ಕೆ ಸಾಕ್ಷಿ ಆಗಿದ್ದರು. ಅರ್ಜುನ್ ರೆಡ್ಡಿ ಸ್ಟಾರ್ ವಿಜಯ್ ದೇವರಕೊಂಡ ಮತ್ತು ಜಗಪತಿ ಬಾಬು ಕೂಡ ರಾಮ್ ಚರಣ್ ಅವರ ಹುಟ್ಟುಹಬ್ಬದ ಸಮಾರಂಭದಲ್ಲಿ ಕಾಣಿಸಿಕೊಂಡರು. ಸೂಪರ್​ ಹಿಟ್ 'ಮಗಧೀರ' ಸಹನಟಿ ಕಾಜಲ್ ಅಗರ್ವಾಲ್ ಅವರು ಪತಿ, ಉದ್ಯಮಿ ಗೌತಮ್ ಕಿಚ್ಲು ಅವರೊಂದಿಗೆ ಆಗಮಿಸಿದ್ದರು.

ರಾಮ್​​ ಚರಣ್ ಹುಟ್ಟುಹಬ್ಬ ಸಂಭ್ರಮದ ವೈರಲ್ ವಿಡಿಯೋಗಳಲ್ಲಿ ತಾರೆಯರಾದ ದಗ್ಗುಬಾಟಿ ವೆಂಕಟೇಶ್, ರಾಣಾ ದಗ್ಗುಬಾಟಿ ಕೂಡ ಕಾಣಿಸಿಕೊಂಡಿದ್ದಾರೆ. ಆರ್​ಆರ್​ಆರ್​ ಮೂಲಕ ಸದ್ದು ಮಾಡಿರುವ ಸ್ಟಾರ್​ ಡೈರೆಕ್ಟರ್​ ಎಸ್​ಎಸ್​ ರಾಜಮೌಳಿ ಕುಟುಂಬ ಮತ್ತು ಸಂಗೀತ ಸಂಯೋಜಕ ಎಂಎಂ ಕೀರವಾಣಿ ಆಗಮಿಸಿದ್ದರು. ಆದ್ರೆ ಜೂನಿಯರ್​ ಎನ್​ಟಿಆರ್​ ಈ ಸಂಭ್ರಮದ ಕ್ಷಣಗಳಿಂದ ವಂಚಿತರಾಗಿದ್ದಾರೆ. ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಸಹನಟನಿಗೆ ಶುಭ ಕೋರಿದ್ದರು. ಇನ್ನೂ ರಾಮ್ ಚರಣ್ ಅವರ ಚಿಕ್ಕಪ್ಪ ಮತ್ತು ನಟ-ನಿರ್ಮಾಪಕ ನಾಗ ಬಾಬು ಕೊನಿಡೇಲ ಕೂಡ ಈ ಪಾರ್ಟಿಯಲ್ಲಿ ಕಾಣಿಸಿಕೊಂಡರು.

ಇದನ್ನೂ ಓದಿ:39ನೇ ವರ್ಷಕ್ಕೆ ಕಾಲಿಟ್ಟ 'ಆಸ್ಕರ್‌' ವಿಜೇತ ಗ್ಲೋಬಲ್‌ ಸ್ಟಾರ್ ರಾಮ್ ಚರಣ್

ರಾಮ್​ ಚರಣ್​ ಸೋಮವಾರ 39ನೇ ವಸಂತಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಅವರ ಮುಂದಿನ ಸಿನಿಮಾದ ಟೈಟಲ್ ಅನೌನ್ಸ್​​ ಆಗಿದೆ. ಜೊತೆಗೆ ಫಸ್ಟ್​ ಲುಕ್​ ಪೋಸ್ಟರ್ ಕೂಡ​ ರಿಲೀಸ್​ ಆಗಿದೆ. 'ಗೇಮ್​ ಚೇಂಜರ್​' ಎಂಬ ಶೀರ್ಷಿಕೆ ಇದ್ದು, ಪೋಸ್ಟರ್​ನಲ್ಲಿ ರಗಡ್​ ಲುಕ್​ನಲ್ಲಿ ರಾಮ್​ ಚರಣ್​ ಕಾಣಿಸಿಕೊಂಡಿದ್ದಾರೆ. RC 15 ಎಂದು ಈ ಚಿತ್ರಕ್ಕೆ ತಾತ್ಕಾಲಿಕ ಶೀರ್ಷಿಕೆ ಇಡಲಾಗಿತ್ತು. ಈ ಚಿತ್ರದಲ್ಲಿ ಐಎಎಸ್ ಅಧಿಕಾರಿ ಆಗಿ ಕಾಣಿಸಿಕೊಳ್ಳಲಿದ್ದಾರೆ. ಕಿಯಾರಾ ಅಡ್ವಾಣಿ ಚಿತ್ರದ ನಾಯಕಿ. ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಈ ಚಿತ್ರ ತೆರೆ ಕಾಣಲಿದೆ.

ಇದನ್ನೂ ಓದಿ:ಬರ್ತ್​ಡೇ ದಿನ ರಾಮ್​ ಚರಣ್ 'ಗೇಮ್​ ಚೇಂಜರ್'​; ಫಸ್ಟ್​ ಲುಕ್ ನೋಡಿ​

ಇತ್ತೀಚೆಗೆ ನಡೆದ ವಿಶ್ವ ಪ್ರತಿಷ್ಟಿತ ಆಸ್ಕರ್​ ಪ್ರಶಸ್ತಿ ಸಮಾರಂಭದಲ್ಲಿ ಆರ್​ಆರ್​ಆರ್​ ಚಿತ್ರ ನಾಟು ನಾಟು ಹಾಡು ಮೂಲ ಗೀತೆ ವಿಭಾಗದಲ್ಲಿ ಅವಾರ್ಡ್ ಗೆದ್ದುಕೊಂಡಿದೆ. ಇದಾದ ಬಳಿಕ ರಾಮ್​ಚರಣ್​, ಜೂ. ಎನ್​ಟಿಆರ್​​, ರಾಜಮೌಳಿ ಅವರ ಖ್ಯಾತಿ ಜಗತ್ತಿನಾದ್ಯಂತ ಹೆಚ್ಚಿದೆ.

ABOUT THE AUTHOR

...view details