ಹೈದರಾಬಾದ್:ಟಾಲಿವುಡ್ ನಟ ರಾಮ್ ಚರಣ್ ಮತ್ತು ಪತ್ನಿ ಉಪಾಸನಾ ಕಾಮಿನೇನಿ ಪೋಷಕರಾಗಲಿದ್ದಾರೆ. ಮೊದಲ ಮಗುವನ್ನು ಸ್ವಾಗತಿಸಲು ನಾವು ಸಿದ್ಧರಾಗಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಅವರು ಪೋಸ್ಟ್ ಹಾಕಿದ್ದಾರೆ. ಇಂದು ಮೆಗಾ ಅಭಿಮಾನಿಗಳಿಗೆ ಸಂತಸದ ಸುದ್ದಿ. ಕಾರಣ ಈ ಮನೆಗೆ ಮತ್ತೊಬ್ಬ ವಾರಸುದಾರ ಬರಲಿದ್ದಾನೆ. ರಾಮಚರಣ್ - ಉಪಾಸನಾ ತಂದೆ-ತಾಯಿ ಆಗಲಿದ್ದಾರೆ ಎಂದು ಮೆಗಾಸ್ಟಾರ್ ಚಿರಂಜೀವಿ ಕೂಡ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.
ಹನುಮಂತಯ್ಯ ಆಶೀರ್ವಾದದಿಂದ ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಂತೋಷವಾಗುತ್ತಿದೆ. ರಾಮಚರಣ್ - ಉಪಾಸನಾ ಶೀಘ್ರದಲ್ಲೇ ತಂದೆ ತಾಯಿಯಾಗಲಿದ್ದಾರೆ. ಪ್ರೀತಿಯಿಂದ ಸುರೇಖಾ - ಚಿರಂಜೀವಿ, ಶೋಭನಾ - ಅನಿಲ್ ಕಾಮಿನೇನಿ ಎಂದು ಚಿರಂಜೀವಿ ಶೀರ್ಷಿಕೆ ಹಾಕಿಕೊಂಡಿದ್ದಾರೆ. ಬಹಳ ದಿನಗಳ ಬಳಿಕ ಈ ಖುಷಿ ವಿಚಾರ ಹಂಚಿಕೊಂಡಿದ್ದಕ್ಕೆ ಅಭಿಮಾನಿಗಳು ಸಹ ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಚೆನ್ನೈನಲ್ಲಿದ್ದಾಗ ಚರಣ್ ಮತ್ತು ಉಪಾಸನಾ ಒಂಬತ್ತನೇ ತರಗತಿವರೆಗೆ ಒಂದೇ ಶಾಲೆಯಲ್ಲಿ ಓದಿದ್ದರು. ಜೂನ್ 14, 2011 ರಂದು ಇಬ್ಬರೂ ವಿವಾಹವಾದರು. ಇದು ಹಿರಿಯರು ನಿಶ್ಚಯಿಸಿದ ಮದುವೆ. ಈ ವರ್ಷಕ್ಕೆ ಹತ್ತು ವರ್ಷಗಳು ಕಳೆದಿವೆ. ಮದುವೆಯ ನಂತರ, ಈ ಜೋಡಿಯು ಯಶಸ್ವಿ ಪ್ರಯಾಣವನ್ನು ಮುಂದುವರೆಸಿದೆ. ರಾಮ್ ಚರಣ್ ತಮ್ಮ ಸಿನಿಮಾ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದರೆ, ಉಪಾಸನಾ ಅವರು ಮೆಗಾ ಸೊಸೆಯಾಗಿ ಅಪೋಲೋ ಆಸ್ಪತ್ರೆಯ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.
ಇನ್ನು ಮುದುವೆಯಾಗಿ ಒಂದು ದಶಕದ ಬಳಿಕ ದಂಪತಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಲಿದ್ದು ಮನೆಯಲ್ಲಿ ಸದ್ಯ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಮಗು ಯಾವಾಗ ಎಂದು ಕೇಳಲಾಗುತ್ತಿದ್ದ ಪ್ರಶ್ನೆಗೆ ರಾಮಚರಣ್-ಉಪಾಸನಾ ಕೆಲವು ಕಾರಣ ನೀಡುತ್ತಿದ್ದರು. ಇತ್ತೀಚೆಗೆ ನಡೆದ ಖಾಸಗಿ ಕಾರ್ಯಕ್ರಮದಲ್ಲಿಯೂ ಉಪಾಸನಾಗೆ ಇದೇ ಪ್ರಶ್ನೆಯನ್ನು ಕೇಳಲಾಗಿತ್ತು.