ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಸದ್ಯದಲ್ಲಿಯೇ ಮದುವೆಯಾಗಲಿದ್ದಾರೆ ಎಂಬ ಗಾಳಿ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮದುವೆಯ ದಿನಾಂಕಕ್ಕೆ ಸಂಬಂಧಿಸಿದ ಸುದ್ದಿಗಳು ಕೂಡ ಸಖತ್ ಸುದ್ದು ಮಾಡುತ್ತಿದ್ದು ನೆಟಿಜನ್ಸ್, ಫ್ಯಾನ್ಸ್, ಸಿನಿ ತಾರೆಯರು ಮುಂಚಿತವಾಗಿ ವಿಶ್ ಮಾಡಲಾಂಭಿಸಿದ್ದಾರೆ. ಬಹು ದಿನಗಳಿಂದ ಪ್ರೀತಿಸುತ್ತಿರುವ ಬಾಲಿವುಡ್ ನಿರ್ಮಾಪಕ ಜಾಕಿ ಭಗ್ನಾನಿ ಜೊತೆ ರಾಕುಲ್ ಅವರು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಇದ್ದು, ಇವರ ಮದುವೆ ಫೆಬ್ರವರಿ 22 ರಂದು ಗೋವಾದ ಜನಪ್ರಿಯ ರೆಸಾರ್ಟ್‌ನಲ್ಲಿ ನಡೆಯಲಿದೆ ಎಂಬ ಮಾತು ಕೂಡ ಚಾಲ್ತಿಯಲ್ಲಿದೆ.
ಕುಟುಂಬಸ್ಥರು ಹಾಗೂ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಇವರ ಮದುವೆ ನಡೆಯಲಿದ್ದು, ಮದುವೆ ಬಳಿಕ ಸೆಲೆಬ್ರಿಟಿಗಳಿಗೆ ವಿಶೇಷ ಔತಣಕೂಟ ಕೂಡ ಏರ್ಪಡಿಸಿದ್ದಾರೆ ಎಂಬ ವದಂತಿ ಇದೆ. ಈ ಸುದ್ದಿ ಕೇಳುತ್ತಿದ್ದಂತೆ ಅಭಿಮಾನಿಗಳು ನಟಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಆದರೆ, ಈ ಬಗ್ಗೆ ರಾಕುಲ್ ಆಗಲಿ ಅಥವಾ ಜಾಕಿ ಭಗ್ನಾನಿ ಆಗಲಿ ಈವರೆಗೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಈ ಹಿಂದೆಯೂ ಇವರ ಮದುವೆಯ ಬಗ್ಗೆ ಹಲವು ಸುದ್ದಿಗಳು ಕೇಳಿ ಬಂದಿದ್ದವು. ಆದರೆ, ಸಮಯ ಬಂದಾಗ ಖಂಡಿತ ಮದುವೆಯಾಗುತ್ತೇವೆ ಎಂದು ರಾಕುಲ್ ಸ್ಪಷ್ಟಪಡಿಸುತ್ತ ಬಂದಿದ್ದರು. ಇದೀಗ ಮತ್ತೆ ನಟಿಯ ಮದುವೆ ಪ್ರಸ್ತಾಪ ಜಾಲತಾಣದಲ್ಲಿ ಹರಿದಾಡುತ್ತಿದೆ.