ಮುಂಬೈ (ಮಹಾರಾಷ್ಟ್ರ):ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ನಟನೆಯ ಅಭಿನ್ನ ಕಥಾ ಹಂದರ ಇಟ್ಟುಕೊಂಡು ಬರುತ್ತಿರುವ ಬಾಲಿವುಡ್ ಚಿತ್ರ 'ಛತ್ರಿವಾಲಿ' ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಚಿತ್ರದಲ್ಲಿ ಕಾಂಡೋಮ್ ಫ್ಯಾಕ್ಟರಿಯ ಗುಣಮಟ್ಟ ನಿಯಂತ್ರಣ ಮುಖ್ಯಸ್ಥರಾಗಿ ಅವರು ನಟಿಸಿದ್ದಾರೆ. ಚಿತ್ರದ ಫಸ್ಟ್ ಲುಕ್ ಈಗಾಗಲೇ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಇದನ್ನೂ ಓದಿ:ಕನ್ನಡದ ಮುಂದೆ ಹಿಂದೆ ಸರಿದ ಹಿಂದಿ.. ಸೆಲೆಬ್ರಿಟಿ ಸೇರಿದಂತೆ ಹಲವು ರಾಜಕೀಯ ನಾಯಕರ ಪ್ರತಿಕ್ರಿಯೆ
ಇತ್ತೀಚೆಗೆ ಬಿಡುಗಡೆಯಾದ ಅಜಯ್ ದೇವಗನ್ ನಟನೆಯ 'ರನ್‌ವೇ 34' ಚಿತ್ರದ ಸುದ್ದಿಗೋಷ್ಠಿಯಲ್ಲಿ ತಮ್ಮ ಮುಂಬರುವ ಚಿತ್ರ 'ಛತ್ರಿವಾಲಿ' ಕುರಿತು ಮುಂಬೈನಲ್ಲಿ ಮಾತನಾಡಿದ ಅವರು, ಮನರಂಜನೆಯ ಜೊತೆಗೆ ಜೊತೆಗೆ ರಕ್ಷಣಾತ್ಮಕ ಕಾಂಡೋಮ್ ಬಳಕೆಯ ಬಗ್ಗೆ ಹೇಳುವ ವಿಭಿನ್ನ ಕಥೆ ಇದಾಗಿದೆ.
ಚಿತ್ರದಲ್ಲಿ ತಕ್ಕಮಟ್ಟಿಗೆ ವಿದ್ಯಾವಂತೆಯಾದ ನಾನು, ಚಿಕ್ಕ ಊರಿನಿಂದ ಬಂದು ಕಾಂಡೋಮ್ ಪರೀಕ್ಷಕರಾಗಿ ಒಂದು ಕೆಲಸಕ್ಕೆ ಸೇರುವ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಫ್ಯಾಕ್ಟರಿಯಲ್ಲಿನ ಕೆಲಸ ಸೇರಿದಂತೆ ಆ ಹುಡುಗಿ ಜೀವನದಲ್ಲಿ ನಡೆಯುವ ಘಟನೆಯನ್ನು ಸೆರೆ ಹಿಡಿಯಲಾಗಿದೆ. ಅಲ್ಲದೇ ಆಕೆಯನ್ನು ಸಮಾಜ ಯಾವ ರೀತಿ ನೋಡುತ್ತದೆ ಅನ್ನೋದರ ಜೊತೆಗೆ ರಕ್ಷಣಾತ್ಮಕ ಕಾಂಡೋಮ್ ಬಳಕೆ ಸುತ್ತ ಈ ಚಿತ್ರಕಥೆಯನ್ನು ಸೂಕ್ಷ್ಮವಾಗಿ ಹೆಣೆಯಲಾಗಿದೆ.
ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಇಲ್ಲಿ ಯಾರಿಗೂ ಉಪದೇಶ ಮಾಡುವ ಉದ್ದೇಶ ನಮಗಿಲ್ಲ. ಮನರಂಜನೆಯ ಜೊತೆಗೆ ಜೊತೆಗೆ ಈ ಬಗ್ಗೆ ಅರಿವು ಮೂಡಿಸುವ ಕೆಲಸವಷ್ಟೇ. ಇದು ಜೀವನದ ಒಂದು ಭಾಗವಾದ ಕೌಟುಂಬಿಕ ಚಿತ್ರ. ನೀವು ಕಲ್ಪನೆ ಮಾಡಿಕೊಳ್ಳುವಂತಹ ಹಾಗೂ ಅನುಭವಿಸುವಂತಹ ಯಾವುದೇ ಕೆಟ್ಟ ದೃಶ್ಯಗಳು ಇಲ್ಲಿಲ್ಲ. ಇದು ಎಲ್ಲರಿಗೂ ಗೊತ್ತಾಗಬೇಕಾದ ವಿಷಯ. ಹಾಗಾಗಿ ನಾವು ಅದನ್ನು ಸೂಕ್ಷ್ಮವಾಗಿ ಮನರಂಜನೆಯ ರೀತಿಯಲ್ಲಿ ಹೇಳಲು ಹೊರಟಿದ್ದೇವೆ. ಯಾರಿಗೂ ಪಾಠ ಕಲಿಸಲು ಅಥವಾ ಬೋಧಿಸಲು ಬರುತ್ತಿಲ್ಲ. ಹಲವರು ಇಂತಹ ವಿಷಯವನ್ನು ತಮ್ಮ ಜೀವನದಲ್ಲಿ ಗೌಪ್ಯವಾಗಿ ಇಟ್ಟುಕೊಂಡಿರುತ್ತಾರೆ.
ಇನ್ನು ಹಲವು ಹುಡುಗಿಯರು ತಮ್ಮ ಯೌವನದಲ್ಲಿ ತೆಗೆದುಕೊಳ್ಳುವ ದುಡುಕಿನ ನಿರ್ಧಾರದಿಂದ ಏನೆಲ್ಲ ಆಗುತ್ತದೆ ಅನ್ನೋದನ್ನು ಈ ಜಾಹೀರಾತಿನ ಮೂಲಕ ಎಳೆ ಎಳೆಯಾಗಿ ತಿಳಿ ಹೇಳುವ ಕೆಲಸ ಈ ಚಿತ್ರದ್ದಾಗಿದೆ. ನಿದೇಶಕರಾದ ತೇಜಸ್ ಪ್ರಭಾ ವಿಜಯ್ ದಿಯೋಸ್ಕರ್ ಅವರು ಪಾತ್ರದ ಮೂಲಕ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ ಎಂದು ತಮ್ಮ ಪಾತ್ರದ ಬಗ್ಗೆ ವಿವರಣೆ ನೀಡಿದರು.
ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ "ಛತ್ರಿವಾಲಿ" ಕಳೆದ ವರ್ಷವೇ ಚಿತ್ರೀಕರಣ ಆರಂಭವಾಗಿತ್ತು. ಅದೇ ವರ್ಷ ಡಿಸೆಂಬರ್‌ನಲ್ಲಿಯೇ ಚಿತ್ರೀಕರಣ ಪೂರ್ಣಗೊಳಿಸಿದ್ದು ಮತ್ತು ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್‌ನಲ್ಲಿದೆ. ಈ ಚಿತ್ರದ ಜೊತೆಗೆ ನಟ ಆಯುಷ್ಮಾನ್ ಖುರಾನಾ ಅಭಿನಯದ "ಡಾಕ್ಟರ್ ಜಿ", ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗಿನ "ಥ್ಯಾಂಕ್ ಗಾಡ್" ಮತ್ತು ಅಕ್ಷಯ್ ಕುಮಾರ್ ಅವರ "ಮಿಷನ್ ಸಿಂಡ್ರೆಲ್ಲಾ" ಸೇರಿದಂತೆ ಹಲವು ಸಿನಿಮಾಗಳಿಗೆ ರಾಕುಲ್ ನಾಯಕಿ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಬೇರೆ ಬೇರೆ ಪಾತ್ರಗಳ ಮೂಲಕ ಅಭಿಮಾನಿಗಳ ಮನರಂಜನೆಗೆ ನಾನು ಸಿದ್ಧವೆಂದು ಇದೇ ವೇಳೆ ಹೇಳಿದರು.
ಇದನ್ನೂ ಓದಿ:'ದಂಗಲ್' ದಾಖಲೆ ಉಡೀಸ್ ಮಾಡಿದ 'ಕೆಜಿಎಫ್ 2': ಹಿಂದಿಯಲ್ಲಿ ಹೆಚ್ಚು ಗಳಿಸಿದ 2ನೇ ಚಿತ್ರ ಎಂಬ ಹೆಗ್ಗಳಿಕೆ!
ಇನ್ನು "ಡಾಕ್ಟರ್ ಜಿ' ಚಿತ್ರದಲ್ಲಿ ನಾನು ಸ್ತ್ರೀರೋಗತಜ್ಞನಾಗಿ ನಟಿಸಿದ್ದೇನೆ. ಇದೊಂದು ನನ್ನ ಸಿನಿ ಕರೆಯರ್ನಲ್ಲಿ ಅದ್ಭುತವಾದ ಸ್ಕ್ರಿಪ್ಟ್ ಆಗಿದೆ. ಆ ನಂತರ ಬರುವ ಅಕ್ಷಯ್ ಸರ್ ಅವರೊಂದಿಗಿನ ಚಿತ್ರ ಪಾತ್ರವೂ ಸಹ ನನ್ನನ್ನು ಬೇರೆ ಲೇವಲ್ನಲ್ಲಿ ತೆಗೆದುಕೊಂಡು ಹೋಗುವ ವಿಶ್ವಾಸವಿದೆ ಎಂದು ತಮ್ಮ ಮುಂಬರುವ ಪ್ರಾಜೆಕ್ಟ್ ಬಗ್ಗೆ ಮಾಹಿತಿ ನೀಡಿದರು.