ಕರ್ನಾಟಕ

karnataka

ETV Bharat / entertainment

Charlie 777: 'ಚಾರ್ಲಿ'ಯನ್ನು ಅಪ್ಪಿ ಒಪ್ಪಿಕೊಂಡ ದಿನ.. ಒಂದು ವರ್ಷ ಪೂರೈಸಿದ ರಕ್ಷಿತ್​ ಶೆಟ್ಟಿ ಸಿನಿಮಾ - ರಕ್ಷಿತ್​ ಶೆಟ್ಟಿ ಟ್ವೀಟ್

Charlie 777: ಸಿಂಪಲ್​ ಸ್ಟಾರ್​ ರಕ್ಷಿತ್​ ಶೆಟ್ಟಿ ಅಭಿನಯದ 'ಚಾರ್ಲಿ 777' ಸಿನಿಮಾ ಒಂದು ವರ್ಷ ಪೂರೈಸಿದೆ.

Charlie 777
ಚಾರ್ಲಿ 777

By

Published : Jun 10, 2023, 3:50 PM IST

ಅಂದು ಜೂನ್​ 10, ಇಡೀ ಕರ್ನಾಟಕಕ್ಕೆ 'ಚಾರ್ಲಿ' ಪರಿಚಯವಾದ ದಿನ. ಸಿಂಪಲ್​ ಸ್ಟಾರ್​ ರಕ್ಷಿತ್​ ಶೆಟ್ಟಿಯವರ ನಟನೆಗೆ ಕನ್ನಡಿಗರು ಮತ್ತೊಮ್ಮೆ ಮನಸೋತ ದಿನ. ಕಿರಣ್​ ರಾಜ್​ರಂತಹ ಅದ್ಭುತ ನಿರ್ದೇಶಕ ಸ್ಯಾಂಡಲ್​ವುಡ್​ಗೆ ಎಂಟ್ರಿಯಾದ ದಿನ​. ಹೌದು, ಕಳೆದ ವರ್ಷ ಇದೇ ದಿನದಂದು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿ ಧೂಳೆಬ್ಬಿಸಿದ ಚಿತ್ರ 'ಚಾರ್ಲಿ 777', ಇಂದು ಒಂದು ವರ್ಷ ಪೂರೈಸಿದ ಸಂಭ್ರಮದಲ್ಲಿದೆ.

ಯಾವುದೇ ರೀತಿಯ ಹೆವಿ ಪಂಚಿಂಗ್​ ಡೈಲಾಗ್​ಗಳಿಲ್ಲದೇ, ಫೈಟಿಂಗ್​ಗಳಿಲ್ಲದೇ ಕೇವಲ ಒಬ್ಬ ಮನುಷ್ಯ ಮತ್ತು ಶ್ವಾನದ ನಡುವಿನ ಸುಂದರ ಬಾಂಧವ್ಯವನ್ನು ಇಡೀ ಜಗತ್ತಿಗೆ ಚಾರ್ಲಿ 777 ತೋರಿಸಿಕೊಟ್ಟಿದೆ. ಬ್ಯೂಟಿಫುಲ್​ ಸಂಭಾಷಣೆಗಳು, ನಗು, ಅಳು, ಖುಷಿ ಎಲ್ಲವನ್ನೂ ಒಂದೇ ಚಿತ್ರದಲ್ಲಿ ಕಿರಣ್​ ರಾಜ್​ ಕಟ್ಟಿಕೊಟ್ಟಿದ್ದಾರೆ. ಅದನ್ನು ನಟನೆಯ ಮೂಲಕ ಪರಿಪೂರ್ಣತೆಯೊಂದಿಗೆ ಪ್ರಸ್ತುತಪಡಿಸುವಲ್ಲಿ ರಕ್ಷಿತ್​ ಶೆಟ್ಟಿ ಮತ್ತು ತಂಡ​ ಯಶಸ್ವಿಯಾಗಿದೆ.

ಕಡಿಮೆ ಬಜೆಟ್​ನಲ್ಲಿ ಚಿತ್ರೀಕರಣಗೊಂಡು ಕೋಟಿ ಲೆಕ್ಕಾಚಾರದಲ್ಲಿ ಹಣ ಬಾಚಿದ ಹೆಗ್ಗಳಿಕೆಯನ್ನು ಈ ಸಿನಿಮಾ ತನ್ನದಾಗಿಸಿಕೊಂಡಿದೆ. ಬಾಕ್ಸ್​ ಆಫೀಸ್​ನಲ್ಲಿ 150 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ. ಸಾಲು ಸಾಲು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ಚಾರ್ಲಿ 777 ಚಿತ್ರ, ಬಿಡುಗಡೆಯಾಗಿ ವರ್ಷವಾದರೂ ಪ್ರತಿಯೊಂದು ದೃಶ್ಯವು ಅಚ್ಚಳಿಯದಂತೆ ಸಿನಿ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚೊತ್ತಿದೆ.

ಸಂಗೀತ ಶೃಂಗೇರಿ, ರಾಜ್‌ ಬಿ ಶೆಟ್ಟಿ, ಡ್ಯಾನಿ, ಬಾಬಿ ಸಿಂಹ, ಬೇಬಿ ಶಾರ್ವರಿ ಅದ್ಭುತ ಅಭಿನಯ ಎಲ್ಲರನ್ನು ಮಂತ್ರಮುಗ್ಧಗೊಳಿಸಿದೆ. ಈ ಚಿತ್ರ ಇಂದು ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಸೋಷಿಯಲ್​ ಮೀಡಿಯಾದ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಚಾರ್ಲಿ 777 ಯಶಸ್ಸಿಗೆ ಕಾರಣರಾದ ಸಮಸ್ತ ಜನತೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ರಕ್ಷಿತ್​ ಶೆಟ್ಟಿ ಟ್ವೀಟ್​: "ನಮ್ಮ ಚಿತ್ರ #777Charlie ಬಿಡುಗಡೆಯಾಗಿ ಇಂದಿಗೆ 1 ವರ್ಷ! ಚಿತ್ರಕ್ಕೆ ನೀವೆಲ್ಲರೂ ನೀಡಿರುವ ಬೆಂಬಲಕ್ಕೆ, ನೀಡುತ್ತಿರುವ ಪ್ರೀತಿಗೆ ನಾವು ಸದಾ ಕೃತಜ್ಞರು. 365 ದಿನಗಳ ಅಂತ್ಯವಿಲ್ಲದ ಪ್ರೀತಿ! ಚಾರ್ಲಿ ಮತ್ತು ಧರ್ಮ ಪ್ರೇಕ್ಷಕರ ಹೃದಯವನ್ನು ಸೆರೆಹಿಡಿದು ಒಂದು ವರ್ಷವಾಗಿದೆ! ಯಾವಾಗಲೂ ನಮ್ಮನ್ನು ಬೆಂಬಲಿಸುತ್ತಿರುವುದಕ್ಕಾಗಿ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸಲು ನಮ್ಮನ್ನು ಪ್ರೇರೇಪಿಸಿದ್ದಕ್ಕಾಗಿ ನಿಮ್ಮೆಲ್ಲರಿಗೂ ಧನ್ಯವಾದಗಳು" ಎಂದು ನಟ ರಕ್ಷಿತ್​ ಶೆಟ್ಟಿ ಟ್ವೀಟ್​ ಮಾಡಿದ್ದಾರೆ.

ಚಾರ್ಲಿಯನ್ನು ಅಪ್ಪಿ ಒಪ್ಪಿಕೊಂಡ ದಿನ:ಚಾರ್ಲಿಯ ಒಂದು ವರ್ಷದ ಸಂಭ್ರಮದಲ್ಲಿರುವ ನಿರ್ದೇಶಕ ಕಿರಣ್​ ರಾಜ್​ ವಿಶೇಷ ಪೋಸ್ಟ್​ ಹಂಚಿಕೊಂಡಿದ್ದಾರೆ. ಬ್ಯೂಟಿಫುಲ್​ ಪೋಸ್ಟರ್​ ಬಹಳಷ್ಟು ಮೆಚ್ಚುಗೆಯಾಗಿದೆ. ಈಗಲೂ ನಿನ್ನ ಬಗ್ಗೆಯೇ ಮಾತನಾಡುತ್ತಾರೆ ಎಂದು ಕಿರಣ್​ ರಾಜ್​ ಹೇಳುತ್ತಿರುವಂತೆ, ನನಗೆ ಗೊತ್ತಿದೆ ಎನ್ನುತ್ತಿರುವ ಚಾರ್ಲಿ, ಈ ಸಂಭಾಷಣೆಯನ್ನು ನೋಡುತ್ತಿರುವ ಮತ್ತೊಂದು ಶ್ವಾನ.. ಹೀಗೆ ಪೋಸ್ಟರ್​ಅನ್ನು ಡಿಫರೆಂಟ್​ ಆಗಿ ಮಾಡಲಾಗಿದೆ.

ಈ ಪೋಸ್ಟರ್​ ಹಂಚಿಕೊಂಡ ಕಿರಣ್​ ರಾಜ್​, "ಚಾರ್ಲಿಯನ್ನು ಅಪ್ಪಿ ಒಪ್ಪಿಕೊಂಡ ದಿನ. ಧನ್ಯವಾದಗಳು. ಚಾರ್ಲಿ ದೇವತೆಯಾಗಿ ಪರಿವರ್ತನೆಗೊಂಡಳು. ಆದರೆ ಒಂದು ವರ್ಷದ ನಂತರವೂ ಅವಳ ಮೋಡಿ ಜೀವಂತವಾಗಿರುವುದು ಅವಳ ಪ್ರೀತಿಯ ಪ್ರೇಕ್ಷಕರು ಮತ್ತು ಅಭಿಮಾನಿಗಳಿಂದ. ನಾನು ಹಿಂತಿರುಗಿ ನೋಡಿದಾಗ ಚಾರ್ಲಿ 777 ಕನಸಿನ ತಯಾರಿಕೆಯಲ್ಲಿ ವ್ಯಯಿಸಿದ ಸಮಯ ಮತ್ತು ಶಕ್ತಿಯನ್ನು ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತೇನೆ. ನೀವು ಈ ಪ್ರಯಾಣವನ್ನು ನಿಜವಾಗಿಯೂ ಸಾರ್ಥಕಗೊಳಿಸಿದ್ದೀರಿ. ಪ್ರೀತಿ ಮತ್ತು ನಿಮ್ಮೆಲ್ಲರಿಗೂ ಮಾತ್ರ ಪ್ರೀತಿ" ಎಂದು ಕ್ಯಾಪ್ಶನ್​ ಬರೆದಿದ್ದಾರೆ. ಇನ್ನು ನಟಿ ಸಂಗೀತ ಶೃಂಗೇರಿ ಸಿನಿಮಾದ ಮ್ಯೂಸಿಕ್​ಗೆ ಡ್ಯಾನ್ಸ್​ ಮಾಡಿರುವ ವಿಡಿಯೋ ಶೇರ್​ ಮಾಡಿದ್ದು, ಚಾರ್ಲಿ 777 ಒಂದು ವರ್ಷದ ಸಂಭ್ರಮ ಎಂದು ಶೀರ್ಷಿಕೆ ನೀಡಿದ್ದಾರೆ.

ಇದನ್ನೂ ಓದಿ:Adipurush: ರಣ್​ಬೀರ್ ಕಪೂರ್ ಬೆನ್ನಲ್ಲೇ ಮಕ್ಕಳಿಗಾಗಿ 10 ಸಾವಿರ ಟಿಕೆಟ್ ಖರೀದಿಸಿದ ​ರಾಮ್ ಚರಣ್

ABOUT THE AUTHOR

...view details