ಕರ್ನಾಟಕ

karnataka

ETV Bharat / entertainment

ಸಿಂಗಲ್ ಸುಂದರನಾಗಿ ಗಮನ ಸೆಳೆಯುತ್ತಿರುವ ನವರಸ ನಾಯಕ ಜಗ್ಗೇಶ್ - ನವರಸ ನಾಯಕ ಜಗ್ಗೇಶ್

ಸಿಂಗಲ್​ ಸುಂದರ ಹಾಡನ್ನು ನಟ ರಕ್ಷಿತ್​ ಶೆಟ್ಟಿ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.

Single Sundara song of Raghavendra Stores film
ಸಿಂಗಲ್ ಸುಂದರನಾಗಿ ಗಮನ ಸೆಳೆಯುತ್ತಿದ್ದಾರೆ ನವರಸ ನಾಯಕ ಜಗ್ಗೇಶ್

By

Published : Apr 12, 2023, 8:01 PM IST

ನವರಸ ನಾಯಕ ಜಗ್ಗೇಶ್​ ನಾಯಕನಾಗಿ ಅಭಿನಯಿಸಿರುವ 'ರಾಘವೇಂದ್ರ ಸ್ಟೋರ್ಸ್ ಸಿನ್ಸ್ 1972' ಸಿನಿಮಾದ ಮೊದಲ ಹಾಡು 'ಸಿಂಗಲ್ ಸುಂದರ ಯಾವಾಗ ಹಾಕ್ತ್ಯಾ ಉಂಗುರ..' ಇಂದು ಬಿಡುಗಡೆಯಾಗಿದೆ. ನಟ, ನಿರ್ದೇಶಕ ರಕ್ಷಿತ್​ ಶೆಟ್ಟಿ ಸಾಮಾಜಿಕ ಜಾಲತಾಣದ ಮೂಲಕ ಹಾಡನ್ನು ಲಾಂಚ್​ ಮಾಡಿದರು. ಬಳಿಕ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ರಾಮಚಾರಿ, ರಾಜಕುಮಾರ, ಯುವರತ್ನದಂತಹ ಸಿನಿಮಾಗಳ ನಿರ್ದೇಶಕ ಹಾಗೂ ಈಗ ರಾಜ್​ ಕುಟುಂಬದ ಕುಡಿ ಯುವರಾಜ್​ ಕುಮಾರ್​ಗೆ 'ಯುವ' ಸಿನಿಮಾ ನಿರ್ದೇಶನ ಮಾಡುತ್ತಿರುವ ಸಂತೋಷ್​ ಆನಂದ್​ ರಾಮ್​ ಈ ಸಿನಿಮಾಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಹಾಸ್ಯಮಿಶ್ರಿತ ಕೌಟುಂಬಿಕ ಚಿತ್ರ ರಾಘವೇಂದ್ರ ಸ್ಟೋರ್ಸ್​ ಸಿನಿಮಾದ ಮೊದಲ ಹಾಡು ಬಿಡುಗಡೆಯಾದ ಕ್ಷಣದಿಂದಲೇ ಸಖತ್​ ಸೌಂಡ್​ ಮಾಡುತ್ತಿದೆ. ಹೊಂಬಾಳೆ ಸಂಸ್ಥೆ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಸಂಸ್ಥೆಯ 12ನೇ ಸಿನಿಮಾ ಇದು.

ಪೋಸ್ಟರ್​​ನಿಂದಲೇ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡಿದ ರಾಘವೇಂದ್ರ ಸ್ಟೋರ್ಸ್‌ ಸಿನಿಮಾದಲ್ಲಿ ಜಗ್ಗೇಶ್, ಹೋಟೆಲ್ ಮಾಲೀಕನ ಜೊತೆಗೆ ಬ್ರಹ್ಮಚಾರಿ ಅಡುಗೆ ಭಟ್ಟನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಯಸ್ಸು ಕೈ ಜಾರಿದೆ, ಕೈ ಹಿಡಿಯಲು ಒಂದು ವಧು ಬೇಕಿದೆ ಎಂಬ ಹಾಡಿನ ತಾತ್ಪರ್ಯ ಹೊಂದಿದ್ದು, ಚಿತ್ರದ ಸಿಂಗಲ್ ಸುಂದರ ಹಾಡು ಜಗ್ಗೇಶ್ ತರಹದ ಸಾಕಷ್ಟು ಬ್ರಹ್ಮಚಾರಿಗಳ ಕಷ್ಟ ಸುಖದ ಕಥೆ ಹೇಳುತ್ತಂತೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಬರೆದಿರುವ ಪದಗಳಿಗೆ ಗಾಯಕರಾದ ವಿಜಯ್ ಪ್ರಕಾಶ್ ಹಾಗು ನವೀನ್ ಸಜ್ಜು ಧ್ವನಿಯಾಗಿದ್ದು, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮೆಲೋಡಿ ಟ್ಯೂನ್ಸ್ ಹಾಕಿದ್ದಾರೆ.

ಒಂದು ಮಂಟಪದ ಬ್ಯಾಕ್‌ಟ್ರಾಪ್‌ನಲ್ಲಿ ಈ ಹಾಡನ್ನು ಚಿತ್ರೀಕರಣ ಮಾಡಿದ್ದು, ನೋಡಲು ಹಾಗು ಕೇಳಲು ಹಾಡು ಸುಂದರವಾಗಿ ಮೂಡಿ ಬಂದಿದೆ. ಜಗ್ಗೇಶ್ ಜೊತೆ ಕಲಾವಿದರಾದ ರವಿಶಂಕರ್ ಗೌಡ, ಮಿತ್ರ ಸೇರಿದಂತೆ ಇನ್ನೂ ಹಲವರು ಕಾಣಿಸಿಕೊಂಡಿದ್ದಾರೆ. ತಮಾಷೆಯಾಗಿಯೇ ಬ್ರಹ್ಮಚಾರಿಯೊಬ್ಬನ ವ್ಯಥೆಯನ್ನು ಹಾಡಿನಲ್ಲಿ ಹೇಳಲಾಗಿದೆ.

ನವರಸ ನಾಯಕ ಜಗ್ಗೇಶ್ ಅವರಿಗೆ ಜೋಡಿಯಾಗಿ ಸಿಂಪಲ್ಲಾಗ್ ಒಂದು ಲವ್ ಸ್ಟೋರಿ, ಕಿರಗೂರಿನ ಗಯ್ಯಾಳಿಗಳು ಸಿನಿಮಾಗಳ ಮೂಲಕ ಭರವಸೆಯ ನಟಿಯಾಗಿ ಬೆಳೆದಿರುವ ನಟಿ ಶ್ವೇತಾ ಶ್ರೀವಾತ್ಸವ್ ಕಾಣಿಸಿಕೊಂಡಿದ್ದಾರೆ. ಇದೇ 17 ರಂದು ರಾಘವೇಂದ್ರ ಸ್ಟೋರ್ಸ್ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿ, 28ರಂದು ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಎಲೆಕ್ಷನ್ ಸಮಯದಲ್ಲಿ ರಾಘವೇಂದ್ರ ಸ್ಟೋರ್ಸ್ ಮಾಲೀಕ ಕಮ್ ಅಡುಗೆ ಭಟ್ಟನಾಗಿ ಜಗ್ಗೇಶ್ ಪ್ರೇಕ್ಷಕರಿಗೆ ಯಾವ ರೀತಿ ಇಷ್ಟ ಆಗ್ತಾರೆ ಅನ್ನೋದನ್ನು ಕಾದು ನೋಡೋಣ.

ಇದನ್ನೂ ಓದಿ:ಶಿವಾಜಿ ಸುರತ್ಕಲ್ 2: ಪ್ರೇಕ್ಷಕರ ಮನ‌‌ಗೆಲ್ಲಲು ಸಜ್ಜಾಗಿದ್ದಾರೆ ರಮೇಶ್ ಅರವಿಂದ್

ABOUT THE AUTHOR

...view details