ಕರ್ನಾಟಕ

karnataka

ETV Bharat / entertainment

ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಬಿಡುಗಡೆ ದಿನಾಂಕ ಪ್ರಕಟ.. - ಕೆಜಿಎಫ್​2

ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಸಿನಿಮಾ '777 ಚಾರ್ಲಿ' ಜೂನ್ 10 ರಂದು ಬಿಡುಗಡೆಗೆ ಆಗಲಿದೆ.

777 ಚಾರ್ಲಿ ಬಿಡುಗಡೆ ದಿನಾಂಕ
777 ಚಾರ್ಲಿ ಬಿಡುಗಡೆ ದಿನಾಂಕ

By

Published : Apr 10, 2022, 11:51 AM IST

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಸಿನಿಮಾ '777 ಚಾರ್ಲಿ' ಬಿಡುಗಡೆಗೆ ಕೊನೆಗೂ ಡೇಟ್ ಫಿಕ್ಸ್ ಆಗಿದೆ. ಜೂನ್ 10 ರಂದು ಐದು ಭಾಷೆಗಳಲ್ಲಿ ಏಕಕಾಲಕ್ಕೆ ಜಗತ್ತಿನಾದ್ಯಂತ ಚಾರ್ಲಿ ಬಿಡುಗಡೆ ಮಾಡುವುದಾಗಿ ಚಿತ್ರ ತಂಡ ಪ್ರಕಟಿಸಿದೆ. ಕೆಆರ್​ಜಿ ಸ್ಟುಡಿಯೋ ಅಡಿಯಲ್ಲಿ ಚಿತ್ರ ರಿಲೀಸ್ ಆಗಲಿದೆ. ಸದ್ಯ ಪೋಸ್ಟರ್, ಹಾಡು ಹಾಗೂ ಮೇಕಿಂಗ್​​ನಿಂದ ಗಮನ ಸೆಳೆದಿರುವ ಚಾರ್ಲಿ, ಸೆನ್ಸಾರ್​​ನಲ್ಲಿ ಪಾಸ್​​ ಆಗಿದ್ದು, ಯು/ಎ ಸರ್ಟಿಫಿಕೆಟ್ ಪಡೆದುಕೊಂಡಿದೆ.

ಒಬ್ಬ ಮನುಷ್ಯನ ಬಾಳಲ್ಲಿ ಚಾರ್ಲಿ ಎಂಬ ನಾಯಿಯ ಆಗಮನದಿಂದ ಏನೆಲ್ಲ ಆಗುತ್ತೆ ಅನ್ನೋದು ಈ '777 ಚಾರ್ಲಿ' ಸಿನಿಮಾ ಸ್ಟೋರಿ. ಕಳೆದ ಎರಡು ವರ್ಷಗಳಿಂದ ಚಿತ್ರೀಕರಣ ಮುಗಿಸಿರುವ ಚಿತ್ರವು ಟೀಸರ್ ಹಾಗೂ ಹಾಡುಗಳಿಂದ ಸಖತ್ ಸದ್ದು ಮಾಡುತ್ತಿದೆ. ರಕ್ಷಿತ್ ಶೆಟ್ಟಿ ಜೊತೆ ಸಂಗೀತಾ ಶೃಂಗೇರಿ ತೆರೆ ಹಂಚಿಕೊಂಡಿದ್ದಾರೆ. ರಾಜ್‌ ಬಿ. ಶೆಟ್ಟಿ, ಡ್ಯಾನಿಶ್‌ ಸೇಠ್, ಬಾಬಿ ಸಿಂಹ, ಬೇಬಿ ಶಾರ್ವರಿ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ಬಾಬಿ ಸಿಂಹ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಯುವ ನಿರ್ದೇಶಕ ಕಿರಣ್‌ ರಾಜ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ '777 ಚಾರ್ಲಿ' ಚಿತ್ರದಲ್ಲಿ ರಕ್ಷಿತ್‌ ಶೆಟ್ಟಿಯ ಜೊತೆಗೆ ಲ್ಯಾಬ್ರಡಾರ್‌ ನಾಯಿ ಪೂರ್ಣ ಪ್ರಮಾಣದ ಪಾತ್ರದಲ್ಲಿ ಕಾಣಿಸಿಕೊಂಡಿದೆ. ಚಿತ್ರವು ಪರಮ್ ಸ್ಟುಡಿಯೋಸ್ ಮತ್ತು ಪುಷ್ಕರ್ ಫಿಲ್ಮ್ ಬ್ಯಾನರ್​​ನಲ್ಲಿ ನಿರ್ಮಾಣ ಆಗುತ್ತಿದ್ದು, ಕಿರಣ್ ರಾಜ್ ಆ್ಯಕ್ಷನ್ ಹೇಳುತ್ತಿದ್ದಾರೆ.

ಈ ಚಿತ್ರವು 5 ಭಾಷೆಗಳಲ್ಲಿ ನಿರ್ಮಾಣ ಆಗಿದ್ದು, ನೊಬಿನ್ ಪೌಲ್ ಸಂಗೀತ ಹಾಗೂ ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ. ಮನುಷ್ಯ ಮತ್ತು ಶ್ವಾನದ ನಡುವಿನ ಬಾಂಧವ್ಯ ಹೊಂದಿರುವ '777 ಚಾರ್ಲಿ' ಸಿನಿಮಾ ಮೇಲೆ ಅಭಿಮಾನಗಳು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

(ಇದನ್ನೂ ಓದಿ: ಚಿತ್ರತಂಡದ 8 ವರ್ಷಗಳ ಶ್ರಮ ಪುನೀತ್​​ ರಾಜ್​ಕುಮಾರ್​ಗೆ ಅರ್ಪಣೆ: ಡೈರೆಕ್ಟರ್​ ಪ್ರಶಾಂತ್​ ನೀಲ್)

ABOUT THE AUTHOR

...view details