ಕೆಜಿಎಫ್ ಸಿನಿಮಾಗಳು ದೊಡ್ಡ ಮಟ್ಟದ ಸಕ್ಸಸ್ ಕಂಡಿದ್ದು ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವುದು? ಯಾವ ನಿರ್ದೇಶಕನ ಜೊತೆ ಸಿನಿಮಾ ಮಾಡಲಿದ್ದಾರೆ? ಎಂಬ ಬಗ್ಗೆ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಚರ್ಚೆ ಶುರುವಾಗಿದೆ. ಜೊತೆಗೆ ಅಭಿಮಾನಿಗಳಲ್ಲೂ ಕಾತುರವಿದೆ. ಆದರೆ ರಾಕಿಂಗ್ ಸ್ಟಾರ್ ಮಾತ್ರ ಫ್ಯಾಮಿಲಿ ಜೊತೆ ಸಖತ್ ಎಂಜಾಯ್ ಮಾಡುತ್ತಿದ್ದಾರೆ.
ಮುದ್ದಿನ ಮಗಳು ಐರಾ ಜೊತೆ ರಾಕಿಂಗ್ ಸ್ಟಾರ್ ತುಂಟಾಟ - ಈ ವಿಡಿಯೋ ಸಖತ್ ಕ್ಯೂಟ್
ರಾಕಿಂಗ್ ಸ್ಟಾರ್ ಯಶ್ ಮುದ್ದಿನ ಮಗಳು ಐರಾ ಜೊತೆಗಿನ ತುಂಟಾಟದ ವಿಡಿಯೋ ಹಂಚಿಕೊಂಡಿದ್ದಾರೆ.
ಮುದ್ದಿನ ಮಗಳು ಐರಾ ಜೊತೆ ರಾಕಿಂಗ್ ಸ್ಟಾರ್ ತುಂಟಾಟ
ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಕುಟುಂಬಸ್ಥರೊಂದಿಗೆ ಕಳೆದ ಸುಂದರ ಸಮಯದ ವಿಡಿಯೋ, ಫೋಟೋ ಶೇರ್ ಮಾಡುವ ಅವರು ಇದೀಗ ಮುದ್ದಿನ ಮಗಳು ಐರಾ ಜೊತೆಗಿನ ತುಂಟಾಟದ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಖತ್ ಕ್ಯೂಟ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ಅಪ್ಪ ಮಗಳ ವಿಡಿಯೋ ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
Last Updated : Sep 27, 2022, 5:29 PM IST