ನವದೆಹಲಿ:ಬಾಲಿವುಡ್ ನಟಿ ರಾಖಿ ಸಾವಂತ್ ಮದುವೆ ಸುದ್ದಿ ಸದ್ಯ ಟ್ರೆಂಡಿಂಗ್ನಲ್ಲಿದೆ. ಮೈಸೂರು ಮೂಲದ ಉದ್ಯಮಿ ಆದಿಲ್ ಖಾನ್ ಜೊತೆ ದಾಂಪತ್ಯಕ್ಕೆ ಕಾಲಿಟ್ಟಿರುವ ಫೋಟೋಗಳು, ವಿಡಿಯೋಗಳನ್ನು ಖುದ್ದಾಗಿ ರಾಖಿ ಸಾವಂತ್ ಹಂಚಿಕೊಂಡಿದ್ದಾರೆ. ಆದರೆ ಈ ಬಗ್ಗೆ ಆದಿಲ್ ಖಾನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಈ ಮದುವೆ ನಿಜವೋ..ಸುಳ್ಳೋ? ಎಂಬ ಕುತೂಹಲ ಜನರಲ್ಲಿದೆ.
ಇವೆಲ್ಲದಕ್ಕೂ ತೆರೆ ಎಳೆದಿರುವ ರಾಖಿ ಸಾವಂತ್ ವಕೀಲೆ ಫಲ್ಗುಣಿ ಬ್ರಹ್ಮಭಟ್, ಈ ವಿವಾಹ ಸಂಪೂರ್ಣವಾಗಿ ಕಾನೂನುಬದ್ಧವಾಗಿ ನಡೆದಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಅವರು, 'ಮೊದಲನೆಯದಾಗಿ ಇದು ನಕಲಿ ಮದುವೆಯಲ್ಲ. ಅವರಿಬ್ಬರ ನಿಕ್ಕಾಹ್(ಮದುವೆ) ಶಾಸ್ತ್ರ ಸಂಪ್ರದಾಯದಂತೆ ನಡೆದಿದೆ. ರಾಖಿ ಮತ್ತು ಆದಿಲ್ ಅವರು ಮುನ್ಸಿಪಲ್ ಕಾರ್ಪೊರೇಶನ್ನಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ, ಕಚೇರಿಗೆ ತೆರಳಿ ತಮ್ಮ ಮದುವೆಯನ್ನು ನೋಂದಾಯಿಸಿಕೊಂಡಿದ್ದಾರೆ. ಬಳಿಕ ಮದುವೆಯ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದಾರೆ. ಆದರೆ ಆದಿಲ್ ಯಾಕೆ ಮದುವೆ ಬಗ್ಗೆ ಮಾತನಾಡಲು ಹಿಂದೆ ಸರಿಯುತ್ತಿದ್ದಾನೆ ಎಂಬುದು ತಿಳಿಯುತ್ತಿಲ್ಲ. ಬಹುಶಃ ಆತನ ವೈಯಕ್ತಿಕ ಕಾರಣಗಳಿಂದ ಆಗಿರಬಹುದು. ಅಲ್ಲದೇ ರಾಖಿ ಹಂಚಿಕೊಂಡಿರುವ ಮದುವೆ ಫೋಟೋ ಮತ್ತು ವಿಡಿಯೋಗಳು ಯಾವುದು ನಕಲಿ ಅಲ್ಲ. ಇದು ನೂರಕ್ಕೆ ನೂರು ಕಾನೂನುಬದ್ಧ ವಿವಾಹವಾಗಿದೆ' ಎಂದು ಸ್ಪಷ್ಟಪಡಿಸಿದ್ದಾರೆ.
'ರಾಖಿ ಮತ್ತು ಆದಿಲ್ 2022 ರ ಮೇ 29 ರಂದು ವಿವಾಹವಾಗಿದ್ದಾರೆ. ವೈಯಕ್ತಿಕ ಕಾರಣಗಳಿಗಾಗಿ ಈ ವಿಷಯವನ್ನು ಅವರು ಬಹಿರಂಗಪಡಿಸಿರಲಿಲ್ಲ. ಅಲ್ಲದೇ ರಾಖಿ ತನ್ನ ಮದುವೆಗಾಗಿ ಇಸ್ಲಾಂಗೆ ಮತಾಂತರಗೊಂಡಿದ್ದಾಳೆ. ಮದುವೆ ನಂತರ ಆಕೆಯ ಹೆಸರು ರಾಖಿ ಸಾವಂತ್ ಫಾತಿಮಾ ಎಂಬುದಾಗಿ ಬದಲಾಗಿಯಿಸಲಾಗಿದೆ' ಎಂದು ವಕೀಲೆ ತಿಳಿಸಿದರು.
ಇದನ್ನೂ ಓದಿ:'ಪ್ರೇಮಿಗಳ ದಿನ'ದ ಸಂದರ್ಭದಲ್ಲೇ ರಾಖಿ ಸಾವಂತ್ ದಾಂಪತ್ಯ ಅಂತ್ಯ
ರಾಖಿ ತನ್ನ ಮದುವೆಯ ಬಗ್ಗೆ ಮುಕ್ತವಾಗಿ ಹೇಳಿದ್ದಾರೆ. ಆದರೆ ಆದಿಲ್ ಈ ಬಗ್ಗೆ ಮಾತನಾಡಲು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ರಾಖಿಯ ಮುಂದಿನ ನಿರ್ಧಾರವೇನು? ಎಂಬ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ನಾನು ನಿನ್ನೆಯಷ್ಟೇ ರಾಖಿಯೊಂದಿಗೆ ಮಾತನಾಡಿದ್ದೇನೆ. ಆಕೆಯ ತಾಯಿಯ ಆರೋಗ್ಯ ತುಂಬಾ ಕ್ಷೀಣಿಸಿದೆ. ಆದ್ದರಿಂದ ರಾಖಿ ಮಾನಸಿಕವಾಗಿ ಕುಗ್ಗಿದ್ದಾರೆ. ಈಗವರಿಗೆ ತಮ್ಮ ತಾಯಿ ಗುಣಮುಖರಾಗುವುದೇ ಮೊದಲ ಆದ್ಯತೆಯಾಗಿದೆ. ಅವಳು ಆದಿಲ್ ಬಗ್ಗೆ ನನ್ನಲ್ಲಿ ಏನನ್ನೂ ಮಾತನಾಡಿಲ್ಲ' ಎಂದು ಹೇಳಿದರು.
ಮದುವೆ ಫೋಟೋ ಹಂಚಿಕೊಂಡ ರಾಖಿ: ಆದಿಲ್ ಖಾನ್ ಜೊತೆ ಬಹಳ ಕಾಲ ರಾಖಿ ಸಾವಂತ್ ಡೇಟಿಂಗ್ನಲ್ಲಿದ್ದರು. ಇದೇ ವಿಷಯವಾಗಿ ಹಲವು ಬಾರಿ ಇವರಿಬ್ಬರು ಸುದ್ದಿಯಾಗುತ್ತಲೇ ಇದ್ದರು. ಆದರೆ ಈ ಜೋಡಿ ತಮ್ಮ ಮದುವೆ ವಿಷಯವನ್ನು ಮಾತ್ರ ರಹಸ್ಯವಾಗಿರಿಸಿದ್ದರು. ಇತ್ತೀಚೆಗೆ ಕೆಲವು ದಿನಗಳ ಹಿಂದೆ ರಾಖಿ ಸ್ವತಃ ಅವರ ಮದುವೆ ಫೋಟೋಗಳು ಮತ್ತು ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಅಲ್ಲದೇ ಶೀರ್ಷಿಕೆಯಲ್ಲಿ 'ಅಂತಿಮವಾಗಿ ಏಳು ತಿಂಗಳ ನಂತರ ತುಂಬಾ ಸಂತೋಷದಿಂದ ನನ್ನ ಮದುವೆಯನ್ನು ಬಹಿರಂಗಪಡಿಸುತ್ತಿದ್ದೇನೆ.' ಎಂದು ಬರೆದುಕೊಂಡಿದ್ದರು.
ರಿತೇಶ್ ಜೊತೆ ವಿವಾಹವಾಗಿದ್ದ ರಾಖಿ: ರಿಯಾಲಿಟಿ ಶೋ ಆಗಿರುವ ಹಿಂದಿಯ ಬಿಗ್ ಬಾಸ್ ಸೀಸನ್ 15ರ ಸಮಯದಲ್ಲಿ ಬಿಗ್ ಬಾಸ್ ಸ್ಟಾರ್ ರಿತೇಶ್ ಅವರನ್ನು ತನ್ನ ಪತಿ ಎಂದು ಖುದ್ದು ರಾಖಿ ಪರಿಚಯಿಸಿಕೊಂಡಿದ್ದರು. ಮದುವೆಯಾದ ಬಳಿಕ ರಾಖಿ ಸಾವಂತ್ ಮತ್ತು ರಿತೇಶ್ ಜಂಟಿಯಾಗಿ ಬಿಗ್ ಬಾಸ್ ಸೀಸನ್ 15ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಪಾಲ್ಗೊಂಡಿದ್ದರು. ಈ ರಿಯಾಲಿಟಿ ಶೋ ಮುಕ್ತಾಯವಾದ ಬಳಿಕ ನಾವು ಜಸ್ಟ್ ಫ್ರೆಂಡ್ಸ್ ಎಂದು ರಾಖಿ ಹೇಳಿಕೆ ಕೊಟ್ಟಿದ್ದರು. ಇದಾದ ನಂತರ ಕಳೆದ ಫೆಬ್ರವರಿಯಲ್ಲಿ ರಿತೇಶ್ರಿಂದ ಬೇರ್ಪಡುತ್ತಿರುವುದಾಗಿ ಸಾವಂತ್ ಘೋಷಿಸಿದ್ದರು.
ಇದನ್ನೂ ಓದಿ:ಮೈಸೂರಿನ ಆದಿಲ್ ಜೊತೆ ಗೌಪ್ಯ ಮದುವೆಯಾದ್ರಾ ರಾಖಿ ಸಾವಂತ್?