ತಿರುಪತಿ (ಆಂಧ್ರಪ್ರದೇಶ): ತಿರುಮಲದ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಸೂಪರ್ ಸ್ಟಾರ್ ರಜಿನಿಕಾಂತ್ ಗುರುವಾರ ಪೂಜೆ ಸಲ್ಲಿಸಿದರು. ಮಗಳು ಐಶ್ವರ್ಯಾ ಜೊತೆಯಲ್ಲಿ ನಟ ಬೆಳಗಿನ ಪೂಜಾ ಸೇವೆಯಲ್ಲಿ ಪಾಲ್ಗೊಂಡರು. ಪುರೋಹಿತರ ಮಾರ್ಗದರ್ಶನದಲ್ಲಿ ವಿವಿಧ ವಿಧಿ ವಿಧಾನಗಳನ್ನು ನೆರವೇರಿಸಿದರು. ನಂತರ ರಂಗನಾಯಕುಲ ಮಂಟಪದಲ್ಲಿ ಅರ್ಚಕರು ರಜಿನಿಕಾಂತ್ಗೆ ವೇದಾಶೀರ್ವಚನ ನೀಡಲಾಯಿತು.
ಇದಕ್ಕೂ ಮುನ್ನ, ದೇವಾಲಯದ ಮುಖ್ಯ ದ್ವಾರದಲ್ಲಿ ರಜಿನಿಕಾಂತ್ ಮತ್ತು ಐಶ್ವರ್ಯಾ ಅವರನ್ನು ಟಿಟಿಡಿ ಅಧಿಕಾರಿಗಳು ಸ್ವಾಗತಿಸಿದರು. ತಂದೆ - ಮಗಳಿಬ್ಬರು ಬುಧವಾರ ತಿರುಮಲಕ್ಕೆ ಆಗಮಿಸಿದ್ದು, ರಾತ್ರಿ ವಿರಾಮದ ನಂತರ ಮುಂಜಾನೆ ದರ್ಶನ ಪಡೆದರು.
ರಜನಿಕಾಂತ್ ಅವರು 72 ನೇ ವರ್ಷಕ್ಕೆ ಕಾಲಿಟ್ಟ ಮೂರು ದಿನಗಳ ನಂತರ ದೇವಾಲಯಕ್ಕೆ ಭೇಟಿ ನೀಡಿದರು. ಮಗಳ ಜೊತೆಗೆ ಅವರು ದೇವಾಲಯಕ್ಕೆ ಭೇಟಿ ನೀಡಿದ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಇನ್ನೂ ಸೂಪರ್ಸ್ಟಾರ್ ಕಡಪದಲ್ಲಿರುವ ಪೆದ್ದಾ ದರ್ಗಾಕ್ಕೆ ಭೇಟಿ ನೀಡಲಿದ್ದಾರೆ. ಅವರು ತಮ್ಮ ಪುತ್ರಿಯೊಂದಿಗೆ ಪೆದ್ದಾ ದರ್ಗಾ ಎಂದು ಕರೆಯಲ್ಪಡುವ ಅಮೀನ್ ಪೀರ್ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.