ನೆಲ್ಸನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಜೈಲರ್' ಸಿನಿಮಾದ ಚಿತ್ರೀಕರಣ ಮುಗಿದಿದೆ. ಮುಂದಿನ ತಿಂಗಳು ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ. ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಸಿನಿಮಾಗೆ ನಟಿ ತಮನ್ನಾ ಭಾಟಿಯಾ ನಾಯಕಿ. ಮೆಗಾಸ್ಟಾರ್ ಜೊತೆ ತೆರೆ ಹಂಚಿಕೊಂಡಿರುವ ಬಗ್ಗೆ ತಮನ್ನಾ ಸಂತಸ ವ್ಯಕ್ತಪಡಿಸಿದ್ದಾರೆ. "ಹಿರಿಯ ನಟರೊಂದಿಗೆ ಕೆಲಸ ಮಾಡುವ ಅವಕಾಶ ಪಡೆದಿರುವುದು ಅದೃಷ್ಟ ಮತ್ತು ಆಶೀರ್ವಾದ" ಎಂದಿದ್ದಾರೆ.
ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಅವರು, "ರಜನಿಕಾಂತ್ ಅವರ ಜೊತೆ ಕೆಲಸ ಮಾಡುವುದು ಒಂದು ಕನಸಾಗಿತ್ತು, ಅದು ಈಗ ನನಸಾಗಿದೆ. ನಾನು ಜೈಲರ್ ಸೆಟ್ನಲ್ಲಿ ಕಳೆದ ದಿನಗಳನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ. ಅವರು ನನಗೆ ಆಧ್ಯಾತ್ಮಿಕ ಪ್ರಯಾಣದ ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು. ಅದು ತುಂಬಾ ಚಿಂತನಶೀಲ ಗಿಫ್ಟ್. ಅವರು ಆ ಪುಸ್ತಕದಲ್ಲಿ ತಮ್ಮ ಹಸ್ತಾಕ್ಷರ ಕೂಡ ಹಾಕಿದ್ದರು" ಎಂದು ಸಂತಸ ವ್ಯಕ್ತಪಡಿಸಿದರು.
ಜೈಲರ್ ಸಿನಿಮಾ ಆಗಸ್ಟ್ 10ರಂದು ತೆರೆ ಕಾಣಲಿದೆ. ತಮನ್ನಾ ತನ್ನ ವೆಬ್ ಸರಣಿ 'ಜೀ ಕರ್ದಾ' ಬಿಡುಗಡೆಗೆ ಸಜ್ಜಾಗಿದ್ದಾರೆ. ಈ ಸರಣಿಯನ್ನು ದಿನೇಶ್ ವಿಜನ್ ಅವರ ಮ್ಯಾಡಾಕ್ ಫಿಲ್ಮ್ಸ್ ನಿರ್ಮಿಸಿದೆ. ಅರುಣಿಮಾ ಶರ್ಮಾ ನಿರ್ದೇಶಿಸಿದ್ದಾರೆ. ಹುಸೇನ್ ದಲಾಲ್ ಮತ್ತು ಅಬ್ಬಾಸ್ ದಲಾಲ್ ಕಥೆ ಬರೆದಿದ್ದಾರೆ. ಆಶಿಮ್ ಗುಲಾಟಿ, ಸುಹೇಲ್ ನಯ್ಯರ್, ಅನ್ಯಾ ಸಿಂಗ್, ಹುಸೇನ್ ದಲಾಲ್, ಸಯಾನ್ ಬ್ಯಾನರ್ಜಿ ಮತ್ತು ಸಂವೇದನಾ ಸುವಾಲ್ಕಾ ಕೂಡ ವೆಬ್ ಸರಣಿಯಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ:ಕ್ರಿಕೆಟ್ ದಂತಕಥೆ ಧೋನಿ ಚೊಚ್ಚಲ ನಿರ್ಮಾಣದ 'ಎಲ್ಜಿಎಂ' ಚಿತ್ರದ ಟೀಸರ್ ಔಟ್