ಕರ್ನಾಟಕ

karnataka

ETV Bharat / entertainment

ಶೂಟಿಂಗ್​ ಸೆಟ್​ನಲ್ಲಿ ದಿಗ್ಗಜರ ಸಮಾಗಮ: ಕಪಿಲ್‌ ದೇವ್‌ ಭೇಟಿ ಬಗ್ಗೆ ರಜನಿಕಾಂತ್ ಏನಂದ್ರು ಗೊತ್ತಾ? - kapil dev new movie

ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಮತ್ತು ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಒಂದೇ ಫ್ರೇಮ್​ನಲ್ಲಿ ಕಾಣಿಸಿಕೊಳ್ಳುವ ಮೂಲಕ ನೆಟಿಜನ್​ಗಳ ಗಮನ ಸೆಳೆದಿದ್ದಾರೆ.

ಒಂದೇ ಫ್ರೇಮ್​ನಲ್ಲಿ ಕಾಣಿಸಿಕೊಂಡ ದಿಗ್ಗಜರು
ಒಂದೇ ಫ್ರೇಮ್​ನಲ್ಲಿ ಕಾಣಿಸಿಕೊಂಡ ದಿಗ್ಗಜರು

By

Published : May 19, 2023, 2:10 PM IST

Updated : May 19, 2023, 10:21 PM IST

ಸಿನಿಮಾ ಶೂಟಿಂಗ್ ಸೆಟ್​ವೊಂದರಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಕ್ರಿಕೆಟ್​ ದಿಗ್ಗಜ ಕಪಿಲ್ ದೇವ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಐಶ್ವರ್ಯಾ (ರಜನಿಕಾಂತ್ ಪುತ್ರಿ) ನಿರ್ದೇಶನದ ‘ಲಾಲ್ ಸಲಾಂ’ ಚಿತ್ರದ ಸೆಟ್​ ಇದಾಗಿದ್ದು ದಿಗ್ಗಜರ ಸಮಾಗಮಕ್ಕೆ ಸಾಕ್ಷಿಯಾದ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಚಿತ್ರದಲ್ಲಿ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದರೆ, ರಜನಿಕಾಂತ್ ಅವರು ಮೊಯ್ದೀನ್ ಭಾಯ್ ಎಂಬ ಪವರ್‌ಫುಲ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಫಸ್ಟ್ ಲುಕ್ ಪೋಸ್ಟರ್ ಕೂಡ ಬಿಡುಗಡೆಯಾಗಿದ್ದು ಪೋಸ್ಟರ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 1993 ರಲ್ಲಿ ಬಾಂಬೆನಲ್ಲಿ (ಈಗ ಮುಂಬೈ) ನಡೆದ ಕೋಮು ಗಲಭೆಗಳ ಮಧ್ಯೆ ತಲೈವಾ ನಡೆದುಕೊಂಡು ಹೋಗುತ್ತಿರುವ ಪೋಸ್ಟರ್​ ಇದಾಗಿದೆ. ಟಾಲಿವುಡ್ ತಾರೆ ಜೀವತಾ ರಾಜಶೇಖರ್ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ಪಿರಿಯಾಡಿಕಲ್ ಡ್ರಾಮಾವಾಗಿ ತಯಾರಾಗುತ್ತಿರುವ ಚಿತ್ರಕ್ಕೆ ಎ.ಆರ್.ರೆಹಮಾನ್ ಸಂಗೀತ ನೀಡುತ್ತಿದ್ದಾರೆ.

ಇದನ್ನು ಓದಿ:ಕಾನ್​ ಚಿತ್ರೋತ್ಸವ 2023 : ರೆಡ್​ ಕಾರ್ಪೆಟ್​ ಮೇಲೆ ಮಿಂಚಿದ ಸಾರಾ ಅಲಿ ಖಾನ್..ಫ್ಯಾನ್ಸ್​ಗಳಿಂದ ಮೆಚ್ಚುಗೆ

‘ಲಾಲ್ ಸಲಾಂ’ ಸಿನಿಮಾವು ಕ್ರಿಕೆಟ್ ಮತ್ತು ಆ್ಯಕ್ಷನ್ ಕಥೆಯಾಧಾರಿತವಾಗಿದ್ದು ಕಪಿಲ್ ದೇವ್ ಆ್ಯಕ್ಟ್‌ ಮಾಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಆದರೆ, ಚಿತ್ರತಂಡ ಖಚಿತಪಡಿಸಿಲ್ಲ. ಲೈಕಾ ಪ್ರೊಡಕ್ಷನ್ಸ್ ನಿರ್ಮಾಣದ ಹೊಣೆ ಹೊತ್ತುಕೊಂಡಿದ್ದು ಚಿತ್ರೀಕರಣ ಮುಂಬೈನಲ್ಲಿ ಭರದಿಂದ ಸಾಗಿದೆ.

ಈ ಕುರಿತು ರಜನಿಕಾಂತ್ ಟ್ವೀಟ್​ ಮಾಡಿದ್ದಾರೆ. ಚೊಚ್ಚಲ ವಿಶ್ವಕಪ್ ಗೆದ್ದು ಇಡೀ ಭಾರತವೇ ಹೆಮ್ಮೆ ಪಡುವಂತೆ ಮಾಡಿದ ದಿಗ್ಗಜ, ಗೌರವಾನ್ವಿತ ಮತ್ತು ಅದ್ಭುತ ವ್ಯಕ್ತಿತ್ವವುಳ್ಳ ಕಪಿಲ್‌ ದೇವ್‌ಜಿ ಅವರೊಂದಿಗೆ ಕೆಲಸ ಮಾಡುವುದು ನನಗೆ ಒದಗಿ ಬಂದ ಗೌರವ ಎಂದು ತಿಳಿಸಿದ್ದಾರೆ. ಚಿತ್ರದಲ್ಲಿ ನಟಿಸಲಿದ್ದಾರೋ ಇಲ್ಲವೋ ಎಂಬ ಬಗ್ಗೆ ಅವರೂ ಸಹ ಖಚಿತಪಡಿಸಿಲ್ಲ.

ಇದನ್ನು ಓದಿ:ಗೂಗಲ್ ಸಿಇಒ ಸುಂದರ್ ಪಿಚೈ ಪೂರ್ವಿಕರ ಮನೆ ಮಾರಾಟ: ತಮಿಳು ನಟನಿಂದ ಖರೀದಿ

ಕಪಿಲ್ ದೇವ್ ಈಗಾಗಲೇ 'ಇಕ್ಬಾಲ್', '83' ಮತ್ತು 'ಡಬಲ್ ಎಕ್ಸ್‌ಎಲ್' ಚಿತ್ರಗಳಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಜನಿಕಾಂತ್ ಅವರು ನೆಲ್ಸನ್ ದಿಲೀಪ್ ನಿರ್ದೇಶನದ ‘ಜೈಲರ್’ ಚಿತ್ರದಲ್ಲೂ ಬ್ಯುಸಿಯಾಗಿದ್ದು ಆಗಸ್ಟ್ 10 ರಂದು ಬಿಡುಗಡೆಯಾಗಲಿದೆ. ಕಲಾನಿಧಿ ಮಾರನ್ ಭಾರಿ ಬಜೆಟ್‌ನಲ್ಲಿ ನಿರ್ಮಿಸಿದ್ದಾರೆ. ತಮಿಳಿನ ಸ್ಟಾರ್ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.​

ರಜಿನಿಗೆ ನಾಯಕಿಯಾಗಿ ಸೌತ್​ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ನಟಿಸಿದ್ದಾರೆ. ಸ್ಯಾಂಡಲ್​ವುಡ್​ ಹ್ಯಾಟ್ರಿಕ್​ ಹೀರೋ ಶಿವರಾಜ್​​ ಕುಮಾರ್​, ಮಲಯಾಳಂ ಸೂಪರ್​ ಸ್ಟಾರ್​ ಮೋಹನ್​ ಲಾಲ್​, ಜಾಕಿ ಶ್ರಾಫ್​, ರಮ್ಯಾ ಕೃಷ್ಣ, ಹಾಸ್ಯನಟ ಸುನೀಲ್​ ಮುಂತಾದವರು ಪ್ರಮುಖ ಪಾತ್ರದಲ್ಲಿದ್ದಾರೆ. ಇದಲ್ಲದೇ 'ಜೈ ಭೀಮ್' ಖ್ಯಾತಿಯ ಟಿ ಜೆ ಜ್ಞಾನವೇಲ್ ನಿರ್ದೇಶನದ ಚಿತ್ರವೊಂದಕ್ಕೆ ರಜನಿ ಸಹಿ ಹಾಕಿದ್ದಾರೆ. ಸದ್ಯದಲ್ಲೇ ಶೂಟಿಂಗ್ ಕೂಡ ಶುರುವಾಗಲಿದೆ.

ಇದನ್ನೂ ಓದಿ:ಇಂದು ಕನ್ನಡದ ನಾಲ್ಕು ಸಿನಿಮಾಗಳು ರಿಲೀಸ್​: ಯಾವುವು ಗೊತ್ತೇ?

Last Updated : May 19, 2023, 10:21 PM IST

ABOUT THE AUTHOR

...view details