ಬೆಂಗಳೂರು:ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ಭಾ. ಮಾ ಹರೀಶ್ ಅವರಿಗೆ ಹಿರಿಯ ನಿರ್ದೇಶಕ ಎಸ್.ವಿ ರಾಜೇಂದ್ರಸಿಂಗ್ ಬಾಬು ಹಾಗೂ ನಿರ್ಮಾಪಕ ಕೃಷ್ಣೇಗೌಡ ವಾಣಿಜ್ಯ ಮಂಡಳಿಯಲ್ಲಿ ಕೋಟ್ಯಂತರ ರೂಪಾಯಿಯ ಹಣ ದುರುಪಯೋಗ ಆಗಿದೆ. ಈ ಬಗ್ಗೆ ಸೂಕ್ತ ತನಿಖೆ ಆಗುವಂತೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಮನವಿಯನ್ನು ವಿನೂತನವಾಗಿ ಫಿನಾಯಿಲ್ ಮತ್ತು ಪೊರಕೆಯನ್ನ ನೀಡುವ ಮೂಲಕ ಮಾಡಿದ್ದಾರೆ. ಫಿಲ್ಮ್ ಚೇಂಬರ್ನಲ್ಲಿ ನಡೆದಿರುವ ಹಣದ ಅವ್ಯವಹಾರ, ಅಧಿಕಾರ ದುರುಪಯೋಗ ಬಗ್ಗೆ ಮುಕ್ತವಾಗಿ ತನಿಖೆ ಮಾಡುವಂತೆ ಕೋರಿಕೊಂಡಿದ್ದಾರೆ.
ಕನ್ನಡ ಫಿಲ್ಮ್ ಚೇಂಬರ್ನ ಅಕ್ರಮದ ತನಿಖೆಗೆ ಒತ್ತಾಯಿಸಿದ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಅಧ್ಯಕ್ಷ ಭಾ.ಮಾ.ಹರೀಶ್ ಅವರಿಗೆ ಕೊಟ್ಟಿರುವ ಪತ್ರದಲ್ಲಿ 80 ವರ್ಷದ ಇತಿಹಾಸವಿರುವ ಮಾತೃಸಂಸ್ಥೆಯಲ್ಲಿ ಕಳೆದ 20 ವರ್ಷಗಳಿಂದ ಅನೇಕ ರೀತಿಯ ಅಪಸ್ವರಗಳು ಕೇಳಿ ಬರುತ್ತಿವೆ. ಪೂರಕವಾಗಿ ಅನೇಕ ದೂರುಗಳು ನ್ಯಾಯಾಲಯದಲ್ಲಿವೆ. ಸಿಸಿಐನಲ್ಲಿ ಅನೇಕ ಕೋಟಿ ದಂಡ ಕಟ್ಟಿರುವುದು ಆಯ್ಕೆಯಾದ ಪದಾಧಿಕಾರಿಗಳ ಅನುಭವದ ಕೊರತೆ ಅನಿಸುತ್ತಿದೆ. ಸದಸ್ಯರ ಹಣ ಊಹಿಸಲು ಅಸಾಧ್ಯವಾಗದಂತೆ ಹಣವನ್ನ ಖರ್ಚು ಮಾಡಿರೋ ಬಗ್ಗೆ ತನಿಖೆ ಆಗಲಿ ಎಂದಿದ್ದಾರೆ.
ನಿರ್ಮಾಪಕ ಕೃಷ್ಣೇಗೌಡ ಕೂಡ ಈ ಬಗ್ಗೆ ಪತ್ರ ಬರೆದು ಫಿಲ್ಮ್ ಚೇಂಬರ್ನಲ್ಲಿ ನಡೆದ ಅಕ್ರಮಗಳ ಪಟ್ಟಿಯನ್ನು ನೀಡಿದ್ದಾರೆ. ಅದರಲ್ಲಿ ಸಂಸ್ಥೆಯ ವಜ್ರ ಮಹೋತ್ಸವ ಸಂದರ್ಭದಲ್ಲಿ ಎಲ್ಲ ಸದಸ್ಯರಿಗೆ ಬೆಳ್ಳಿ ತಟ್ಟೆ ನೀಡಿದ್ದೇವೆ ಎಂದು ಅಕ್ರಮ ಎಸಗಿದ್ದಾರೆ ಎಂದು ದೂರಲಾಗಿದೆ.
ಇದನ್ನೂ ಓದಿ:ಅಂತರ್ಜಾತಿ ಯುವಕನೊಂದಿಗೆ ಪ್ರೀತಿ: ಜಮೀನಿನಲ್ಲಿ ಶವವಾಗಿ ಪತ್ತೆಯಾದ ಬಾಲಕಿ