ಕರ್ನಾಟಕ

karnataka

ETV Bharat / entertainment

1,500 ಕೋಟಿ ಬಜೆಟ್‌ನಲ್ಲಿ ಮಹೇಶ್​ಬಾಬು-ರಾಜಮೌಳಿ ಸಿನಿಮಾ! - Rajamouli

ಬರೋಬ್ಬರಿ 1,500 ಕೋಟಿ ರೂ. ಬಜೆಟ್‌ನಲ್ಲಿ ಮಹೇಶ್ ​ಬಾಬು ಮತ್ತು ರಾಜಮೌಳಿ ಕಾಂಬಿನೇಶನ್​ನ ಸಿನಿಮಾ ನಿರ್ಮಾಣ ಆಗಲಿದೆ ಎಂದು ಹೇಳಲಾಗುತ್ತಿದೆ.

Rajamouli Mahesh Babu movie
ರಾಜಮೌಳಿ ಮಹೇಶ್​ಬಾಬು ಸಿನಿಮಾ

By ETV Bharat Karnataka Team

Published : Jan 2, 2024, 7:32 PM IST

Updated : Jan 2, 2024, 7:38 PM IST

ಭಾರತೀಯ ಚಿತ್ರರಂಗದ ದಿಗ್ಗಜ ನಿರ್ದೇಶಕ ರಾಜಮೌಳಿ ಹಾಗೂ ಸೌತ್​ ಸೂಪರ್ ಸ್ಟಾರ್ ಮಹೇಶ್ ಬಾಬು ಕಾಂಬಿನೇಷನ್​ನಲ್ಲಿ ಸಿನಿಮಾವೊಂದು ಬರಲಿದೆ ಅನ್ನೋದು ನಿಮಗೆ ತಿಳಿದಿರುವ ವಿಚಾರವೇ. ಆದರೆ, ಈವರೆಗೂ ಈ ಚಿತ್ರದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಅದಾಗ್ಯೂ ಈ ಚಿತ್ರದ ಬಗ್ಗೆ ಹಲವು ಸುದ್ದಿಗಳು ಇಂಟರ್​ನೆಟ್​ನಲ್ಲಿ ಹರಿದಾಡುತ್ತಿವೆ.

ಇತ್ತೀಚೆಗಷ್ಟೇ ಈ ಬಹುನಿರೀಕ್ಷಿತ ಸಿನಿಮಾ ಕುರಿತ ಕೆಲ ವಿಷಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಬರೋಬ್ಬರಿ 1,500 ಕೋಟಿ ರೂ. ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಅಷ್ಟೇ ಅಲ್ಲದೇ 100 ಕೋಟಿ ರೂ.ನ ವಿಶೇಷ ಸೆಟ್‌ ಹಾಕಲಿದ್ದಾರೆ ಎಂಬ ಮಾಹಿತಿ ಕೂಡ ಇದೆ. ಆದ್ರೆ, ಈ ವಿಷಯವನ್ನು ಮಹೇಶ್ ಬಾಬು ಅಥವಾ ರಾಜಮೌಳಿ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಬಹುನಿರೀಕ್ಷಿತ ಚಿತ್ರದ ಚಿತ್ರೀಕರಣ ಇದೇ ವರ್ಷ ಏಪ್ರಿಲ್‌ನಲ್ಲಿ ಪ್ರಾರಂಭವಾಗಲಿದೆ ಎಂದು ಈ ಹಿಂದೆ ವರದಿಗಳು ಸೂಚಿಸಿದ್ದವು. ಈ ವಿಚಾರಕಕ್ಕೂ ಚಿತ್ರತಂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಿನಿಮಾ ಕುರಿತು ಕೆಲ ಸುಳಿವು ಬಿಟ್ಟುಕೊಟ್ಟಿದ್ದರಷ್ಟೇ.

ಈ ಹಿಂದೆ ನಿರ್ದೇಶಕ ಎಸ್​.ಎಸ್​​ ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್​ ಅವರು ಕೆಲ ಸಂದರ್ಶನಗಳಲ್ಲಿ ಈ ಸಿನಿಮಾಗೆ ಸಂಬಂಧಿಸಿದಂತೆ ಸುಳಿವು ಬಿಟ್ಟುಕೊಟ್ಟಿದ್ದಾರೆ. ರಾಜಮೌಳಿ ಅವರ ತಂದೆ, ಖ್ಯಾತ ಬರಹಗಾರ ವಿಜಯೇಂದ್ರ ಪ್ರಸಾದ್​ ಈ ಚಿತ್ರಕ್ಕೆ ಕಥೆ ಒದಗಿಸುತ್ತಿದ್ದಾರೆ. ಅದ್ಭುತ ಸಿನಿಮೀಯ ಅನುಭವ ನೀಡುವ ಗುರಿಯೊಂದಿಗೆ ಚಿತ್ರತಂಡ ಕೆಲಸ ಮಾಡುತ್ತಿದೆ. ಪ್ರೀ ಪ್ರೊಡಕ್ಷನ್​ ವರ್ಕ್ ಮುಂದುವರಿದಿದೆ. ಬಾಹುಬಲಿ, ಆರ್​ಆರ್​ಆರ್​​ನಂತಹ ಅದ್ಭುತ ಚಿತ್ರಗಳ ಮೂಲಕ ಗಮನ ಸೆಳೆದಿರುವ ಖ್ಯಾತ ನಿರ್ದೇಶಕರು ಜನಪ್ರಿಯ, ಬಹುಬೇಡಿಕೆ ನಟ ಮಹೇಶ್​ ಬಾಬು ಜೊತೆ ಕೈ ಜೋಡಿಸಿರುವುದು ಸಿನಿಪ್ರಿಯರ ಉತ್ಸಾಹಕ್ಕೆ ಕಾರಣ ಆಗಿದೆ. ಈಗಾಗಲೇ ಇವರುಗಳ ಸೂಪರ್​ ಹಿಟ್​ ಸಿನಿಮಾ ವೀಕ್ಷಿಸಿರುವ ಪ್ರೇಕ್ಷಕರು ರಾಜಮೌಳಿ - ಮಹೇಶ್​ ಬಾಬು ಕಾಂಬಿನೇಶನ್​ನ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.

ಇದನ್ನೂ ಓದಿ:'ಲಿಯೋ' ಮೀರಿಸಿದ 'ಸಲಾರ್'​; ಜೈಲರ್, ಬಾಹುಬಲಿ ದಾಖಲೆ ಮುರಿಯಲು ಸಜ್ಜು

ನಟ ಮಹೇಶ್ ಬಾಬು ಅವರ ಬಹುನಿರೀಕ್ಷಿತ ಸಿನಿಮಾ 'ಗುಂಟೂರು ಖಾರಂ' ಬಿಡುಗಡೆಗೆ ದಿನಗಣನೆ ಆರಂಭ ಆಗಿದೆ. ಕುಟುಂಬಸ್ಥರೊಂದಿಗೆ ಹೊಸ ವರ್ಷ ಆಚರಿಸಿರುವ ನಟ, ಸಿನಿಮಾ ಪ್ರಚಾರದಲ್ಲಿ ತೊಡಗಿಕೊಳ್ಳುವ ಭರವಸೆ ಇದೆ. ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಈ ಚಿತ್ರದಲ್ಲಿ ಕನ್ನಡ ನಟಿ ಶ್ರೀಲೀಲಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಮಹೇಶ್ ಬಾಬು ಶ್ರೀಲೀಲಾ ಸ್ಕ್ರೀನ್ ಶೇರ್ ಮಾಡಿದ್ದು ಇದೇ ಮೊದಲು. ಮೀನಾಕ್ಷಿ ಚೌಧರಿ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇದೇ ಜನವರಿ 12 ರಂದು 'ಗುಂಟೂರು ಖಾರಂ' ತೆರೆಗಪ್ಪಳಿಸಲಿದೆ.

ಇದನ್ನೂ ಓದಿ:ಪ್ರೀತಿಪಾತ್ರರೊಂದಿಗೆ ಮಹೇಶ್ ಬಾಬು; ಹೊಸ ವರ್ಷಾಚರಣೆಯ ಫೋಟೋಗಳನ್ನು ನೋಡಿ

Last Updated : Jan 2, 2024, 7:38 PM IST

ABOUT THE AUTHOR

...view details