ಬೆಂಗಳೂರು: ಖ್ಯಾತ ನಿರ್ದೇಶಕ ರಾಜಮೌಳಿ ತಮ್ಮ ಮುಂದಿನ ಸಿನಿಮಾವನ್ನು ಮಹೇಶ್ ಬಾಬು ಜೊತೆ ಮಾಡುತ್ತಿದ್ದಾರೆ ಎಂಬ ಸುದ್ದಿ ಇದೀಗ ಅಧಿಕೃತವಾಗಿದೆ. ಮಹೇಶ್ ಬಾಬು ಅವರ 'ಎಸ್ಎಸ್ಎಂಬಿ29' ಪ್ಯಾನ್ ವರ್ಲ್ಡ್ ಪ್ರಾಜೆಕ್ಟ್ ಆಗಿದ್ದು, ಇದಕ್ಕಾಗಿ ಅವರು ರಾಜಮೌಳಿ ತಂಡವನ್ನು ಸೇರಿದದ್ದಾರೆ. ಈ ಕುರಿತು ಇತ್ತೀಚೆಗೆ ಖ್ಯಾತ ಬರಹಕಾರ ಕೆವಿ ವಿಜಯೇಂದ್ರ ಪ್ರಸಾದ್ ಕೂಡ ಚಿತ್ರದ ಮಾಹಿತಿ ಹಂಚಿಕೊಂಡಿದ್ದರು. ಸುದ್ದಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿರುವ ಕೆವಿ ವಿಜಯೇಂದ್ರ ಪ್ರಸಾದ್, 'ಎಸ್ಎಸ್ಎಂಬಿ29' ಚಿತ್ರಕ್ಕೆ ಮಹೇಶ್ ಬಾಬು, ರಾಜಮೌಳಿ ಒಂದಾಗಿದ್ದಾರೆ. ಈ ಚಿತ್ರ 'ಆರ್ಆರ್ಆರ್' ಸಿನಿಮಾವನ್ನು ಮೀರಿಸಲಿದ್ದು, ಸಿಕ್ಕಾಪಟ್ಟೆ ಆ್ಯಕ್ಷನ್ ಸಿನಿಮಾವಾಗಿರಲಿದೆ ಎಂದಿದ್ದಾರೆ.
'ಆರ್ಆರ್ಆರ್' ಬಳಿಕ ರಾಜಮೌಳಿ ಅವರ ಮುಂದಿನ ಯೋಜನೆ 'ಎಸ್ಎಸ್ಎಂಬಿ29' ಆಗಿದೆ. ಈ ಚಿತ್ರಕ್ಕಾಗಿ ಜಗತ್ತಿನಾದ್ಯಂತ ಅಭಿಮಾನಿಗಳು ಕಾತುರರಾಗಿದ್ದಾರೆ. ಈ ಹಿಂದೆ ಕೂಡ ರಾಜಮೌಳಿ ತಮ್ಮ ಮುಂದಿನ ಚಿತ್ರವನ್ನು ನಟ ಮಹೇಶ್ ಬಾಬುಗೆ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಹೆಚ್ಚು ಕೇಳಿ ಬಂದಿತು. ಈ ಕುರಿತು ಮಾತನಾಡಿರುವ ವಿಜಯೇಂದ್ರ ಪ್ರಸಾದ್, ಇದೊಂದು ದೊಡ್ಡ ಮಟ್ಟದ ಸಿನಿಮಾ ಆಗಿರಲಿದ್ದು, ಆರ್ಆರ್ಆರ್ಗಿಂತ ದೊಡ್ಡ ಮಟ್ಟದಲ್ಲಿರಲಿದೆ ಎಂದಿದ್ದಾರೆ
ವರ್ಕ್ಶಾಪ್ನಲ್ಲಿ ಪರಕಾಯ ಪ್ರವೇಶಕ್ಕೆ ಮಹೇಶ್ ಬಾಬು ಸಜ್ಜು: ಈ ಚಿತ್ರದ ಪಾತ್ರಕ್ಕಾಗಿ ನಟ ಮಹೇಶ್ ಬಾಬು ಮೂರು ತಿಂಗಳ ವರ್ಕ್ಶಾಪ್ಗೆ ತೆರಳಲಿದ್ದಾರೆ. ರಾಜಮೌಳಿ ತಮ್ಮ ಪ್ರತಿ ಸಿನಿಮಾದಲ್ಲೂ ನಟರು ತಮ್ಮ ಪಾತ್ರದ ಆಳ ಹೊಕ್ಕುವ ಉದ್ದೇಶದಿಂದ ಈ ರೀತಿಯ ಕಠಿಣ ವರ್ಕ್ ಶಾಪ್ ನಡೆಸುವುದು ಸಾಮಾನ್ಯ. ಇದು ಸಿನಿ ಉದ್ಯಮದ ಎಲ್ಲರಿಗೂ ತಿಳಿದ ವಿಚಾರವಾಗಿದೆ. ಇದೀಗ ಎಸ್ಎಸ್ಎಂಬಿ29 ಚಿತ್ರದ ಪಾತ್ರಧಾರಿಗಳು ಈ ರೀತಿಯ ವರ್ಕ್ಶಾಪ್ ಪಡೆಯಲಿದ್ದಾರೆ.