ಕರ್ನಾಟಕ

karnataka

ETV Bharat / entertainment

'UT 69' ಟ್ರೇಲರ್​​​ ಲಾಂಚ್​ ಈವೆಂಟ್​ನಲ್ಲಿ ಕಣ್ಣೀರಿಟ್ಟ ಶಿಲ್ಪಾ ಶೆಟ್ಟಿ ಪತಿ - ಮೊದಲ ಬಾರಿ ಫೇಸ್ ಮಾಸ್ಕ್ ತೆಗೆದ ರಾಜ್ ಕುಂದ್ರಾ - UT 69 trailer

ಪ್ರಕರಣವೊಂದರಲ್ಲಿ ಸಿಲುಕಿ ಕಾನೂನು ಹೋರಾಟ ನಡೆಸಿದ್ದ ಉದ್ಯಮಿ ರಾಜ್ ಕುಂದ್ರಾ ಅವರ ಜೀವನಾಧಾರಿತ ಕಥೆ 'UT 69'ರ ಟ್ರೇಲರ್​​​ ಅನಾವರಣಗೊಂಡಿದೆ.

Raj Kundra got emotional at UT 69 trailer trailer launch event
UT 69 ಟ್ರೇಲರ್ ಟ್ರೇಲರ್​​​ ಲಾಂಚ್​ ಈವೆಂಟ್​ನಲ್ಲಿ ರಾಜ್ ಕುಂದ್ರಾ ಭಾವುಕ

By ETV Bharat Karnataka Team

Published : Oct 19, 2023, 7:14 AM IST

Updated : Oct 19, 2023, 8:10 AM IST

ಬಹು ನಿರೀಕ್ಷಿತ ಸಿನಿಮಾ 'UT 69'ರ ಟ್ರೇಲರ್​​​ ಅಕ್ಟೋಬರ್ 18 ರಂದು ಅನಾವರಣಗೊಂಡಿದೆ. ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಸಹ ತಮ್ಮ ಪತಿ ರಾಜ್ ಕುಂದ್ರಾ ಅವರ ಜೀವನಚರಿತ್ರೆಯ ಟ್ರೇಲರ್ ಅನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಉದ್ಯಮಿ ರಾಜ್​ ಕುಂದ್ರಾ ನಟನೆಯ ಚೊಚ್ಚಲ ಚಿತ್ರವಿದು. ಅಶ್ಲೀಲ ಚಿತ್ರ ನಿರ್ಮಾಣ ಮತ್ತು ವಿತರಣೆ ಆರೋಪ ಪ್ರಕರಣದಲ್ಲಿ ರಾಜ್​ ಕುಂದ್ರಾ ಅವರು ಕಾನೂನು ಹೋರಾಟ ನಡೆಸಿದ್ದರು. 2021ರಲ್ಲಿ ಸುಮಾರು ಎರಡು ತಿಂಗಳು ಜೈಲಿನಲ್ಲಿದ್ದರು. ಇದೇ ಪ್ರಕರಣದ ಸುತ್ತ ''ಯುಟಿ 69'' ಕಥೆ ಸುತ್ತುತ್ತದೆ.

ಉದ್ಯಮಿ ರಾಜ್ ಕುಂದ್ರಾ ಅವರು ಟ್ರೇಲರ್ ಲಾಂಚ್ ಈವೆಂಟ್​ನಲ್ಲಿ ಭಾವುಕರಾಗಿದ್ದಾರೆ. ಅಶ್ಲೀಲ ಚಿತ್ರ ನಿರ್ಮಾಣ ಮತ್ತು ವಿತರಣೆ ಆರೋಪ ಪ್ರಕರಣದ ವಿಚಾರಣೆಯು ತಮಗೆ ಮತ್ತು ತಮ್ಮ ಕುಟುಂಬಸ್ಥರ ಮೇಲೆ ಹೇಗೆ ಪರಿಣಾಮ ಬೀರಿತು ಎಂಬುದರ ಕುರಿತು ಮೊದಲ ಬಾರಿ ಸಾರ್ವಜನಿಕ ಸ್ಥಳದಲ್ಲಿ ಮಾತನಾಡಿದ್ದಾರೆ.

ಈ ಪ್ರಕರಣದಲ್ಲಿ 2021ರ ಜುಲೈನಲ್ಲಿ ರಾಜ್ ಕುಂದ್ರಾ ಅವರನ್ನು ಬಂಧಿಸಲಾಗಿತ್ತು. ಕಾನೂನು ಹೋರಾಟ ನಡೆಸಿದ್ದರು. ಜಾಮೀನಿನ ಮೇಲೆ ಬಿಡುಗಡೆ ಆದಾಗಿನಿಂದ, ಅವರು ಸಾರ್ವಜನಿಕ ಸ್ಥಳಗಳಲ್ಲಿ ಫೇಸ್ ಮಾಸ್ಕ್ ಧರಿಸಿಯೇ ಕಾಣಿಸಿಕೊಳ್ಳುತ್ತಿದ್ದರು. ಆದ್ರೆ ನಿನ್ನೆ ನಡೆದ ಸಿನಿಮಾ ಈವೆಂಟ್​ನಲ್ಲಿ ಮೊದಲ ಬಾರಿ ಫೇಸ್ ಮಾಸ್ಕ್ ಅನ್ನು ಸಂಪೂರ್ಣ ತೆರೆದು ಅಭಿಮಾನಿಗಳಿಗೆ ದರ್ಶನ ಕೊಟ್ಟಿದ್ದಾರೆ. ಅಲ್ಲದೇ ಪ್ರಕರಣದ ಕುರಿತು ಮಾತನಾಡಿ, ಭಾವುಕರಾಗಿದ್ದಾರೆ.

ಇದನ್ನೂ ಓದಿ:ಹೃತಿಕ್​ ರೋಷನ್​ - ಜೂ. ಎನ್​ಟಿಆರ್​ ಸ್ಕ್ರೀನ್​ ಶೇರ್: ವಾರ್​ 2 ಶೂಟಿಂಗ್​ ಸೆಟ್​​ನಿಂದಲೇ ವಿಡಿಯೋ ವೈರಲ್​​

ಪಾಪರಾಜಿಗಳು ಸೋಷಿಯಲ್​ ಮೀಡಿಯಾದಲ್ಲಿ ಯುಟಿ 69 ಟ್ರೇಲರ್​ ಲಾಂಚ್ ಈವೆಂಟ್‌ನ ವಿಡಿಯೋಗಳನ್ನು ಹಂಚಿಕೊಂಡಿದ್ದು, ಆನ್​ಲೈನ್​ನಲ್ಲಿ ವೈರಲ್​ ಆಗಿದೆ. ರಾಜ್ ಕುಂದ್ರಾ ತಮ್ಮ ಕಣ್ಣೀರನ್ನು ತಡೆಯುತ್ತಿರುವುದನ್ನು ವೈರಲ್​ ವಿಡಿಯೋಗಳಲ್ಲಿ ಕಾಣಬಹುದು. ಪ್ರಕರಣದ ಬಗ್ಗೆ ಮಾತನಾಡಿದ ಉದ್ಯಮಿ, "ನೀವು ಏನು ಹೇಳಬೇಕೆಂದರೂ ನನಗೆ ಹೇಳಿ. ಆದ್ರೆ, ನನ್ನ ಹೆಂಡತಿ, ಮಕ್ಕಳು ಮತ್ತು ನನ್ನ ಕುಟುಂಬದವರ ಕಡೆ ಹೋಗಬೇಡಿ. ಅವರು ನಿಮಗೆ ಏನು ಮಾಡಿದ್ದಾರೆ?" ಎಂದು ಕೇಳಿದ್ರು. ಕೆಲ ಕ್ಷಣ ಭಾವುಕರಾಗಿ ಮಾತನಾಡಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಅಭಿಮಾನಿಗಳು ಬೆಂಬಲಕ್ಕೆ ನಿಂತಿದ್ದಾರೆ.

ಇದನ್ನೂ ಓದಿ:ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದ ಕ್ಷಣಗಳು: Photos

ರಾಜ್ ಕುಂದ್ರಾ ಅವರ ಯುಟಿ 69 ಚಿತ್ರ ನವೆಂಬರ್ 3 ರಂದು ಬಿಡುಗಡೆಯಾಗಲಿದೆ. ಟ್ರೇಲರ್ ಅನ್ನು ಬುಧವಾರ ಅನಾವರಣಗೊಳಿಸಲಾಗಿದೆ. ಸುಮಾರು ಒಂದೂವರೆ ವರ್ಷಗಳ ನಂತರ ಸಾರ್ವಜನಿಕರ ಎದುರು ಫೇಸ್​ ಮಾಸ್ಕ್ ತೆಗೆದು, ದೀರ್ಘ ಸಮಯ ಮಾತನಾಡಿದ್ದಾರೆ. ರಾಜ್ ಕುಂದ್ರಾ ತಮ್ಮದೇ ಜೀವನಾಧಾರಿತ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಟ್ರೇಲರ್ ಅಶ್ಲೀಲ ಚಿತ್ರ ಪ್ರಕರಣದಲ್ಲಿ ರಾಜ್ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿರುವ ಸಮಯದ ಒಂದು ನೋಟವನ್ನು ಒದಗಿಸಿದೆ.

Last Updated : Oct 19, 2023, 8:10 AM IST

ABOUT THE AUTHOR

...view details