ಕರ್ನಾಟಕ

karnataka

ETV Bharat / entertainment

ಬಾಲಿವುಡ್ ನಟ, ಕಾಂಗ್ರೆಸ್ ಮುಖಂಡ ರಾಜ್ ಬಬ್ಬರ್​ಗೆ 2 ವರ್ಷ ಜೈಲು ಶಿಕ್ಷೆ - Raj Babbar jailed for two years

ಐಪಿಸಿಯ ಸೆಕ್ಷನ್ 143, 323, 332 ಮತ್ತು 353 ರ ಅಡಿಯಲ್ಲಿ ಅಪರಾಧಗಳಿಗೆ ಪ್ರತ್ಯೇಕವಾಗಿ ಶಿಕ್ಷೆ ವಿಧಿಸಲಾಗಿದ್ದು, ಎಲ್ಲಾ ಶಿಕ್ಷೆಗಳು ಏಕಕಾಲದಲ್ಲಿ ಜಾರಿಯಲ್ಲಿರುತ್ತವೆ ಎಂದು ನ್ಯಾಯಾಲಯ ಹೇಳಿದೆ.

Raj Babbar gets two-year jail for assaulting polling officer in 1996
Raj Babbar gets two-year jail for assaulting polling officer in 1996

By

Published : Jul 8, 2022, 6:25 PM IST

ಲಖನೌ (ಉತ್ತರ ಪ್ರದೇಶ): ಚುನಾವಣಾಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಾಲಿವುಡ್ ನಟ ಹಾಗೂ ಕಾಂಗ್ರೆಸ್ ನಾಯಕ ರಾಜ್ ಬಬ್ಬರ್ ಅವರಿಗೆ ಇಲ್ಲಿನ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡುವ ಸಲುವಾಗಿ ಅದೇ ನ್ಯಾಯಾಲಯ ಅವರಿಗೆ ಜಾಮೀನು ಸಹ ನೀಡಿದೆ.

ಸರ್ಕಾರಿ ನೌಕರನೊಬ್ಬ ತನ್ನ ಕರ್ತವ್ಯ ನಿರ್ವಹಿಸದಂತೆ ತಡೆದ ಕಾರಣಕ್ಕೆ ಮತ್ತು ಇತರ ಮೂರು ಅಪರಾಧ ಎಸಗಿದ ಕಾರಣಗಳಿಗಾಗಿ ಬಬ್ಬರ್‌ಗೆ ಶಿಕ್ಷೆ ವಿಧಿಸಲಾಗಿದೆ. ನ್ಯಾಯಾಲಯ ರಾಜ್​ ಬಬ್ಬರ್​ರಿಗೆ 6,500 ರೂಪಾಯಿ ದಂಡವನ್ನೂ ವಿಧಿಸಿದೆ. ಐಪಿಸಿಯ ಸೆಕ್ಷನ್ 143, 323, 332 ಮತ್ತು 353 ರ ಅಡಿಯಲ್ಲಿ ಅಪರಾಧಗಳಿಗೆ ಪ್ರತ್ಯೇಕವಾಗಿ ಶಿಕ್ಷೆ ವಿಧಿಸಲಾಗಿದ್ದು, ಎಲ್ಲಾ ಶಿಕ್ಷೆಗಳು ಏಕಕಾಲದಲ್ಲಿ ಜಾರಿಯಲ್ಲಿರುತ್ತವೆ ಎಂದು ನ್ಯಾಯಾಲಯ ಹೇಳಿದೆ.

ಮೇ 1996 ರಲ್ಲಿ ನಡೆದ ಚುನಾವಣೆಯ ಸಂದರ್ಭದಲ್ಲಿ ಬಬ್ಬರ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಆ ಸಮಯದಲ್ಲಿ, ಬಬ್ಬರ್ ಸಮಾಜವಾದಿ ಪಕ್ಷದಿಂದ ಲಖನೌ ಸ್ಥಾನಕ್ಕೆ ಲೋಕಸಭೆ ಅಭ್ಯರ್ಥಿಯಾಗಿ ಅವರು ಸ್ಪರ್ಧಿಸಿದ್ದರು. ಬಬ್ಬರ್ ತನ್ನ ಬೆಂಬಲಿಗರೊಂದಿಗೆ ಮತಗಟ್ಟೆ ಕೇಂದ್ರಕ್ಕೆ ನುಗ್ಗಿ, ಮತಗಟ್ಟೆ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ. ಈ ಪ್ರಕರಣದಲ್ಲಿ ಸೆಪ್ಟೆಂಬರ್ 23, 1996 ರಂದು ಚಾರ್ಜ್ ಶೀಟ್ ಸಲ್ಲಿಕೆಯಾಗಿತ್ತು.

ಇದನ್ನು ಓದಿ:ಅಮ್ನೆಸ್ಟಿ ಇಂಡಿಯಾಗೆ 51 ಕೋಟಿ ರೂ.: ಮಾಜಿ ಸಿಇಒ ಆಕರ್ ಪಟೇಲ್​ಗೆ 10 ಕೋಟಿ ರೂ. ದಂಡ: ಕಾರಣ ?

ABOUT THE AUTHOR

...view details