ಕರ್ನಾಟಕ

karnataka

ETV Bharat / entertainment

Raj B Shetty’s Toby: ರಾಜ್‌ ಬಿ ಶೆಟ್ರ 'ಟೋಬಿ' ಮೋಷನ್​ ಪೋಸ್ಟರ್​ ಔಟ್​; ಸಿನಿಮಾ ಬಿಡುಗಡೆ ದಿನವೂ ಫಿಕ್ಸ್‌ - ಒಂದು ಮೊಟ್ಟೆಯ ಕಥೆ

ರಾಜ್​ ಬಿ ಶೆಟ್ಟಿ ನಟನೆಯ ಬಹುನಿರೀಕ್ಷಿತ 'ಟೋಬಿ' ಚಿತ್ರದ ಮೋಷನ್​ ಪೋಸ್ಟರ್​ ಬಿಡುಗಡೆಯಾಗಿದೆ.

toby
ಟೋಬಿ

By

Published : Jun 13, 2023, 4:18 PM IST

Updated : Jun 13, 2023, 5:50 PM IST

ಕನ್ನಡ ಚಿತ್ರರಂಗದಲ್ಲಿ ನಟ, ನಿರ್ದೇಶಕರಾಗಿ ರಾಜ್​ ಬಿ ಶೆಟ್ಟಿ ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ. ಕೊಂಚ ಭಿನ್ನ ಕಥೆಯನ್ನೇ ಆಯ್ದುಕೊಂಡು, ಸಿನಿಮಾ ಮಾಡುತ್ತಾ ಬಣ್ಣದ ಲೋಕದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಇಂದು ಅವರು ತಮ್ಮ ಮುಂದಿನ ಚಿತ್ರದ ಬಗ್ಗೆ ಹೊಸ ಅಪ್​ಡೇಟ್​ ನೀಡಿದ್ದಾರೆ. ಅವರ ಹೊಸ ಚಿತ್ರಕ್ಕೆ 'ಟೋಬಿ' ಎಂದು ಶೀರ್ಷಿಕೆ ನೀಡಲಾಗಿದೆ. ಚಿತ್ರದ ಮೋಷನ್​ ಪೋಸ್ಟರ್​ ಅನಾವರಣಗೊಂಡಿದೆ.

'ಟೋಬಿ- ಮಾರಿ ಮಾರಿ, ಮಾರಿಗೆ ದಾರಿ' ಎಂಬ ವಿಭಿನ್ನ ಟೈಟಲ್​ ಹೊಂದಿರುವ ಚಿತ್ರವನ್ನು ರಾಜ್​ ಅವರೇ ಬರೆದಿದ್ದು, ನಾಯಕನಾಗಿಯೂ ನಟಿಸಲಿದ್ದಾರೆ. ಈಗಾಗಲೇ ಒಂದು ಮೊಟ್ಟೆಯ ಕಥೆ, ಗರುಡ ಗಮನ ವೃಷಭ ವಾಹನ ಎಂಬ ಸೂಪರ್​ ಹಿಟ್​ ಸಿನಿಮಾ ನೀಡಿರುವ ರಾಜ್​ ಇದೀಗ 'ಕೆಣಕಿದರೆ ಕುರಿಯೂ ಮಾರಿಯಾಗಬಲ್ಲದು' ಎನ್ನುತ್ತಾ ನಿಮ್ಮ ಮುಂದೆ ಬರಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಟೋಬಿ ಬಿಡುಗಡೆ ದಿನವೂ ಫಿಕ್ಸ್‌: ಬಹುನಿರೀಕ್ಷಿತ ಚಿತ್ರದ ಮೋಷನ್​ ಪೋಸ್ಟರ್​ ರಿಲೀಸ್​ ಆಗಿದ್ದು, ಚಿತ್ರತಂಡ ಬಿಡುಗಡೆಯ ದಿನಾಂಕವನ್ನು ಘೋಷಿಸಿದೆ. ಸಿನಿಮಾ ಇದೇ ಆಗಸ್ಟ್​ 25 ರಂದು ತೆರೆ ಕಾಣಲಿದೆ. ಈಗಾಗಲೇ ರಾಜ್​ ಬಿ ಶೆಟ್ಟಿ ನಿರ್ಮಾಣದಲ್ಲಿ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ತಯಾರಾಗುತ್ತಿದೆ. ಆ ಚಿತ್ರ ಬಿಡುಗಡೆಗೂ ಮುನ್ನವೇ ಮತ್ತೊಂದು ಚಿತ್ರ 'ಟೋಬಿ'ಯ ಅಪ್​ಡೇಟ್​ ರಾಜ್​ ನೀಡಿದ್ದಾರೆ.

ಟೋಬಿ ಮೂಲ ಕಥೆ ಟಿ.ಕೆ ದಯಾನಂದ್ ಅವರದ್ದು. ಈ ಸಿನಿಮಾವನ್ನು ಬಾಸಿಲ್​ ನಿರ್ದೇಶಿಸುತ್ತಿದ್ದಾರೆ. 'ಲೈಟರ್​ ಬುದ್ಧ ಫಿಲ್ಮ್ಸ್'​ನಡಿ 'ಗರುಡ ಗಮನ ವೃಷಭ ವಾಹನ' ಮೂಡಿಬಂದಿತ್ತು. ಅದೇ ಬ್ಯಾನರ್​ನಲ್ಲಿ ರವಿ ರೈ ಕಳಸ 'ಟೋಬಿ'ಯನ್ನು ಕೂಡ ನಿರ್ಮಾಣ ಮಾಡುತ್ತಿದ್ದಾರೆ. ಶಾಮಿಲ್ ಬಂಗೇರ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ.

ಜೊತೆಗೆ 'ಅಗಸ್ತ್ಯ ಫಿಲ್ಮ್ಸ್'​ ಕೂಡ ಇದಕ್ಕೆ ಸಾಥ್​ ನೀಡಿದೆ. ಪ್ರತಿಷ್ಠಿತ ಕೆ.ವಿ.ಎನ್ ಪ್ರೊಡಕ್ಷನ್ಸ್ ಈ ಚಿತ್ರದ ವಿತರಣೆ ಹಕ್ಕು ಪಡೆದುಕೊಂಡಿದೆ. ಚಿತ್ರಕ್ಕೆ ಮಿಥುನ್ ಮುಕುಂದನ್ ಸಂಗೀತ ನಿರ್ದೇಶನ, ಪ್ರವೀಣ್ ಶ್ರೀಯನ್ ಛಾಯಾಗ್ರಹಣ ಮತ್ತು ಸಂಕಲನ ಹಾಗೂ ಅರ್ಜುನ್ ರಾಜ್ ಮತ್ತು ರಾಜಶೇಖರ್ ಸಾಹಸ ನಿರ್ದೇಶನ ಇರಲಿದೆ. ಅಲ್ಲದೇ 'ಟೋಬಿ' ಬಿಗ್​ ಬಜೆಟ್​ ಚಿತ್ರವಾಗಿದ್ದು, ರಾಜ್​ ಬಿ ಶೆಟ್ಟಿ ತಂಡ ಕೋಟಿಗಟ್ಟಲೆ ದುಡ್ಡು ಸುರಿದು ಚಿತ್ರ ಸಿದ್ಧಪಡಿಸುತ್ತಿದ್ದಾರೆ.

ಇದನ್ನೂ ಓದಿ:50 ಕೋಟಿ ಗಡಿ ದಾಟಿದ 'ಜರಾ ಹಟ್ಕೆ ಜರಾ ಬಚ್ಕೆ': ಸಕ್ಸಸ್​ ಪಾರ್ಟಿ ಆಯೋಜಿಸಿದ ಚಿತ್ರತಂಡ

ಇದೊಂದು ಪಕ್ಕಾ ಮಾಸ್​ ಸಿನಿಮಾವಾಗಿರಲಿದೆ. ಮೋಷನ್​ ಪೋಸ್ಟರ್​ ಕೂಡ ಈ ಮಾತನ್ನು ಸಾಬೀತು ಪಡಿಸಿದೆ. ಕುರಿಯ ಮೂಗಿನಲ್ಲಿ ದೊಡ್ಡ ಗಾತ್ರದ ಮೂಗುತಿಯನ್ನು ಇಡಲಾಗಿದೆ. ಪ್ರತಿ ಬಾರಿ ಪ್ರೇಕ್ಷಕರಿಗೆ ಹೊಸತನ್ನೇ ಉಣಬಡಿಸುವ ರಾಜ್​ ಈ ಬಾರಿಯೂ ಅಂತಹದ್ದೇ ಸಿನಿಮಾಗೆ ಕೈ ಹಾಕಿರುವುದು ಪಕ್ಕಾ ಅಂತ ಗೊತ್ತಾಗಿದೆ. ರಾಜ್​ ಜೊತೆ ಸಂಯುಕ್ತಾ ಹೊರನಾಡು ಮತ್ತು ಚೈತ್ರಾ ಆಚಾರ್​ ನಟಿಸಿದ್ದಾರೆ. ಜೊತೆಗೆ ಗೋಪಾಲಕೃಷ್ಣ ದೇಶಪಾಂಡೆ, ದೀಪಕ್ ರಾಜ್ ಶೆಟ್ಟಿ ಕೂಡ ಇದ್ದಾರೆ.

ಶೆಟ್ರ ಗ್ಯಾಂಗ್​ನ ಎಲ್ಲರೂ ಟೋಬಿ ಮೋಸ್ಟರ್​ ಪೋಸ್ಟರ್​ ಅನ್ನು ತಮ್ಮ ಸೋಷಿಯಲ್​ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ರಕ್ಷಿತ್​ ಶೆಟ್ಟಿ, ರಿಷಬ್ ಶೆಟ್ಟಿ ಸೇರಿದಂತೆ ಅನೇಕರು ರಾಜ್​ಗೆ ಆಲ್​ ದಿ ಬೆಸ್ಟ್​ ತಿಳಿಸಿದ್ದಾರೆ. ಸಂಯುಕ್ತಾ ಹೊರನಾಡು ಇನ್​ಸ್ಟಾದಲ್ಲಿ ಪೋಸ್ಟರ್​ ಹಂಚಿಕೊಂಡು, "ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕೆ ಹಾಗೂ ಟೋಬಿ ಚಿತ್ರತಂಡದ ಭಾಗವಾಗಿಸಿದ್ದಕ್ಕೆ ಧನ್ಯವಾದಗಳು. ರಾಜ್​ ಬಿ ಶೆಟ್ಟಿ ಮತ್ತು ಇಡೀ ತಂಡದಿಂದ ಸಿಕ್ಕ ಪ್ರೀತಿಗೆ ಥ್ಯಾಂಕ್ಯೂ" ಎಂದು ಬರೆದಿದ್ದಾರೆ.

ಇದನ್ನೂ ಓದಿ:Raj Cup 2023: ಮತ್ತೆ ಶುರುವಾಗಲಿದೆ ಸಿನಿತಾರೆಗಳ ಕ್ರಿಕೆಟ್​ ಹಬ್ಬ; ಶೀಘ್ರದಲ್ಲೇ ಡಾ.ರಾಜ್ ಕಪ್ ಟೂರ್ನಿ

Last Updated : Jun 13, 2023, 5:50 PM IST

ABOUT THE AUTHOR

...view details