ಕರ್ನಾಟಕ

karnataka

ETV Bharat / entertainment

ಸಾರಿ ಕರ್ಮ ರಿಟರ್ನ್ಸ್​ನಲ್ಲಿ ತುಪ್ಪದ ಬೆಡಗಿ ರಾಗಿಣಿ ಹೊಸ ವೇಷ - ಸಾರಿ ಕರ್ಮ ರಿಟರ್ನ್ಸ್​ ಮೋಷನ್​ ಪೋಸ್ಟರ್​ ಬಿಡುಗಡೆ

ಸೂಪರ್ ವುಮೆನ್ ಕಾನ್ಸೆಪ್ಟ್ ವಿಭಿನ್ನ ಕಥಾ ಹಂದರ ಇರುವ ಚಿತ್ರದಲ್ಲಿ ರಾಗಿಣಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ರಾಗಿಣಿ ಅವರ ಹುಟ್ಟುಹಬ್ಬದ ನಿಮಿತ್ತ ಚಿತ್ರ ತಂಡ ಚಿತ್ರದ ಮೋಷನ್​ ಪೋಸ್ಟರ್​ ಬಿಡುಗಡೆ ಮಾಡಿದೆ.

Sorry Karma Returns is a comeback film for Ragini Dwivedi
ಸಾರಿ ಕರ್ಮ ರಿಟರ್ನ್ಸ್​ನಲ್ಲಿ ತುಪ್ಪದ ಬೆಡಗಿ ರಾಗಿಣಿ ಹೊಸ ವೇಶ

By

Published : May 27, 2022, 7:16 PM IST

ಕನ್ನಡ ಚಿತ್ರರಂಗದಲ್ಲಿ ವೀರ ಮದಕರಿ, ಕೆಂಪೇಗೌಡ ಚಿತ್ರದಿಂದ ಕನ್ನಡಿಗರ ಮನ ಗೆದ್ದಿರುವ ನಟಿ ರಾಗಿಣಿ ದ್ವಿವೇದಿ. ಅವರ ಹೊಸ ಸಿನಿಮಾ ಸಾರಿ ಕರ್ಮ ರಿಟರ್ನ್ಸ್ ಅರ್ಧ ಭಾಗದಷ್ಟು ಚಿತ್ರಿಕರಣ ಮುಗಿಸಿದೆ. ಈ ಚಿತ್ರದ ಮೂಲಕ ಮತ್ತೆ ರಾಗಿಣಿ ನಾಯಕಿ ಆಧರಿತ ಚಿತ್ರ ಮಾಡುತ್ತಿದ್ದಾರೆ. ರಾಗಿಣಿ ಹುಟ್ಟು ಹಬ್ಬಕ್ಕೆ ‘ಸಾರಿ ಕರ್ಮ ರಿಟರ್ನ್ಸ್’ ಚಿತ್ರತಂಡ ಮೋಷನ್ ಪಿಕ್ಚರ್ ಬಿಡುಗಡೆ ಮಾಡಿ ಉಡುಗೊರೆ ನೀಡಿದೆ.

ರಾಗಿಣಿ ದ್ವಿವೇದಿ ಮಾತನಾಡಿ, ಇದೊಂದು ಸೂಪರ್ ವುಮೆನ್ ಕಾನ್ಸೆಪ್ಟ್ ಕಥೆ. ಈ ಚಿತ್ರದ ಕಾರ್ಯಕಾರಿ ನಿರ್ಮಾಪಕ ಅಫ್ಜಲ್ ಭೇಟಿಯಾಗಿ ಈ ಚಿತ್ರದ ಕುರಿತು ಹೇಳಿದರು. ತುಂಬಾ ಇಷ್ಟವಾಯಿತು. ಈ ಚಿತ್ರದ ನಿರ್ದೇಶಕ ಬ್ರಹ್ಮ ಅವರ ಬಗ್ಗೆ ತಿಳಿದು ಆಶ್ಚರ್ಯವಾಯಿತು. ಏಕೆಂದರೆ ಬ್ರಹ್ಮಅತ್ಯುತ್ತಮ ತಂತ್ರಜ್ಞ. ನಾನು ಒಂದೇ ತರಹದ ಪಾತ್ರ ಮಾಡಲು ಇಷ್ಟ ಪಡುವುದಿಲ್ಲ. ಬೇರೆ ಬೇರೆ ಪಾತ್ರ ಮಾಡಬೇಕು ಎಂಬುದು ನನ್ನ ಆಸೆ. ಇದರಲ್ಲೂ ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದರು.

ಸಾರಿ ಕರ್ಮ ರಿಟರ್ನ್ಸ್​ನಲ್ಲಿ ತುಪ್ಪದ ಬೆಡಗಿ ರಾಗಿಣಿ ಹೊಸ ವೇಶ

ಈ ಚಿತ್ರದ ನಿರ್ದೇಶಕ ಬ್ರಹ್ಮ ಮಾತನಾಡಿ, ನಾನು 2000 ನೇ ಇಸವಿಯಿಂದಲ್ಲೂ ಅನಿಮೇಷನ್‌ ಹಾಗೂ ವಿಎಫ್​ಎಕ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಈ ಕುರಿತು ಕೆಲವರಿಗೆ ತರಗತಿ ಕೂಡ ತೆಗೆದುಕೊಳ್ಳುತ್ತೇನೆ. ಇದು ನನ್ನ ಎರಡನೇ ಚಿತ್ರ ಈ ಹಿಂದೆ ‘ಸಿದ್ದಿ ಸೀರೆ’ ಎಂಬ ಚಿತ್ರ ನಿರ್ದೇಶಿಸಿದ್ದೆ. ಅಫ್ಜಲ್ ಅವರು ಹೇಳಿದ ಒಂದೆಳೆ ಕಥೆ ಇಷ್ಟವಾಯಿತು. ನಾನು ಅದನ್ನು ಮುಂದುವರೆಸಿದೆ. ಇದರಲ್ಲಿ ಮಾಟ - ಮಂತ್ರ, ಬ್ಲ್ಯಾಕ್ ಮ್ಯಾಜಿಕ್ ಅಂತ ಏನೂ ಇಲ್ಲ. ಇದೊಂದು ಕ್ರೈಂ ಥ್ರಿಲ್ಲರ್, ಸೂಪರ್ ಹೀರೋ ಕಾನ್ಸೆಪ್ಟ್​ನ ಚಿತ್ರ ಎಂದು ತಿಳಿಸಿದರು.

ಈ ಚಿತ್ರಕ್ಕೆ ರಾಜೀವ್ ಗಣೇಶನ್ ಕ್ಯಾಮರಾ ವರ್ಕ್ ಇದೆ. ರಾಗಿಣಿ ದ್ವಿವೇದಿ ಮುಖ್ಯ ಭೂಮಿಕೆಯಲ್ಲಿರುವ ಚಿತ್ರದಲ್ಲಿ ನಟ ಸ್ವರ್ಣ ಚಂದ್ರ ಅಭಿನಯಿಸಿದ್ದಾರೆ. ಸದ್ಯ ಬಹುತೇಕ ಚಿತ್ರೀಕರಣ ಮುಗಿಸಿರೋ ಸಾರಿ ಕರ್ಮ ರಿಟರ್ನ್ಸ್ ಸದ್ಯದಲ್ಲೇ ಟೀಸರ್ ಬಿಡುಗಡೆ ಮಾಡಲಿದೆ.

ಇದನ್ನೂ ಓದಿ:'ಭೀಮ' ಹೆಸರಲ್ಲೇ ಇದೆ ಪವರ್‌.. ದುನಿಯಾ ವಿಜಿ ಚಿತ್ರದ ಮೇಕಿಂಗ್‌ ಮೂಲಕ ಹಲ್‌ಚಲ್!

ABOUT THE AUTHOR

...view details