ಕನ್ನಡ, ತಮಿಳು ಹಾಗು ಹಿಂದಿ ಚಿತ್ರರಂಗದಲ್ಲಿ ಬೋಲ್ಡ್ ನಟನೆ ಜೊತೆಗೆ ಗ್ಲ್ಯಾಮರ್ನಿಂದ ಬೇಡಿಕೆಯನ್ನು ಹೊಂದಿರುವ ನಟಿ ರಾಗಿಣಿ ದ್ವಿವೇದಿ, ಕಳೆದ ಒಂದು ದಶಕದಿಂದ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ರಾಗಿಣಿ ದ್ವಿವೇದಿ ಕೊರೊನಾ ಸಂದರ್ಭದಲ್ಲಿ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಆ ಸಮಯದಲ್ಲಿ ಅವರು ಹಸಿದವರ ಹೊಟ್ಟೆಯನ್ನು ತುಂಬಿಸುವ ಕೆಲಸ ಮಾಡಿ ಗಮನ ಸೆಳೆದಿದ್ದರು. ಸದ್ಯ ಸಿನಿಮಾ ಜೊತೆಗೆ ಆಲ್ಬಂ ವಿಡಿಯೋಗಳನ್ನು ಮಾಡುತ್ತಿರುವ ರಾಗಿಣಿ ದ್ವಿವೇದಿ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 34ನೇ ವಸಂತಕ್ಕೆ ಕಾಲಿಟ್ಟಿರೋ ಕೆಂಪೇಗೌಡನ ಬೆಡಗಿ, ಈ ವರ್ಷದ ಹುಟ್ಟು ಹಬ್ಬವನ್ನು ಸ್ವಲ್ಪ ವಿಭಿನ್ನವಾಗಿ ಆಚರಿಸಿಕೊಂಡಿದ್ದಾರೆ.
ನಟಿಮಣಿಯರು ಸಹಜವಾಗಿ ತಮ್ಮ ಬರ್ತ್ ಡೇಯನ್ನು ಕುಟುಂಬದವರು ಹಾಗು ಸ್ನೇಹಿತರ ಜೊತೆಗೆ ಪಾರ್ಟಿ ಮಾಡುವ ಮೂಲಕ ಜೋರಾಗಿಯೇ ಆಚರಿಸಿಕೊಳ್ಳುತ್ತಾರೆ. ತಮ್ಮ ದಶಕಗಳ ಸಿನಿ ಜರ್ನಿಯಲ್ಲಿ ಏಳು ಬೀಳುಗಳನ್ನು ಕಂಡಿರುವ ಪಂಜಾಬಿ ಮೂಲದ ಬೆಡಗಿ ರಾಗಿಣಿ ಇಂದು ಕೆಲ ಸಾಮಾಜಿಕ ಕೆಲಸಗಳ ಮೂಲಕ ಬರ್ತಡೇ ಆಚರಿಸಿಕೊಂಡರು. ಇಂದು ಚಾಮರಾಜಪೇಟೆಯ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ಉಚಿತ ಆರೋಗ್ಯ ತಪಾಸಣೆ, ನೇತ್ರ ತಪಾಸಣೆ, ಮೆಡಿಕಲ್ ಕಿಟ್ಸ್ ಹಂಚಿದರು. ಅಲ್ಲದೇ ಕನ್ನಡ ಚಿತ್ರರಂಗದ ಹಿರಿಯ ಪೋಷಕ ಕಲಾವಿದರನ್ನು ಸನ್ಮಾನ ಮಾಡುವ ಮುಖಾಂತರ ಅರ್ಥಪೂರ್ಣವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ಕೆ ಮಂಜು ರಿಂದ ಸರ್ಪ್ರೈಸ್: ಈ ವೀರಮದಕರಿ ಸುಂದರ ರಾಗಿಣಿ ದ್ವಿವೇದಿಗೆ ನಿರ್ಮಾಪಕ ಕೆ ಮಂಜು ಈ ವೇಳೆ ಇಂದು ಒಂದು ಸರ್ಪ್ರೈಸ್ ಉಡುಗೊರೆಯನ್ನು ನೀಡಿದರು. ಚಿತ್ರರಂಗದಲ್ಲಿ ರಾಗಿಣಿ ದ್ವಿವೇದಿ ಅವರಂತೆ ಏಳುಬೀಳು ಕಂಡಿರುವ ನಿರ್ಮಾಪಕ ಕೆ ಮಂಜು ಅವರು ರಾಗಿಣಿ ಜೊತೆ ಕೇಕ್ ಕಟ್ ಮಾಡುವ ಮೂಲಕ ಬರ್ತ್ ಡೇಯನ್ನ ಆಚರಣೆ ಮಾಡಿದರು. ಈ ಸಂದರ್ಭದಲ್ಲಿ ನಿರ್ಮಾಪಕ ಕೆ ಮಂಜು ಅವರು ರಾಗಿಣಿ ಜೊತೆ ನೈಜ ಘಟನೆಯ ರಾಗಿಣಿ "ಐಪಿಎಸ್ ವರ್ಸಸ್ ಐಎಎಸ್" ಎಂಬ ಸಿನಿಮಾ ಮಾಡುವುದಾಗಿ ಘೋಷಿಸುವ ಮೂಲಕ ರಾಗಿಣಿಗೆ ಬರ್ತಡೇ ಗಿಫ್ಟ್ ಆಗಿ ನೀಡಿದರು.
ಈ ಕಥೆ ಕೆಲವು ತಿಂಗಳಗಳ ಹಿಂದೆ ರಾಜ್ಯದಲ್ಲಿ ಇಬ್ಬರು ಟಾಪ್ ಐಐಎಸ್ ಹಾಗು ಐಪಿಎಸ್ ಅಧಿಕಾರಿಗಳು ಹೆಚ್ಚು ಸುದ್ದಿಯಲ್ಲಿದ್ದರು. ಇದೇ ಕಥೆಯನ್ನ ನಿರ್ದೇಶಕ ಡೇವಿಡ್ ಎಂಬುವರು ರಾಗಿಣಿ ಜೊತೆ ಸಿನಿಮಾ ಮಾಡ್ತಾ ಇದ್ದಾರೆ. ಆದರೆ ಇದು ರೂಪ ಮತ್ತು ರೋಹಿಣಿ ಸಿಂಧೂರಿ ಸ್ಟೋರಿ ಇರಬಹುದು ಎಂಬ ಸುಳಿವು ಸಿಕ್ಕಿದೆ. ಇನ್ನು ರಾಗಿಣಿಯವರ ಜೊತೆ ನಿರ್ಮಾಪಕ ಕೆ ಮಂಜು ರಾಗಿಣಿ ಐಪಿಎಸ್ ಸಿನಿಮಾ ಮಾಡಿದ್ರು. ಈಗ ರಾಗಿಣಿ ಐಎಎಸ್ ಮಾಡಲು ರೆಡಿಯಾಗಿರೋದು ಕನ್ನಡ ಚಿತ್ರರಂಗದಲ್ಲಿ ಸಂಚಲನ ಮೂಡಿಸಲಿದೆ.