ಕರ್ನಾಟಕ

karnataka

ETV Bharat / entertainment

'ರಾಘವೇಂದ್ರ ಸ್ಟೋರ್ಸ್' ಟ್ರೇಲರ್​​ ಅನಾವರಣಗೊಳಿಸಲಿದ್ದಾರೆ ಕಾಂತಾರ ಸ್ಟಾರ್ ರಿಷಬ್​ ಶೆಟ್ಟಿ

ರಾಘವೇಂದ್ರ ಸ್ಟೋರ್ಸ್ ಟ್ರೇಲರ್ ಬಿಡುಗಡೆ ದಿನಾಂಕವನ್ನು ಹೊಂಬಾಳೆ ಫಿಲ್ಸ್ಮ್ ಘೋಷಿಸಿದೆ.

Raghavendra Stores Trailer
ರಾಘವೇಂದ್ರ ಸ್ಟೋರ್ಸ್ ಟ್ರೇಲರ್

By

Published : Apr 15, 2023, 7:21 PM IST

ಕನ್ನಡ ಚಿತ್ರರಂಗದಲ್ಲಿ ನವರಸ ನಾಯಕ ಜಗ್ಗೇಶ್​ ಅಭಿನಯದ 'ರಾಘವೇಂದ್ರ ಸ್ಟೋರ್ಸ್' ಸಿನಿಮಾ ಒಂದಲ್ಲಾ ಒಂದು ವಿಚಾರವಾಗಿ ಸಖತ್ ಸದ್ದು ಮಾಡುತ್ತಿದೆ. ಚಿತ್ರದ 'ಸಿಂಗಲ್ ಸುಂದರ ಯಾವಾಗ ಹಾಕ್ತ್ಯಾ ಉಂಗುರ' ಹಾಡು ತೆರೆಕಂಡು, 2 ಮಿಲಿಯನ್​​ಗೂ ಹೆಚ್ಚು ವೀಕ್ಷಣೆ ಕಂಡಿದೆ. ಇದೀಗ ಟ್ರೇಲರ್​ ಬಿಡುಗಡೆ ದಿನಾಂಕ ಮತ್ತು ಯಾರು ಅನಾವರಣಗೊಳಿಸಲಿದ್ದಾರೆ ಎಂದು ಹೊಂಬಾಳೆ ಫಿಲ್ಸ್ಮ್ ತಿಳಿಸಿದೆ.

ರಾಘವೇಂದ್ರ ಸ್ಟೋರ್ಸ್ ಟ್ರೇಲರ್ ಬಿಡುಗಡೆ ದಿನಾಂಕ: 'ರಾಘವೇಂದ್ರ ಸ್ಟೋರ್ಸ್ ಸಿನ್ಸ್ 1972' ಸಿನಿಮಾ ಟ್ರೇಲರ್​ ಇದೇ 17ರಂದು ಬಿಡುಗಡೆ ಆಗಲಿದೆ. ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಟ್ರೇಲರ್​ ಅನಾವರಣಗೊಳಿಸಲಿದ್ದಾರೆ ಎಂದು ಹೊಂಬಾಳೆ ಫಿಲ್ಸ್ಮ್ ಸೋಶಿಯಲ್​ ಮೀಡಿಯಾ ಪೋಸ್ಟ್ ಮೂಲಕ ತಿಳಿಸಿದೆ. 'ನಮ್ಮ ಶಿವನ ಕಡೆಯಿಂದ ರಾಘವೇಂದ್ರ ದರ್ಶನ, ಟ್ರೇಲರ್ ಲಾಂಚ್' ಎಂದು ಬರೆದುಕೊಂಡಿದೆ. ಸಿನಿಮಾ ಕೂಡ ಶೀಘ್ರದಲ್ಲೇ, ಇದೇ 28ರಂದು ರಿಲೀಸ್​ ಆಗಲಿದೆ.

ಸಿಂಗಲ್​ ಸುಂದ್ರ ಕ್ರೇಜ್​: ಏಪ್ರಿಲ್​ 12ರಂದು 'ಸಿಂಗಲ್ ಸುಂದರ ಯಾವಾಗ ಹಾಕ್ತ್ಯಾ ಉಂಗುರ' ಹಾಡನ್ನು ನಟ, ನಿರ್ದೇಶಕ ರಕ್ಷಿತ್​ ಶೆಟ್ಟಿ ಬಿಡುಗಡೆ ಮಾಡಿದ್ದರು. ರಿಲೀಸ್​ ಆದ ಕೆಲವೇ ಕ್ಷಣದಿಂದ ಹಾಡು ಸಖತ್​ ಸೌಂಡ್​ ಮಾಡ್ತಿದೆ. 2 ಮಿಲಿಯನ್​​ಗೂ ಹೆಚ್ಚು ವೀಕ್ಷಣೆ ಕಂಡಿದ್ದು, ಅಭಿಮಾನಿಗಳಿಗೆ ಹೊಂಬಾಳೆ ಫಿಲ್ಸ್ಮ್ ಧನ್ವಯವಾದ ತಿಳಿಸಿದೆ. ಹಾಡಿನ ಪೋಸ್ಟರ್ ಹಂಚಿಕೊಂಡಿರುವ ಸಿನಿಮಾ ನಿರ್ಮಾಣ ಸಂಸ್ಥೆ ''2 ಮಿಲಿಯನ್ ವೀಕ್ಷಣೆಗಳು. ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು'' ಎಂದು ಬರೆದುಕೊಂಡಿದೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಾಹಿತ್ಯಕ್ಕೆ, ವಿಜಯ್ ಪ್ರಕಾಶ್ ಹಾಗು ನವೀನ್ ಸಜ್ಜು ದನಿಯಾಗಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನವಿದೆ.

ಇದನ್ನೂ ಓದಿ:ಸಿಂಗಲ್ ಸುಂದರನಾಗಿ ಗಮನ ಸೆಳೆಯುತ್ತಿರುವ ನವರಸ ನಾಯಕ ಜಗ್ಗೇಶ್

ಈ ಚಿತ್ರದಲ್ಲಿ ಹೋಟೆಲ್ ಮಾಲೀಕನ ಜೊತೆಗೆ ಬ್ರಹ್ಮಚಾರಿ ಅಡುಗೆ ಭಟ್ಟನ ಪಾತ್ರದಲ್ಲಿ ನಟ ಜಗ್ಗೇಶ್​ ನಟಿಸಿದ್ದಾರೆ. ಸದ್ಯ ಸದ್ದು ಮಾಡುತ್ತಿರುವ ಹಾಡು ಬ್ರಹ್ಮಚಾರಿಗಳ ಕಷ್ಟ ಸುಖದ ಕಥೆ ಹೇಳುತ್ತಿದೆ. ಸಂತೋಷ್ ಆನಂದ್ ರಾಮ್ ನಿರ್ದೇಶನವಿದ್ದು, ಹೊಂಬಾಳೆ ಫಿಲ್ಸ್​ ಸಿನಿಮಾ ನಿರ್ಮಾಣ ಮಾಡಿದೆ. ಜಗ್ಗೇಶ್ ಜೋಡಿಯಾಗಿ ನಟಿ ಶ್ವೇತಾ ಶ್ರೀವಾತ್ಸವ್ ಅಭಿನಯಿಸಿದ್ದಾರೆ.

ಯಶಸ್ಸಿನ ಮಾರ್ಗದಲ್ಲಿ ಹೊಂಬಾಳೆ ಫಿಲ್ಸ್ಮ್ :ಕೆಜಿಎಫ್ 2, ಕೆಜಿಎಫ್​ 1, ಕಾಂತಾರ ಸಿನಿಮಾ ಮೂಲಕ ಸಖತ್​ ಸದ್ದು ಮಾಡಿರುವ ಚಲನಚಿತ್ರ ನಿರ್ಮಾಣ ಸಂಸ್ಥೆಹೊಂಬಾಳೆ ಫಿಲ್ಸ್ಮ್ ಮುಂದಿನ ದಿನಗಳಲ್ಲಿ ದೊಡ್ಡ ದೊಡ್ಡ ಸಿನಿಮಾ ನಿರ್ಮಾಣ ಮಾಡುವುದಾಗಿ ತಿಳಿಸಿದೆ. ಸದ್ಯ ಕೆಲ ಬಿಗ್​ ಬಜೆಟ್​​ ಸಿನಿಮಾಗಳು ನಿರ್ಮಾಣ ಹಂತದಲ್ಲಿದೆ. ರಾಘವೇಂದ್ರ ಸ್ಟೋರ್ಸ್ ಕೂಡ ಶೀಘ್ರದಲ್ಲೇ ತೆರೆಕಾಣಲಿರುವ ಚಿತ್ರ. ಇದಲ್ಲದೇ ಕಾಂತಾರ 2, ಸಲಾರ್​, ಯುವ, ಭಘೀರ, ಧೂಮಂ, ರಿಚರ್ಡ್ ಆ್ಯಂಟನಿ, ರಘು ತಾತ, ಟೈಸನ್​ ಚಿತ್ರಗಳು ಇದೇ ಹೊಂಬಾಳೆ ಫಿಲ್ಸ್ಮ್ ನಿಂದ ಬಿಡುಗಡೆ ಆಗಲಿದೆ. ಮುಂದಿನ 5 ವರ್ಷಗಳಲ್ಲಿ ಬಹು ಭಾಷೆಗಳಲ್ಲಿ ಚಲನಚಿತ್ರ ನಿರ್ಮಿಸಲಿದ್ದೇವೆ. ಸಿನಿಮಾಗಳಿಗೆ 3 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಬಂಡವಾಳ ಹೂಡುವ ಯೋಜನೆ ಇದೆ ಎಂದು ನಿರ್ಮಾಪಕ ವಿಜಯ್ ಕಿರಗಂದೂರು ಈ ಹಿಂದೆಯೇ ತಿಳಿಸಿದ್ದಾರೆ. ರಾಘವೇಂದ್ರ ಸ್ಟೋರ್ಸ್ ಯಾವ ಮಟ್ಟಿಗೆ ಯಶಸ್ಸು ಕಾಣಲಿದೆ ಎಂಬುದನ್ನು ಕಾದು ನೋಡಬೇಕು.

ಇದನ್ನೂ ಓದಿ:ಚೇತನ್ ವೀಸಾ ರದ್ದು: ಅಮೆರಿಕಕ್ಕೆ ಹೋಗಲ್ಲ, ಇಲ್ಲೇ ಇರುತ್ತೇನೆಂದ ನಟ

ABOUT THE AUTHOR

...view details