ಕರ್ನಾಟಕ

karnataka

ETV Bharat / entertainment

'ಪ್ರೀತಿಸಲು ನನಗೆ ಸಮಯವಿಲ್ಲ': ಶೆಹನಾಜ್ ಜೊತೆ ಡೇಟಿಂಗ್​​ ವದಂತಿಗೆ ರಾಘವ್ ಪ್ರತಿಕ್ರಿಯೆ - ಸಲ್ಮಾನ್​ ಖಾನ್

ಶೆಹನಾಜ್ ಜೊತೆ ಡೇಟಿಂಗ್​​ ವದಂತಿಗಳನ್ನು ರಾಘವ್ ಜುಯಲ್ ನಿರಾಕರಿಸಿದ್ದಾರೆ.

raghav juyal shehnaaz gill
ರಾಘವ್ ಶೆಹನಾಜ್ ಡೇಟಿಂಗ್​​ ವದಂತಿ

By

Published : Apr 18, 2023, 1:12 PM IST

ನೃತ್ಯಗಾರ, ನಟ ಮತ್ತು ಜನಪ್ರಿಯ ನಿರೂಪಕ ರಾಘವ್ ಜುಯಲ್ (Raghav Juyal) ಸದ್ಯ ಮುಂಬರುವ ತಮ್ಮ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರ ಪ್ರಚಾರದಲ್ಲಿ ನಿರತರಾಗಿದ್ದಾರೆ. ಮೊದಲ ಬಾರಿಗೆ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಇದರಲ್ಲಿ ಬಿಗ್ ಬಾಸ್ ಖ್ಯಾತಿಯ ಶೆಹನಾಜ್ ಗಿಲ್ ಸಹ ಅಭಿನಯಿಸಿದ್ದಾರೆ. ಒಂದೇ ಚಿತ್ರದಲ್ಲಿ ರಾಘವ್ ಮತ್ತು ಶೆಹನಾಜ್ ಸ್ಕ್ರೀನ್ ಶೇರ್ ಮಾಡಿದ್ದು, ಡೇಟಿಂಗ್ ವದಂತಿಗಳು ಹರಡಿವೆ. ಅಲ್ಲದೇ ಈ ಚಿತ್ರದ ಟ್ರೇಲರ್ ಲಾಂಚ್‌ ಪ್ರೋಗ್ರಾಮ್​ನಲ್ಲಿ ನಾಯಕ ನಟ ಸಲ್ಮಾನ್ ಖಾನ್ ಅವರು ಶೆಹನಾಜ್‌ ಅವರಿಗೆ ಜೀವನದಲ್ಲಿ ಮುಂದುವರಿಯುವಂತೆ ಕೇಳಿಕೊಂಡ ನಂತರ ಡೇಟಿಂಗ್​ ವದಂತಿಗೆ ತುಪ್ಪ ಸುರಿದಂತಾಗಿದೆ.

ಮೌನ ಮುರಿದ ರಾಘವ್ ಜುಯಲ್.. ಡೇಟಿಂಗ್ ವದಂತಿಗಳು ಕೆಲಸ ಮತ್ತು ವೈಯಕ್ತಿಕ ಜೀವನದವರೆಗೆ ಬಂದ ಹಿನ್ನೆಲೆ ಸ್ವತಃ ರಾಘವ್ ಜುಯಲ್ ಈ ಬಗ್ಗೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಎಲ್ಲಾ ಊಹಾಪೋಹಗಳನ್ನು ತಳ್ಳಿಹಾಕಿದ ರಾಘವ್, ಪ್ರೀತಿಸಲು ನನಗೆ ಸಮಯವಿಲ್ಲ ಎಂದು ಹೇಳಿದ್ದಾರೆ. ಇಂಟರ್ನೆಟ್ ವದಂತಿಗಳು (ಸಾಮಾಜಿಕ ಜಾಲತಾಣದಲ್ಲಿ ಹರಡುವ ಊಹಾಪೋಹಗಳು) ನನ್ನನ್ನು ತಲುಪುವುದಿಲ್ಲ. ಅವು ನಿಜವೋ ಸುಳ್ಳೋ ಎಂಬ ಬಗ್ಗೆ ನನಗೆ ಖಚಿತವಿಲ್ಲ. ಮತ್ತು ಅವುಗಳನ್ನು ನಾನೇ ನೋಡುವ ಮತ್ತು ಕೇಳುವವರೆಗೂ ನಾನು ಅದನ್ನು ನಂಬುವುದಿಲ್ಲ ಎಂದು ತಿಳಿಸಿದ್ದಾರೆ.

'ಇಂಥಹ ವಿಚಾರಗಳಿಗೆ ನನ್ನಲ್ಲಿ ಸಮಯವಿಲ್ಲ':ತನ್ನ ಕೆಲಸ ಸದ್ದು ಮಾಡಬೇಕೆಂದು ಬಯಸುತ್ತೇನೆ. ಸಿನಿಮಾಗಾಗಿ ಬಂದಿದ್ದೇನೆ. ನನನ್ನು ನಟನಾಗಿ, ನರ್ತಕನಾಗಿ ಮತ್ತು ನಿರೂಪಕನಾಗಿ ಜನರು ನೋಡಬೇಕು. ನನ್ನ ವೃತ್ತಿಜೀವನ, ಕೆಲಸಗಳು ಮಾತನಾಡಬೇಕು. ಇಂಥಹ (ಡೇಟಿಂಗ್​ ವದಂತಿ) ವಿಚಾರಗಳಿಗೆ ನನ್ನಲ್ಲಿ ಸಮಯವಿಲ್ಲ. ಕೆಲಸ ಹೊಸತುಪಡಿಸಿ ಬಾಕಿ ವಿಷಯಗಳಿಗೆ ಸ್ಪಂದಿಸಲು ಸಮಯದ ಕೊರತೆ ಇದೆ. ನಾನು ಡಬಲ್ ಶಿಫ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನ ವೃತ್ತಿಜೀವನದ ಈ ಹಂತದಲ್ಲಿ ಇದಕ್ಕೆಲ್ಲ ಸಮಯವಿಲ್ಲ ಎಂದು ತಿಳಿಸಿದರು.

ಶೆಹನಾಜ್​ಗೆ ಸಲ್ಮಾನ್​ ಸಲಹೆ: ಇತ್ತೀಚೆಗಷ್ಟೇ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಟ್ರೇಲರ್​ ಅದ್ಧೂರಿಯಾಗಿ ಬಿಡುಗಡೆ ಆಯಿತು. ಇಡೀ ಚಿತ್ರತಂಡದವರು ಆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರಾಘವ್ ಜುಯಲ್ ಮತ್ತು ಶೆಹನಾಜ್ ಸಹ ಬ್ಲ್ಯಾಕ್​ ಡ್ರೆಸ್​ನಲ್ಲಿ ಕಂಗೊಳಿಸಿದರು. ಆ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್​, ಶೆಹನಾಜ್‌ ಅವರಿಗೆ "ಜೀವನದಲ್ಲಿ ಮುಂದುವರಿಯಿರಿ" ಎಂದು ಹೇಳಿದರು. ಅದಕ್ಕೆ ನಟಿ 'ಮುಂದುವರಿದಿದ್ದೇನೆ' ಎಂದು ಉತ್ತರಿಸಿದರು. ಈ ಹಿನ್ನೆಲೆ ಶೆಹನಾಜ್​ ರಾಘವ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಊಹಿಸಲಾಯಿತು. ಆದರೆ, ಹರಿದಾಡುತ್ತಿರುವ ವದಂತಿಗಳ ಬಗ್ಗೆ ಶೆಹನಾಜ್ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ.

ಸಿದ್​​ನಾಜ್​ ಸದ್ದು..ಸಲ್ಮಾನ್​​ ಖಾನ್​​ ನೇತೃತ್ವದ ಜನಪ್ರಿಯ ಹಿಂದಿ ಬಿಗ್​ ಬಾಸ್ ಶೋನಲ್ಲಿ ಶೆಹನಾಜ್​ ಗಿಲ್​​ ಭಾಗಿ ಆಗ ಫೈನಲ್​ ಹಂತದವರೆಗೂ ತಲುಪಿದ್ದರು. ಸಿದ್ಧಾರ್ಥ್ ಶುಕ್ಲಾ ​​ಬಿಗ್​ ಬಾಸ್ ಸೀಸನ್​ 13ರ ವಿಜೇತರಾಗಿ ಹೊರಹೊಮ್ಮಿದರು. ಇವರಿಬ್ಬರ ಕೆಮಿಸ್ಟ್ರಿ ಚೆನ್ನಾಗಿ ವರ್ಕ್​ ಔಟ್​ ಅಗಿ ಅಭಿಮಾನಿಗಳನ್ನು ಸೆಳೆಯುವಲ್ಲಿ ಸಫಲರಾದರು. ಇಬ್ಬರಿಗೂ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದರು. ದುರಾದೃಷ್ಟವಶಾತ್​ ಹೃದಯಾಘಾತಕ್ಕೊಳಗಾಗಿ ಸಿದ್ಧಾರ್ಥ್ ಶುಕ್ಲಾ ಕೊನೆಯುಸಿರೆಳೆದರು. ಆದ್ರೂ ಕೂಡ ಸಿದ್​​ನಾಜ್​ ಶೀರ್ಷಿಕೆಯಲ್ಲಿ ಈ ಜೋಡಿ ವಿಡಿಯೋಗಳು ಈಗಲೂ ಸದ್ದು ಮಾಡುತ್ತವೆ. ಈ ಹಿನ್ನೆಲೆ ಸಲ್ಮಾನ್​ ಅವರು ಶೆಹನಾಜ್​ ಅವರಿಗೆ ತಮ್ಮ ಜೀವನದಲ್ಲಿ ಮುಂದುವರಿಯುವಂತೆ ಕೇಳಿಕೊಂಡಿದ್ದು.

ಇದನ್ನೂ ಓದಿ:ಪಾತ್ರದಿಂದ ಹೊರಬರದ ಡಾರ್ಲಿಂಗ್ ಕೃಷ್ಣ: ಚಿತ್ರತಂಡ, ಪತ್ನಿ ಮಿಲನ ನಾಗರಾಜ್ ಶಾಕ್​!

ಫರ್ಹಾದ್ ಸಾಮ್ಜಿ ನಿರ್ದೇಶನದ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದಲ್ಲಿ ಪೂಜಾ ಹೆಗ್ಡೆ, ಪಲಕ್ ತಿವಾರಿ, ಜಸ್ಸಿ ಗಿಲ್, ಸಿದ್ಧಾರ್ಥ್ ನಿಗಮ್, ಭೂಮಿಕಾ ಚಾವ್ಲಾ, ಜಗಪತಿ ಬಾಬು ಮತ್ತು ವೆಂಕಟೇಶ್ ದಗ್ಗುಬಾಟಿ ಸೇರಿದಂತೆ ಹಲವರು ನಟಿಸಿದ್ದಾರೆ. ಇದೇ ಏಪ್ರಿಲ್​ 21ರಂದು ಚಿತ್ರ ತೆರೆಕಾಣಲಿದ್ದು, ಗೆಲ್ಲುವ ವಿಶ್ವಾಸದಲ್ಲಿ ಚಿತ್ರತಂಡವಿದೆ.

ಇದನ್ನೂ ಓದಿ:ವಿಮಾನ ನಿಲ್ದಾಣದಲ್ಲಿ ನಡು ಬಳುಕಿಸಿದ ಊರ್ವಶಿ ರೌಟೇಲಾ: ಪಾಕ್​ ಕ್ರಿಕೆಟಿಗನ ಜತೆ ಡೇಟಿಂಗ್​ ವದಂತಿ..​ ಅಭಿಮಾನಿಗಳಿಂದ ಕಮೆಂಟ್​​

ABOUT THE AUTHOR

...view details