ಹೈ - ಪ್ರೊಫೈಲ್ ಕಪಲ್ ರಾಘವ್ ಚಡ್ಡಾ ಮತ್ತು ಪರಿಣಿತಿ ಚೋಪ್ರಾ ಮಾರ್ಚ್ ತಿಂಗಳಿನಿಂದ ಸುದ್ದಿಯಲ್ಲಿದ್ದಾರೆ. ರಾಘವ್ ಚಡ್ಡಾ ರಾಜಕೀಯ ಕ್ಷೇತ್ರದ ಗಣ್ಯ ವ್ಯಕ್ತಿ, ಪರಿಣಿತಿ ಚೋಪ್ರಾ ಸಿನಿ ಸಾಧಕಿ. ಇವರಿಬ್ಬರೂ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಮಾರ್ಚ್ನಲ್ಲಿ ಸದ್ದು ಮಾಡಿತು. ಬಳಿಕ ಮೇ ತಿಂಗಳಿನಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡು ವದಂತಿಗಳಿಗೆ ಫುಲ್ ಸ್ಟಾಪ್ ಇಟ್ಟರು. ಇದೀಗ ಮದುವೆ ಸಲುವಾಗಿ ಸದ್ದು ಮಾಡುತ್ತಿದ್ದಾರೆ.
ಆಮ್ ಆದ್ಮಿ ಪಕ್ಷದ ಯುವ ಸಂಸದ ರಾಘವ್ ಚಡ್ಡಾ ಮತ್ತು ಬಾಲಿವುಡ್ ಬ್ಯೂಟಿ ಪರಿಣಿತಿ ಚೋಪ್ರಾ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ. ಇವರಿಬ್ಬರ ಮದುವೆ ಬಗ್ಗೆ ಅಭಿಮಾನಿಗಳು ಉತ್ಸಾಹ ವ್ಯಕ್ತಪಡಿಸುತ್ತಿದ್ದಾರೆ. ಪರಿಣಿತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ನಂತರ, ಎಎಪಿ ನಾಯಕ ರಾಘವ್ ಚಡ್ಡಾ ಜೀವನದಲ್ಲಿ ಕೆಲ ಬದಲಾವಣೆಗಳಾಗಿವೆ. ಈ ವಿಚಾರವನ್ನು ಸ್ವತಃ ರಾಘವ್ ಅವರೇ ಬಹಿರಂಗಪಡಿಸಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ, ರಾಘವ್ ಚಡ್ಡಾ ಅವರು ಪರಿಣಿತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ನಂತರ ತಮ್ಮ ಜೀವನದಲ್ಲಿ ಆದ ಬದಲಾವಣೆಗಳ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ನನ್ನ ಸಹುದ್ಯೋಗಿಗಳು ಮತ್ತು ಪಕ್ಷದ ಮುಖಂಡರು 'ಪರಿ' ಹೆಸರಿಟ್ಟು ನನ್ನನ್ನು ಬಹಳ ಚುಡಾಯಿಸುತ್ತಿದ್ದರು. ನಿಶ್ಚಿತಾರ್ಥದ ನಂತರ ಅದು ಕಡಿಮೆಯಾಗಿದೆ ಎಂದು ರಾಘವ್ ತಿಳಿಸಿದ್ದಾರೆ.
ಆದಷ್ಟು ಬೇಗ ಮದುವೆ ಆಗುವಂತೆ ನನ್ನ ಸಹುದ್ಯೋಗಿಗಳು, ಸ್ನೇಹಿತರು ನನ್ನ ಮೇಲೆ ಒತ್ತಡ ಹೇರುತ್ತಿದ್ದರು. ಆದರೆ ನಾನು ಮತ್ತು ಪರಿ ನಿಶ್ಚಿತಾರ್ಥ ಮಾಡಿಕೊಂಡ ಬಳಿಕ ಅವರು ಆ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದ್ದಾರೆ. ಪದೇ ಪದೆ ಪರಿ ಹೆಸರನ್ನು ತೆಗೆದುಕೊಂಡು ನನ್ನನ್ನು ಚುಡಾಯಿಸುತ್ತಿಲ್ಲ ಎಂದು ರಾಘವ್ ಚಡ್ಡಾ ಹೇಳಿದರು.