ಕರ್ನಾಟಕ

karnataka

ETV Bharat / entertainment

ರಾಧಿಕಾ ಕುಮಾರಸ್ವಾಮಿ ಬರ್ತ್​ಡೇ ಸೆಲೆಬ್ರೇಶನ್​: ಭೈರಾದೇವಿ, ಅಜಾಗ್ರತ ಸಿನಿಮಾ ಮಾಹಿತಿ ಇಲ್ಲಿದೆ - ಭೈರಾದೇವಿ

Radhika kumaraswamy: ನಟಿ ರಾಧಿಕಾ ಕುಮಾರಸ್ವಾಮಿ ನಟನೆಯ ಭೈರಾದೇವಿ, ಅಜಾಗ್ರತ ಚಿತ್ರಗಳು ಬಿಡುಗಡೆಗೆ ಸಜ್ಜಾಗುತ್ತಿವೆ.

Radhika kumaraswamy
ರಾಧಿಕಾ ಕುಮಾರಸ್ವಾಮಿ

By ETV Bharat Karnataka Team

Published : Nov 12, 2023, 10:37 AM IST

ರಾಧಿಕಾ ಕುಮಾರಸ್ವಾಮಿ...

ಸ್ಯಾಂಡಲ್​ವುಡ್​ ಸ್ವೀಟಿಯಾಗಿ ಬಣ್ಣದ ಲೋಕದಲ್ಲಿ ತನ್ನದೇ ಬೇಡಿಕೆ ಹೊಂದಿರುವ ನಟಿ ರಾಧಿಕಾ ಕುಮಾರಸ್ವಾಮಿ. ನಟನೆ ಜೊತೆಗೆ ನಿರ್ಮಾಣದಲ್ಲೂ ಗುರುತಿಸಿಕೊಂಡಿದ್ದಾರೆ. ರಾಧಿಕಾ ಕುಮಾರಸ್ವಾಮಿ ಶಮಿಕಾ ಎಂಟರ್ ಪ್ರೈಸಸ್ ಮೂಲಕ ಮೂರು ಸಿನಿಮಾ ನಿರ್ಮಾಣ ಮಾಡಿರೋದು ನಿಮಗೆ ಗೊತ್ತಿರುವ ವಿಚಾರ. ದಮಯಂತಿ ಸಿನಿಮಾ ಬಳಿಕ ರಾಧಿಕಾ ಕುಮಾರಸ್ವಾಮಿ ಅವರ ಯಾವ ಸಿನಿಮಾ ಬರಲಿದೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿತ್ತು. ಫೈನಲಿ, ರಾಧಿಕಾ ಕುಮಾರಸ್ವಾಮಿ ಹುಟ್ಟು ಹಬ್ಬದ ಆಚರಣೆ ಸಂದರ್ಭ ಎರಡು ಬಹು ನಿರೀಕ್ಷಿತ ಸಿನಿಮಾಗಳ ಮಾಹಿತಿ ಹೊರ ಬಿದ್ದಿದೆ.

ಇತ್ತೀಚೆಗೆ ರಾಧಿಕಾ ಕುಮಾರಸ್ವಾಮಿ 37ನೇ ಜನ್ಮದಿನ ಆಚರಿಸಿಕೊಂಡಿದ್ದಾರೆ. ನಿನ್ನೆ ಡಾಲರ್ಸ್ ಕಾಲೋನಿಯ ತಮ್ಮ ನಿವಾಸದ ಬಳಿ ಅಭಿಮಾನಿಗಳ ಜೊತೆ ಕೇಕ್‌ ಕಟ್ ಮಾಡುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ವಿಶೇಷವಾಗಿಸಿದ್ದಾರೆ. ಅದಕ್ಕೂ ಮುಂಚೆ ರಾಧಿಕಾ ಕುಮಾರಸ್ವಾಮಿ ಅವರ ನಿವಾಸದ ಬಳಿ ಭೈರಾದೇವಿ ಚಿತ್ರದ ಟೀಸರ್ ಹಾಗೂ ಅಜಾಗ್ರತ ಸಿನಿಮಾದ ಫಸ್ಟ್ ಲುಕ್ ಅನ್ನು ರಿವೀಲ್ ಮಾಡಲಾಯಿತು. ರಾಧಿಕಾ ಕುಮಾರಸ್ವಾಮಿ ಸಹೋದರ ರವಿರಾಜ್, ಕ್ಯಾಪ್ಚರ್, ಅಜಾಗ್ರತ ಹಾಗೂ ಭೈರಾದೇವಿ ಸಿನಿಮಾಗಳನ್ನು ನಿರ್ಮಾಣ ಮಾಡುವ ಮೂಲಕ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಭೈರಾದೇವಿ ಹಾಗೂ ಅಜಾಗ್ರತ ಚಿತ್ರಗಳ ಚಿತ್ರೀಕರಣ ಮುಕ್ತಾಯಗೊಂಡಿದೆ. ಚಿತ್ರದ ಫಸ್ಟ್ ಲುಕ್​ ಹಾಗೂ ಟೀಸರ್ ಅನ್ನು ಸಹೋದರಿ ರಾಧಿಕಾ ಕುಮಾರಸ್ವಾಮಿ ಬರ್ತ್ ಡೇಗೆ ಉಡುಗೊರೆಯಾಗಿ ನೀಡಿದ್ದಾರೆ.

ಶಮಿಕಾ ಎಂಟರ್ ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಭೈರಾದೇವಿ, ಅಜಾಗ್ರತ ಚಿತ್ರಗಳು ನಿರ್ಮಾಣ ಆಗಿವೆ. ಭೈರಾದೇವಿ ಸಿನಿಮಾದಲ್ಲಿ ರಾಧಿಕಾ ಕುಮಾರಸ್ವಾಮಿ ಇದೇ ಮೊದಲ ಬಾರಿಗೆ ಹೆಣ್ಣು ಅಘೋರಿಯಾಗಿ ಅಭಿನಯಿಸಿದ್ದು, ಚಿತ್ರದ ಟೀಸರ್ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಈ ಚಿತ್ರದಲ್ಲಿ ರಮೇಶ್ ಅರವಿಂದ್, ರಂಗಾಯಣ ರಘು, ರವಿಶಂಕರ್, ಸ್ಕಂದ, ಅಚ್ಯುತ್ ಕುಮಾರ್ ಸೇರಿದಂತೆ ದೊಡ್ಡ ತಾರಗಣ‌ ಇದೆ. ಈ ಹಿಂದೆ ಆರ್ ಎಕ್ಸ್ ಸೂರಿ ಸಿನಿಮಾ ನಿರ್ದೇಶನ ಮಾಡಿ ಗಮನ ಸೆಳೆದಿದ್ದ ಶ್ರೀ ಜೈ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ರಾಧಿಕಾಕುಮಾರಸ್ವಾಮಿ ನಾನು ಗ್ಲ್ಯಾಮರ್, ಅಳುವ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಆದರೆ ಭೈರಾದೇವಿ ಸಿನಿಮಾ ಮಾಡಬೇಕಾದ್ರೆ ನನಗೆ ಭಯ ಆಗಿತ್ತು. ಜೊತೆಗೆ ಕೆಲ ದಿನಗಳ ಕಾಲ ಆರೋಗ್ಯ ಸರಿ ಇರಲಿಲ್ಲ.‌ ಹೆಣ್ಣು ಅಘೋರಿಗಳು ಹೇಗೆ ಇರುತ್ತಾರೆಂಬುದನ್ನು ನೋಡಿ ಕಲಿತಿಕೊಂಡು ನಂತರ ಈ ಸಿನಿಮಾದಲ್ಲಿ ಅಭಿನಯಿಸಿದ್ದೇನೆ. ಈ ವರ್ಷದ ಡಿಸೆಂಬರ್ ಅಥವಾ ಹೊಸ ವರ್ಷಕ್ಕೆ ಭೈರಾದೇವಿ ಸಿನಿಮಾ ಬಿಡುಗಡೆ ಆಗಲಿದೆಯೆಂದು ಮಾಹಿತಿ ಹಂಚಿಕೊಂಡರು. ಈ ಚಿತ್ರದ ಬಳಿಕ ಅಜಾಗ್ರತ ಸಿನಿಮಾ ಬರಲಿದೆ.

ಇದನ್ನೂ ಓದಿ:ರಾಜನ ಲುಕ್​ನಲ್ಲಿ ಅಭಿನಯ ಚಕ್ರವರ್ತಿ: ಕಿಚ್ಚ 47 ಮೇಕಿಂಗ್ ವಿಡಿಯೋ ವೈರಲ್​​

ಮೊದಲ ಬಾರಿ ಮನೆ ಹತ್ತಿರ ಚಿತ್ರತಂಡ ಹಾಗೂ ಅಭಿಮಾನಿಗಳ ಜೊತೆ ಕೇಕ್ ಕಟ್ ಮಾಡಿ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡಿದ್ದೇನೆಂದು ಸಂತಸ ವ್ಯಕ್ತಪಡಿಸಿದರು. ಈಗಾಗಲೇ ಟೀಸರ್ ಹಾಗೂ ಬಂದಾಳಮ್ಮ ಕಾಳಿಕಾ ಲಿರಿಕಲ್​ ಸಾಂಗ್​ ರಿಲೀಸ್​ ಮಾಡಲಾಗಿದೆ. ಅಘೋರಿಯಂತೆ ಕಾಣಿಸಿಕೊಂಡಿರುವ ರಾಧಿಕಾ ಕುಮಾರಸ್ವಾಮಿ ನೋಡುಗರಿಗೆ ಭಯ ಹುಟ್ಟಿಸಿದೆ. ಈ ಹಾಡಿಗೆ ಶ್ರೀ ಜೈ ಸಾಹಿತ್ಯ ಬರೆದಿದ್ದಾರೆ. ಮೊದಲು ಭೈರಾದೇವಿ ಸಿನಿಮಾ ಬಿಡುಗಡೆ ಆಗಿ ನಂತರ ಅಜಾಗ್ರತ ತೆರೆಕಾಣಲಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ.

ಇದನ್ನೂ ಓದಿ:'ಟೈಗರ್​ 3 ಲೀಕ್ ಆಗದಂತೆ ನೋಡಿಕೊಳ್ಳಿ'​: ಅಭಿಮಾನಿಗಳಲ್ಲಿ ಸಲ್ಮಾನ್​, ಕತ್ರಿನಾ ಮನವಿ!

ABOUT THE AUTHOR

...view details