ಪಡ್ಡೆಹುಲಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಟರಾಗಿ ಹೊರಹೊಮ್ಮಿರುವ ನಟ ಶ್ರೇಯಸ್ ಮಂಜು, ಸದ್ಯ ರಾಣ ಸಿನಿಮಾದ ಬಿಡುಗಡೆಯ ಖುಷಿಯಲ್ಲಿದ್ದಾರೆ. ಖ್ಯಾತ ನಿರ್ಮಾಪಕ ಕೆ.ಮಂಜು ಪುತ್ರನಾಗಿರುವ ಶ್ರೇಯಸ್ಗೆ ಚೊಚ್ಚಲ ಸಿನಿಮಾದಲ್ಲಿ ಅಂದುಕೊಂಡಂತೆ ಯಶಸ್ಸು ಸಿಕ್ಕಿಲ್ಲ. ಹೀಗಾಗಿ ಮಾಸ್ ಟೈಟಲ್ ಹೊಂದಿರುವ ರಾಣ ಚಿತ್ರದ ಮೂಲಕ ಮತ್ತೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ರಾಣ ಲವ್ ಸ್ಟೋರಿಯ ಜೊತೆಗೆ ಆ್ಯಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಚಿತ್ರದಲ್ಲಿ ಮೈನವಿರೇಳಿಸುವ ಐದು ಸಾಹಸ ಸನ್ನಿವೇಶಗಳಿದೆ. ರವಿವರ್ಮ, ಚೇತನ್, ಡಿಸೋಜ ಡಿಫರೆಂಟ್ ಡ್ಯಾನಿ ಹಾಗೂ ಗಣೇಶ್ ಸಾಹಸ ಸಂಯೋಜನೆ ಮಾಡಿದ್ದಾರೆ. ಶ್ರೇಯಸ್ಗೆ ನಾಯಕಿಯರಾಗಿ ರೀಷ್ಮಾ ನಾಣಯ್ಯ ಹಾಗೂ ರಜನಿ ಭಾರದ್ವಾಜ್ ನಟಿಸುತ್ತಿದ್ದಾರೆ.
ಸದ್ಯ ರೀಷ್ಮಾ ನಾಣಯ್ಯ ಜೊತೆ ಶ್ರೇಯಸ್ ಮಂಜು ಮಸ್ತ್ ಡ್ಯಾನ್ಸ್ ಮಾಡಿರೋ ಮೇಕಿಂಗ್ ಫೋಟೋಗಳು ಅನಾವರಣಗೊಂಡಿವೆ. ಶ್ರೇಯಸ್ ಮಂಜು, ರೀಷ್ಮಾ ನಾಣಯ್ಯ ಅಲ್ಲದೇ ರಜನಿ ಭಾರದ್ವಾಜ್, ಅಶೋಕ್, ಗಿರಿ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಪ್ರವೀಣ್ ಕುಮಾರ್, ನಯನ, ರಘು, ಮೋಹನ್ ಮುಂತಾದವರು ಚಿತ್ರದಲ್ಲಿ ಬಣ್ಣದ ಹಚ್ಚಿಸಿದ್ದಾರೆ.