ಚಿತ್ರ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ನಾಯಕನಾಗಿ ನಟಿಸಿರುವ 2ನೇ ಚಿತ್ರ ರಾಣ. ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರದ ಟ್ರೈಲರ್ ಅನ್ನು ನಟ ಧ್ರುವ ಸರ್ಜಾ ಬಿಡುಗಡೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೇಯಸ್ ನನ್ನ ಆತ್ಮೀಯ ಗೆಳೆಯ. ಚಿತ್ರಕ್ಕಾಗಿ ಆತ ಪಟ್ಟಿರುವ ಶ್ರಮ ಟ್ರೈಲರ್ನಲ್ಲಿ ಕಾಣುತ್ತಿದೆ. ಉತ್ತಮ ತಂತ್ರಜ್ಞರು ಹಾಗೂ ಕಲಾವಿದರ ಸಂಗಮದಲ್ಲಿ ಚಿತ್ರ ಚೆನ್ನಾಗಿ ಬಂದಿದೆ. ನಾನು ಮೊದಲ ದಿನ ನೋಡುತ್ತೇನೆ. ನೀವೂ ನೋಡಿ ಎಂದರು.
ನಟ ಶ್ರೇಯಸ್ ಮಾತನಾಡಿ, ಸಿನಿಮಾ ನನ್ನ ಉಸಿರು. ಪಡ್ಡೆ ಹುಲಿ ನಂತರ ಮೂರುವರೆ ವರ್ಷಗಳ ಬಳಿಕ ನನ್ನ 'ರಾಣ ಸಿನಿಮಾ' ನ.11 ರಂದು ಬಿಡುಗಡೆಯಾಗುತ್ತಿದೆ. ಈ ದಿನಕ್ಕಾಗಿ ನಾನು ಕಾಯುತ್ತಿದ್ದೆ. ಎಂದು ಹೇಳಿದರು.
ಚಿತ್ರ ಚೆನ್ನಾಗಿ ಬಂದಿದೆ ಅಂದರೆ ಆ ಕೀರ್ತಿ ನನ್ನ ಇಡೀ ತಂಡಕ್ಕೆ ಸಲ್ಲಬೇಕು. ಚಿತ್ರದ ಆರಂಭದಿಂದ ಬೆಂಬಲ ನೀಡುತ್ತಿರುವ ಧ್ರುವ ಸರ್ಜಾರಿಗೆ ವಿಶೇಷ ಧನ್ಯವಾದ ಎನ್ನುತ್ತಾರೆ ನಿರ್ದೇಶಕ ನಂದಕಿಶೋರ್.