ಕರ್ನಾಟಕ

karnataka

ETV Bharat / entertainment

'ಪುಷ್ಪ - ದಿ ರೂಲ್'​ ಟೀಸರ್​ ರಿಲೀಸ್​: ಭಾರಿ ಕುತೂಹಲ - Pushpa 1

ದಕ್ಷಿಣ ಚಿತ್ರರಂಗದ ಬಹುನಿರೀಕ್ಷಿತ 'ಪುಷ್ಪ - ದಿ ರೂಲ್'​ ಟೀಸರ್ ಇಂದು​ ಅನಾವರಣಗೊಂಡಿದೆ.

Pushpa The Rule teaser
ಪುಷ್ಪ ದಿ ರೂಲ್​ ಟೀಸರ್

By

Published : Apr 7, 2023, 4:35 PM IST

Updated : Apr 7, 2023, 5:22 PM IST

ಪುಷ್ಪ - ದಿ ರೂಲ್​ ದಕ್ಷಿಣ ಭಾರತದ ಸಿನಿಮಾ ರಂಗದ ಬಹುನಿರೀಕ್ಷಿತ ಚಿತ್ರ. 2021ರಲ್ಲಿ ತೆರೆಕಂಡು ವಿಶ್ವಾದ್ಯಂತ ಧೂಳೆಬ್ಬಿಸಿದ್ದ ಪುಷ್ಪ ಸಿನಿಮಾದ ಸೀಕ್ವೆಲ್​ ಶೂಟಿಂಗ್​ ಭರದಿಂದ ಸಾಗಿದೆ. ಇದೀಗ ಟೀಸರ್​ ಬಿಡುಗಡೆಗೊಳಿಸಲಾಗಿದ್ದು ಕುತೂಹಲ ಹೆಚ್ಚಿಸಿದೆ.

2021ರ ಡಿಸೆಂಬರ್​​ 17ರಂದು ಪುಷ್ಪ ಪಾರ್ಟ್ 1 (ಪುಷ್ಪ ದಿ ರೈಸ್​) ತೆರೆಗೆ ಬಂದಿತ್ತು. ಚಿತ್ರವು ಜಗತ್ತಿನಾದ್ಯಂತ ಸಿನಿಮಾ ರಸಿಕರನ್ನು ಸೆಳೆಯುವಲ್ಲಿ ಯಶಸ್ವಿ ಆಗಿತ್ತು. ಸುಕುಮಾರ್ ನಿರ್ದೇಶಿಸಿರುವ​ಸೂಪರ್​ ಹಿಟ್​ ಸಿನಿಮಾದಲ್ಲಿ ಸ್ಟೈಲಿಶ್​ ಸ್ಟಾರ್ ಅಲ್ಲು ಅರ್ಜುನ್ ಮತ್ತು ಬಹುಭಾಷಾ ತಾರೆ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿ, ಅಭಿಮಾನಿಗಳ ಮೆಚ್ಚುಗೆ ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದರು. ಕೆಂಪು ಚಂದನ ಮರದ ಕಳ್ಳಸಾಗಣೆ ಕುರಿತ ಕಥಾವಸ್ತುವನ್ನು ಸಿನಿಮಾ ಹೊಂದಿತ್ತು.

ಪುಷ್ಪ 1 ಚಿತ್ರವು ವಿಶ್ವದಾದ್ಯಂತ ಸುಮಾರು 400 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆಯ ಮೂಲಕ 2021 ರಲ್ಲಿ ಅತಿ ಹೆಚ್ಚು ಗಳಿಸಿರುವ ಸಿನಿಮಾವಾಗಿಯೂ ಹೊರಹೊಮ್ಮಿದೆ. ಮೈತ್ರಿ ಮೂವೀ ಮೇಕರ್ಸ್, ಮುತ್ತಂ ಶೆಟ್ಟಿ ಮೀಡಿಯಾ ಜಂಟಿಯಾಗಿ ನಿರ್ಮಿಸಿದ್ದ ಚಿತ್ರದಲ್ಲಿ ಸುನೀಲ್, ಫಹಾದ್ ಫಾಜಿಲ್, ಅನಸೂಯ ಮುಂತಾದವರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದರು.

ಏಪ್ರಿಲ್​ 5ರಂದು (ಬುಧವಾರ) ಶ್ರೀವಲ್ಲಿ ಖ್ಯಾತಿಯ ರಶ್ಮಿಕಾ ಮಂದಣ್ಣ 27ನೇ ಹುಟ್ಟುಹಬ್ಬ ಆಚರಿಸಿಕೊಂಡರು. ನಟಿಯ ಮುಂದಿನ ಸಿನಿಮಾ ತಂಡದಿಂದ ಸ್ಪೆಷಲ್​ ಗಿಫ್ಟ್​ ಕೂಡಾ ಸಿಕ್ಕಿತ್ತು. ಪುಷ್ಪ 2 ಕೂಡ ಬಹುಭಾಷಾ ನಟಿಯ ಬಹುನಿರೀಕ್ಷಿತ ಚಿತ್ರ. ಮೊದಲ ಭಾಗದಲ್ಲಿ ಶ್ರೀವಲ್ಲಿಯಾಗಿ ಪ್ರೇಕ್ಷಕರ ಮನ ಸೆಳೆದಿರುವ ರಶ್ಮಿಕಾ ಮಂದಣ್ಣ ಈ ಚಿತ್ರದಲ್ಲಿಯೂ ತಮ್ಮ ಪಾತ್ರ ಮುಂದುವರಿಸಿದ್ದಾರೆ. ಬುಧವಾರದಂದು ಮೈತ್ರಿ ಮೂವಿ ಮೇಕರ್ಸ್ ನಟಿಯ ಮೊದಲ ನೋಟ ಅನಾವರಣಗೊಳಿಸಿದ್ದು, ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಅಂದೇ ಟೀಸರ್​ನ ಸಣ್ಣ ತುಣುಕನ್ನೂ ಬಿಡುಗಡೆ ಮಾಡಲಾಗಿತ್ತು.

ಸ್ಟೈಲಿಶ್​ ಸ್ಟಾರ್ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ

ಇದನ್ನೂ ಓದಿ:ಇದು ಶಾರುಖ್ ಖಾನ್ TIME! ವಿಶ್ವದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿ ಕಿಂಗ್‌ ಖಾನ್‌

ನಾಳೆ ಪುಷ್ಪ ರಾಜ್ ಖ್ಯಾತಿಯ ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್ ಅವರ ಜನ್ಮದಿನ. 41ನೇ ವಸಂತಕ್ಕೆ ಕಾಲಿಡಲಿಡುವ ಅವರಿಗೆ ಮೈತ್ರಿ ಮೂವಿ ಮೇಕರ್ಸ್ ಇಂದು ಸ್ಪೆಷಲ್​ ಗಿಫ್ಟ್​ ಕೊಟ್ಟಿದೆ. ಟೀಸರ್​ ಬಿಡುಗಡೆ ಮೂಲಕ ಚಿತ್ರತಂಡ ನಟನಿಗೆ ವಿಶೇಷವಾಗಿ ಶುಭ ಕೋರಿದೆ. ಏಪ್ರಿಲ್​ 5ರಂದು ಟೀಸರ್​ನ ಸಣ್ಣ ತುಣುಕನ್ನು ಬಿಡುಗಡೆ ಮಾಡಿದ್ದ ಮೈತ್ರಿ ಮೂವಿ ಮೇಕರ್ಸ್, ಏಪ್ರಿಲ್​ 7ರಂದು ಸಂಪೂರ್ಣ​ ವಿಡಿಯೋ ಇರಲಿದೆ ಎಂದು ತಿಳಿಸಿತ್ತು. ಅದರಂತೆ 4 ಗಂಟೆ 5 ನಿಮಿಷಕ್ಕೆ ಟೀಸರ್​ ರಿಲಿಸ್​ ಆಗಿದೆ. ಪುಷ್ಪನ ಹುಡುಕಾಟದ ನೋಟವನ್ನು ಟೀಸರ್​ ಒಳಗೊಂಡಿದೆ.

ಇದನ್ನೂ ಓದಿ:ವಿವಾಹಿತ ನಟಿಗೆ ಟ್ವಿಟರ್​ನಲ್ಲಿ ಪ್ರಪೋಸ್ ಮಾಡಿದ 60ರ ವ್ಯಕ್ತಿ: ಉತ್ತರ ಹೀಗಿತ್ತು ನೋಡಿ!

Last Updated : Apr 7, 2023, 5:22 PM IST

ABOUT THE AUTHOR

...view details