ಹೈದರಾಬಾದ್:ಅಲ್ಲು ಅರ್ಜುನ್ ರಶ್ಮಿಕಾ ಮಂದಣ್ಣ ಅಭಿಯನದ ’ಪುಷ್ಪ ದಿ ರೈಸ್' ಸಿನಿಮಾ ತೆಲುಗಿನಲ್ಲಿ ಮಾತ್ರವಲ್ಲದೇ, ಹಿಂದಿ, ತಮಿಳು ಸೇರಿದಂತೆ ಇತರೆ ಭಾಷೆಗಳಲ್ಲಿ ಭಾರೀ ಸದ್ದು ಮಾಡಿತ್ತು. ಈ ಚಿತ್ರ ಇದೀಗ ರಷ್ಯಾ ಭಾಷೆಯಲ್ಲಿ ಡಬ್ ಆಗಿ ಬಿಡುಗಡೆಯಾಗಲು ಸಜ್ಜಾಗಿದೆ. ಮಾಸ್ ಡೈಲಾಗ್ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡಿದ್ದ ಸಿನಿಮಾ ಇದೀಗ ರಷ್ಯನ್ ಪ್ರೇಕ್ಷಕರ ಸೆಳೆಯಲು ಮುಂದಾಗಿದೆ. ಇದೇ ಹಿನ್ನೆಲೆ ಇಡೀ ಚಿತ್ರತಂಡ ರಷ್ಯಾಕ್ಕೆ ತೆರಳಿದ್ದು, ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.
'ಪುಷ್ಪ- ದಿ ರೈಸ್' ಚಿತ್ರ ಈಗಾಗಲೇ ಬಿಡುಗಡೆಗೆ ಸಜ್ಜಾಗಿತ್ತು. ಆದರೆ, ರಷ್ಯಾ - ಉಕ್ರೇನ್ ಯುದ್ಧದಿಂದಾಗಿ 10 ತಿಂಗಳು ತಡವಾಗಿದೆ. ಇದೀಗ ರಷ್ಯಾದಲ್ಲಿ ಪ್ರತಿಕೂಲ ಪರಿಸ್ಥಿತಿ ಇರುವ ಹಿನ್ನಲೆ ಸಿನಿಮಾ ಇದೇ ಡಿಸೆಂಬರ್ 8ರಂದು ಬಿಡುಗಡೆಯಾಗಲಿದೆ. ಇನ್ನು ಟ್ರೈಲರ್ ಲಾಂಚ್ ವೇಳೆ ನಟ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಚಿತ್ರ ನಿರ್ದೇಶ ಸುಕುಮಾರ್, ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ , ನಿರ್ಮಾಪಕರು ಹಾಜರಿದ್ದರು. ಇದೇ ವೇಳೆ ಚಿತ್ರದ ಮಾಸ್ ಡೈಲಾಗ್ ಹೊಡೆಯುವ ಮೂಲಕ ಪ್ರಮೋಷನ್ ನಡೆಸಿದರು.