ಸೌತ್ ಸಿನಿಮಾ ಇಂಡಸ್ಟ್ರಿಯ ಸಿನಿಮಾಗಳು ಭಾರತೀಯ ಚಿತ್ರರಂಗ ಅಲ್ಲದೇ ವಿಶ್ವದಾದ್ಯಂತ ಸುದ್ದಿ ಮಾಡುತ್ತಿವೆ. ಈ ಸಾಲಿನಲ್ಲಿ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯ ಪುಷ್ಪ ಸಿನಿಮಾವೂ ಒಂದು. ಬಾಕ್ಸ್ ಆಫೀಸ್ ನಲ್ಲಿ 370 ಕೋಟಿ ಕಲೆಕ್ಷನ್ ಮಾಡಿದ ಪುಷ್ಪ ಸಿನಿಮಾ ಬಿಡುಗಡೆ ಆಗಿ ಡಿಸೆಂಬರ್ 17ಕ್ಕೆ ಒಂದು ವರ್ಷ ಪೂರೈಸುತ್ತಿದೆ. ಈಗಾಗ್ಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಿರುವ ಪುಷ್ಪ ಸಿನೆಮಾ ರಷ್ಯಾದಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.
ಪುಷ್ಪ ಸಿನೆಮಾ ಡಿ.8 ರಂದು ರಷ್ಯಾದಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್,ರಶ್ಮಿಕಾ ಮಂದಣ್ಣ ಸೇರಿದಂತೆ ಇಡೀ ಪುಷ್ಪ ಚಿತ್ರತಂಡ ರಷ್ಯಾಗೆ ತೆರಳಿದೆ. ರಷ್ಯಾದ 24 ನಗರಗಳಲ್ಲಿ ನಡೆಯಲಿರುವ ಐದನೇ ಭಾರತೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿಯೂ ಚಲನಚಿತ್ರವು ಮೊದಲಿಗೆ ಪ್ರದರ್ಶನಗೊಳ್ಳಲಿದೆ.