ಕರ್ನಾಟಕ

karnataka

ETV Bharat / entertainment

ಯುವತಿ ಆತ್ಮಹತ್ಯೆ ಪ್ರಕರಣ: ತಪ್ಪೊಪ್ಪಿಕೊಂಡ 'ಪುಷ್ಪ' ಸಹನಟ ಜಗದೀಶ್​ - ಈಟಿವಿ ಭಾರತ ಕನ್ನಡ

ಯುವ ಕಲಾವಿದೆಯೊಬ್ಬರ ಆತ್ಮಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ 'ಪುಷ್ಪ' ಸಿನಿಮಾ ನಟ ಜಗದೀಶ್ ತಪ್ಪೊಪ್ಪಿಕೊಂಡಿದ್ದಾರೆ.

Pushpa fame actor jagadish has abetted the suicide of female artist
ಯುವತಿ ಆತ್ಮಹತ್ಯೆ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡ 'ಪುಷ್ಪ' ಸಿನಿಮಾ ಸಹನಟ

By ETV Bharat Karnataka Team

Published : Dec 17, 2023, 5:14 PM IST

ಹೈದರಾಬಾದ್​(ತೆಲಂಗಾಣ): ಯುವತಿ ಆತ್ಮಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ 'ಪುಷ್ಪ' ಸಿನಿಮಾ ನಟ ಜಗದೀಶ್ ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆ. ನವೆಂಬರ್​ 29ರಂದು ಆತ್ಮಹತ್ಯೆ ಮಾಡಿಕೊಂಡ ಯುವತಿಯ (ಯುವ ಕಲಾವಿದೆ) ಸಾವಿಗೆ ಜಗದೀಶ್ ಕಾರಣ ಎಂದು ಮೃತಳ ತಂದೆ ಸಲ್ಲಿಸಿರುವ ದೂರಿನ ಆಧಾರದ ಮೇಲೆ ಪಂಜಗುಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಟನನ್ನು ಬಂಧಿಸಿದ್ದರು. ಬಳಿಕ ವಿಚಾರಣೆ ನಡೆಸಿದಾಗ ಜಗದೀಶ್​ ತಮ್ಮ ತಪ್ಪನ್ನು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕಳೆದ ತಿಂಗಳ 27ರಂದು ಬೇರೆ ಪುರುಷನ ಜೊತೆಗಿದ್ದ ಯುವತಿಯ ಫೋಟೋಗಳನ್ನು ಜಗದೀಶ್ ಆಕೆಗೆ ತಿಳಿಯದಂತೆ ಕ್ಲಿಕ್ಕಿಸಿಕೊಂಡಿದ್ದ. ನಂತರ ಆಕೆಗೆ ಬೆದರಿಕೆ ಹಾಕಿದ್ದಾನೆ ಎಂಬ ವಿಚಾರ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿತ್ತು. ಈ ಬಗ್ಗೆ ಜಗದೀಶ್‌ನನ್ನು ಪ್ರಶ್ನಿಸಿದ್ದು, "ನಾನು ಪ್ರೀತಿಸುತ್ತಿದ್ದ ಹುಡುಗಿ ಬೇರೊಬ್ಬ ವ್ಯಕ್ತಿಯೊಂದಿಗೆ ಆತ್ಮೀಯವಾಗಿರುವುದನ್ನು ನೋಡಿ ನನಗೆ ಸಹಿಸಲು ಸಾಧ್ಯವಾಗಲಿಲ್ಲ. ಅವರ ಅನುಮತಿಯಿಲ್ಲದೇ ನಾನು ಫೋಟೋಗಳನ್ನು ಕ್ಲಿಕ್ಕಿಸಿಕೊಂಡೆ. ಆ ಅಶ್ಲೀಲ ಫೋಟೋಗಳನ್ನು ಆಕೆಗೆ ಕಳುಹಿಸಿ ಬೆದರಿಕೆ ಹಾಕಿದ್ದೆ" ಎಂದು ತಪ್ಪೊಪ್ಪಿಕೊಂಡಿದ್ದಾರೆ.

ಪಂಜಗುಟ್ಟ ಪೊಲೀಸರು ಜಗದೀಶ್​ನನ್ನು ಬಂಧಿಸಿ ಎರಡು ದಿನಗಳ ಕಾಲ ಕಸ್ಟಡಿಗೆ ಪಡೆದು ವಿಸ್ತೃತ ವಿಚಾರಣೆ ನಡೆಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಐದು ವರ್ಷಗಳ ಹಿಂದೆ ಜಗದೀಶ್​ ಸಿನಿಮಾದಲ್ಲಿ ನಟಿಸುವ ಅವಕಾಶಕ್ಕಾಗಿ ಹೈದರಾಬಾದ್​ಗೆ ಆಗಮಿಸಿದ್ದರು. ನಂತರ ಯುವತಿಯೊಬ್ಬಳನ್ನು ಭೇಟಿಯಾಗಿ ಪ್ರೀತಿಸುತ್ತಿದ್ದರು. ಇವರಿಬ್ಬರು ದೈಹಿಕವಾಗಿಯೂ ಸಂಬಂಧ ಹೊಂದಿದ್ದರು.

'ಪುಷ್ಪ: ದಿ ರೈಸ್​- ಭಾಗ 1' ಚಿತ್ರದಲ್ಲಿನ ಪಾತ್ರದ ನಂತರ ಜಗದೀಶ್​ ಜನಪ್ರಿಯತೆ ಗಳಿಸಿದರು. ಈ ಜನಪ್ರಿಯತೆ ಜಗದೀಶ್​ ವರ್ತನೆಯನ್ನು ಬದಲಾಯಿಸಿತು. ಇದನ್ನು ಇಷ್ಟಪಡದ ಯುವತಿ ಆತನನ್ನು ನಿರ್ಲಕ್ಷಿಸಲು ಶುರು ಮಾಡಿದ್ದರು. ಅದು ಜಗದೀಶ್​ಗೆ ಕಿರಿಕಿರಿ ಉಂಟು ಮಾಡಿದೆ. ಅವಳನ್ನು ಮರಳಿ ಪಡೆಯಲು ಜಗದೀಶ್​ ಪ್ರಯತ್ನಿಸುತ್ತಿದ್ದರು.

ಅದಕ್ಕಾಗಿ ನವೆಂಬರ್​ 27ರಂದು ಪಂಜಗುಟ್ಟದಲ್ಲಿರುವ ಯುವತಿಯ ಮನೆಗೆ ಜಗದೀಶ್ ದಿಢೀರ್​ ತೆರಳಿದ್ದರು. ಅಲ್ಲಿ ಅಪರಿಚಿತ ಪುರುಷನೊಂದಿಗೆ ಆಕೆ ಆತ್ಮೀಯ ಕ್ಷಣಗಳನ್ನು ಹಂಚಿಕೊಳ್ಳುವುದನ್ನು ಕಂಡು ಒಪ್ಪಿಗೆಯಿಲ್ಲದೆಯೇ ತಮ್ಮ ಮೊಬೈಲ್​ನಲ್ಲಿ ಫೋಟೋ ತೆಗೆದುಕೊಂಡರು. ಬಳಿಕ ಆ ಫೋಟೋಗಳನ್ನು ಯುವತಿಗೆ ಕಳುಹಿಸಿ ಸೋಷಿಯಲ್​ ಮೀಡಿಯಾದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ.

ಇದನ್ನು ಸಹಿಸಲಾಗದ ಯುವತಿ ಎರಡು ದಿನಗಳ ನಂತರ ನವೆಂಬರ್​ 29ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಕೆಯ ತಂದೆ ಪಂಜಗುಟ್ಟ ಪೊಲೀಸರಿಗೆ ದೂರು ನೀಡಿದ್ದು, ನನ್ನ ಮಗಳು ಕಿರುಚಿತ್ರಗಳಲ್ಲಿ ತೊಡಗಿಕೊಂಡಿದ್ದಳು. ಆ ಸಂದರ್ಭದಲ್ಲಿ ಜಗದೀಶ್‌ನ ಭೇಟಿಯಾಗಿದ್ದಳು. ಆದರೆ ಜಗದೀಶ್​​ ಮಗಳಿಗೆ ವಂಚಿಸಿದ್ದಾನೆ ಎಂದು ಆರೋಪಿಸಿದ್ದರು. ಈ ದೂರಿನಂತೆ ಕಳೆದ ಬುಧವಾರ ಜಗದೀಶ್‌ನನ್ನು ಬಂಧಿಸಿದ ಪಂಜಗುಟ್ಟ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಇದನ್ನೂ ಓದಿ:ಯುವತಿ ಆತ್ಮಹತ್ಯೆ: ಪುಷ್ಪ ಸಿನಿಮಾ ಸಹನಟ ಅರೆಸ್ಟ್

ABOUT THE AUTHOR

...view details