ಕರ್ನಾಟಕ

karnataka

ETV Bharat / entertainment

ರಾಷ್ಟ್ರ ಪ್ರಶಸ್ತಿ ಗೆದ್ದ ಖುಷಿಯಲ್ಲಿ ಅಲ್ಲು ಅರ್ಜುನ್​: ಪುಷ್ಪ 2 ರಿಲೀಸ್​ ಯಾವಾಗ? - ಈಟಿವಿ ಭಾರತ ಕನ್ನಡ

Pushpa 2 release date: 'ಪುಷ್ಪ 2: ದಿ ರೂಲ್​' ಸಿನಿಮಾದ ಬಿಡುಗಡೆಯ ದಿನಾಂಕ ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡಿಂಗ್​ ಆಗಿದೆ. ಯಾವಾಗ ಅನ್ನೋದು ಗೊತ್ತಾ?

Pushpa 2
ಪುಷ್ಪ 2

By ETV Bharat Karnataka Team

Published : Aug 26, 2023, 10:20 AM IST

ಸಿನಿ ಪ್ರೇಮಿಗಳು ಬಹು ಕಾತರದಿಂದ ಕಾಯುತ್ತಿರುವ ಚಿತ್ರ 'ಪುಷ್ಪ 2: ದಿ ರೂಲ್​'. 2021ರಲ್ಲಿ ತೆರೆ ಕಂಡು ವಿಶ್ವದಾದ್ಯಂತ ಧೂಳೆಬ್ಬಿಸಿದ್ದ 'ಪುಷ್ಪ: ದಿ ರೈಸ್​'ನ ಮುಂದುವರೆದ ಭಾಗ ಇದಾಗಿದೆ. ಸ್ಟೈಲಿಶ್​ ಸ್ಟಾರ್​​ ಅಲ್ಲು ಅರ್ಜುನ್​ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದ ಮೇಲೆ ಅಭಿಮಾನಿಗಳು ಮುಗಿಲೆತ್ತರದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದೀಗ ಈ ಸಿನಿಮಾದ ಬಿಡುಗಡೆಯ ದಿನಾಂಕ ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡಿಂಗ್​ ಆಗಿದೆ.

ಪುಷ್ಪ 2 ಯಾವಾಗ ರಿಲೀಸ್​?: ಸುಕುಮಾರನ್ ಕಥೆ ಬರೆದು​ ನಿರ್ದೇಶಿಸಿರುವ 'ಪುಷ್ಪ 2: ದಿ ರೂಲ್​' ಬಿಡುಗಡೆಗೆ ಸಿದ್ಧಗೊಳ್ಳುತ್ತಿದೆ. ಮುಂದಿನ ವರ್ಷ ಬೇಸಿಗೆ ಸಮಯದಲ್ಲಿ ಈ ಚಿತ್ರವನ್ನು ಥಿಯೇಟರ್​ಗೆ ತರಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ 2024ರ ಮಾರ್ಚ್​ 22 ರಿಂದ 29ರ ಒಳಗಾಗಿ ಬಿಡುಗಡೆ ದಿನಾಂಕವನ್ನು ಚಿತ್ರ ನಿರ್ಮಾಪಕರು ನಿಗದಿಪಡಿಸಲಿದ್ದಾರೆ ಎಂದು ವರದಿಯಾಗಿದೆ. ಆದರೆ, ಈ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಚಿತ್ರದ ಪ್ರಮುಖ ದೃಶ್ಯಗಳು ಸೇರಿದಂತೆ ಈಗಾಗಲೇ ಶೇ.70 ರಷ್ಟು ಶೂಟಿಂಗ್​ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಪೋಸ್ಟ್​ ಪ್ರೊಡಕ್ಷನ್ಸ್​ ಕೆಲಸಗಳು ಪ್ರಾರಂಭವಾಗಲಿದೆ.

ರಾಷ್ಟ್ರ ಪ್ರಶಸ್ತಿ ಗೆದ್ದ ಅಲ್ಲು: 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಗುರುವಾರ ಘೋಷಿಸಿದೆ.​ ಅಲ್ಲು ಅರ್ಜುನ್ ಅವರಿಗೆ​​ ಅತ್ಯುತ್ತಮ ನಟ ಪ್ರಶಸ್ತಿ ಘೋಷಣೆ ಆಗಿದೆ. ಇವರ ಬ್ಲಾಕ್​​ ಬಸ್ಟರ್ ಸಿನಿಮಾ 'ಪುಷ್ಪ: ದಿ ರೈಸ್​' ನಲ್ಲಿನ ಅಮೋಘ ಅಭಿನಯಕ್ಕೆ ಈ ಗೌರವ ದೊರೆತಿದೆ. ತೆಲುಗು ಚಿತ್ರರಂಗದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ಮೊದಲ ನಟ ಎಂಬ ಹೆಗ್ಗಳಿಕೆಗೂ ಸ್ಟೈಲಿಶ್​ ಸ್ಟಾರ್ ಪಾತ್ರರಾಗಿದ್ದಾರೆ. 2021ರ ಡಿಸೆಂಬರ್​​ನಲ್ಲಿ ಪುಷ್ಪ 1 ಚಿತ್ರಮಂದಿರಗಳಲ್ಲಿ ತೆರೆಕಂಡು ಧೂಳೆಬ್ಬಿಸಿತು. ಬಾಕ್ಸ್​ ಆಫೀಸ್​ ದಾಖಲೆಗಳನ್ನು ಮುರಿದು ಹೊಸ ಇತಿಹಾಸ ಸೃಷ್ಟಿಸಿತು. ಈ ಸಿನಿಮಾದಲ್ಲಿ ಅದ್ಭುತ ನಟನೆಗಾಗಿ ಅಲ್ಲು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.

ಬಿಡುಗಡೆಗೂ ಮುನ್ನವೇ ದಾಖಲೆ ಬರೆದ 'ಪುಷ್ಪ 2': ಏಪ್ರಿಲ್​ 8 ರಂದು ಪುಷ್ಪ 2 ಚಿತ್ರದ ಫಸ್ಟ್​ ಲುಕ್​ ಪೋಸ್ಟರ್​ ಅನ್ನು ಚಿತ್ರತಂಡ ಬಿಡುಗಡೆಗೊಳಿಸಿತ್ತು. ಈ ಪೋಸ್ಟರ್​ 4 ತಿಂಗಳಲ್ಲಿ ಸಾಮಾಜಿಕ ಜಾಲತಾಣವಾದ ಇನ್​ಸ್ಟಾಗ್ರಾಮ್​ನಲ್ಲಿ 7 ಮಿಲಿಯನ್​ ಲೈಕ್ಸ್​ಗಳನ್ನು ಪಡೆಯುವ ಮೂಲಕ ದಾಖಲೆಯನ್ನು ಬರೆದಿದೆ. ಈ ಸಂತಸದ ವಿಚಾರವನ್ನು ಕೆಲ ದಿನಗಳ ಹಿಂದೆ ಚಿತ್ರ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀ ಮೇಕರ್ಸ್​ ಟ್ವೀಟರ್​ನಲ್ಲಿ ಹಂಚಿಕೊಂಡಿತ್ತು. ಇನ್​ಸ್ಟಾಗ್ರಾಮ್​ನಲ್ಲಿ ಇಷ್ಟು ಮಿಲಿಯನ್​ ಲೈಕ್ಸ್​ಗಳನ್ನು ಪಡೆದ ಮೊದಲ ಭಾರತೀಯ ಸಿನಿಮಾ ಪೋಸ್ಟರ್​ ಇದಾಗಿದೆ.

ಪುಷ್ಪ 2: ದಿ ರೂಲ್​ ಸಿನಿಮಾವನ್ನು ಸುಕುಮಾರನ್ ಬರೆದು​ ನಿರ್ದೇಶಿಸಿದ್ದಾರೆ. ಮೈತ್ರಿ ಮೂವೀ ಮೇಕರ್ಸ್​ ನಿರ್ಮಿಸಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್​, ರಶ್ಮಿಕಾ ಮಂದಣ್ಣ, ಫಹಾದ್​ ಫಾಸಿಲ್​, ಸುನೀಲ್​, ಅಜಯ್​, ರಾವ್​ ರಮೇಶ್​, ಅನುಸೂಯಾ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್​ ಸಂಗೀತ ನಿರ್ದೇಶನ, ಮಿರೋಸ್ಪಾ ಕುಬಾ ಛಾಯಾಗ್ರಹಣ, ಕಾರ್ತಿಕಾ ಶ್ರೀನಿವಾಸ್​ ಮತ್ತು ರೂಬೆನ್​ ಸಂಕಲನವಿದೆ. ಈ ವರ್ಷದ ಕೊನೆಯಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎನ್ನಲಾಗಿತ್ತು. ಆದರೆ ಈಗಿನ ವರದಿಗಳ ಪ್ರಕಾರ 2024ರ ಬೇಸಿಗೆ ಸಮಯದಲ್ಲಿ ಪುಷ್ಪ 2 ತೆರೆ ಕಾಣಲಿದೆ.

ಇದನ್ನೂ ಓದಿ:ಟಾಲಿವುಡ್​ ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್ ರಾಷ್ಟ್ರ ಪ್ರಶಸ್ತಿ ಗೆದ್ದ ಮೊದಲ ತೆಲುಗು ನಟ.. ಯಾವ ಚಿತ್ರಕ್ಕೆ ಗೊತ್ತಾ!?

ABOUT THE AUTHOR

...view details