ಕರ್ನಾಟಕ

karnataka

ETV Bharat / entertainment

ಈ ದಿನಾಂಕದಂದೇ ಅನಾವರಣಗೊಳ್ಳಲಿದೆ 'ಪುಷ್ಪ: ದಿ ರೂಲ್​​' ಮೊದಲ ನೋಟ - ಪುಷ್ಪ 2 ಫಸ್ಟ್ ಲುಕ್

'ಪುಷ್ಪ 2'ರ ಮೊದಲ ನೋಟ (first glimpse) ಏಪ್ರಿಲ್​ನಲ್ಲಿ ಬಿಡುಗಡೆ ಆಗಲಿದೆ ಎನ್ನುವ ಮಾಹಿತಿ ಇದೆ.

Pushpa 2 first glimpse
'ಪುಷ್ಪ: ದಿ ರೂಲ್​​'

By

Published : Feb 28, 2023, 3:08 PM IST

ಸೌತ್​ ಸೂಪರ್​ ಸ್ಟಾರ್​ ಅಲ್ಲು ಅರ್ಜುನ್ ಅವರ 'ಪುಷ್ಪ: ದಿ ರೂಲ್​​' ಈ ವರ್ಷ ತೆರೆ ಕಾಣಲಿರುವ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದು. ಸುಕುಮಾರ್ ನಿರ್ದೇಶನದಲ್ಲಿ ಮೂಡಿಬಂದ ’ಪುಷ್ಪ: ದಿ ರೈಸ್‌‘‘2021ರಲ್ಲಿ ಬಿಡುಗಡೆ ಆಗಿ ಬ್ಲಾಕ್‌ಬಸ್ಟರ್ ಹಿಟ್ ಆಯಿತು. 'ಪುಷ್ಪ: ದಿ ರೈಸ್‌'ನ ಮುಂದುವರಿದ ಭಾಗವು ನಿರ್ಮಾಣ ಹಂತದಲ್ಲಿದ್ದು, ಅಲ್ಲು ಅರ್ಜುನ್ ಅವರ ಅಭಿಮಾನಿಗಳು ಪುಷ್ಪ 2ರ ಮೊದಲ ನೋಟವನ್ನು (first glimpse) ನೋಡಲು ಉತ್ಸುಕರಾಗಿದ್ದಾರೆ.

ಪುಷ್ಪ 2 ಸಿನಿಮಾಗೆ ಸಂಬಂಧಿಸಿದ ವಿವರಗಳನ್ನು ಚಿತ್ರ ತಯಾರಕರು ಬಿಟ್ಟುಕೊಟ್ಟಿಲ್ಲ. ಆದರೆ, ಏಪ್ರಿಲ್ 8ರಂದು ಚಿತ್ರದ ಫಸ್ಟ್ ಲುಕ್​ ಹೊರ ಬರಬಹುದು ಎಂಬ ವದಂತಿಗಳಿವೆ. ಏಪ್ರಿಲ್ 8 ಪುಷ್ಪ ನಾಯಕ ಅಲ್ಲು ಅರ್ಜುನ್ ಅವರ ಜನ್ಮದಿನ. ಈ ದಿನವನ್ನು ವಿಶೇಷವಾಗಿ ಆಚರಿಸಲು ಪುಷ್ಪ ತಯಾರಕರು 'ಪುಷ್ಪ: ದಿ ರೂಲ್'ನ ಮೊದಲ ನೋಟವನ್ನು ಬಿಡುಗಡೆ ಮಾಡಲು ಯೋಜಿಸುತ್ತಿದ್ದಾರೆ ಎನ್ನುವ ಮಾಹಿತಿ ಇದೆ.

'ಪುಷ್ಪ: ದಿ ರೈಸ್‌'ನ ಅದ್ಭುತ ಯಶಸ್ಸಿನ ನಂತರ ಚಿತ್ರ ತಯಾರಕರು ಪ್ಯಾನ್ ಇಂಡಿಯಾ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಅದರ ಸೀಕ್ವೆಲ್​​ ರೆಡಿ ಮಾಡಿಕೊಂಡಿದ್ದಾರೆ. ಪುಷ್ಪದಲ್ಲಿ ಭನ್ವರ್ ಸಿಂಗ್ ಶೇಖಾವತ್ ಪಾತ್ರವನ್ನು ಫಹಾದ್ ಫಾಸಿಲ್ ನಿರ್ವಹಿಸಿದ್ದರು. ಪುಷ್ಪಾ: ದಿ ರೂಲ್‌ನಲ್ಲಿಯೂ ಅವರು ತಮ್ಮ ಅಭಿನಯದಿಂದ ಎಲ್ಲರನ್ನೂ ಬೆರಗುಗೊಳಿಸುವುದು ಖಚಿತ ಎಂದು ಅಭಿಮಾನಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಮುತ್ತಂಶೆಟ್ಟಿ ಮೀಡಿಯಾ ಸಹಯೋಗದಲ್ಲಿ ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್‌ನಿಂದ ಈ ಚಿತ್ರ ನಿರ್ಮಾಣವಾಗಿದೆ. ಪುಷ್ಪ ಸಿನಿಮಾದ ಯಶಸ್ಸು ಮತ್ತು ಅಲ್ಲು ಅರ್ಜುನ್ ಅವರ ಜನಪ್ರಿಯತೆಯು ಚಿತ್ರದ ಎರಡನೇ ಭಾಗದ ಮೇಲೆ ಪರಿಣಾಮ ಬೀರಿದೆ. ಅಭಿಮಾನಿಗಳ ನಿರೀಕ್ಷೆ ಪೂರೈಸಲು ಚಿತ್ರತಂಡ ಪೂರ್ಣ ಪ್ರಮಾಣದ ಶ್ರಮ ಹಾಕುತ್ತಿದೆ. ಸ್ಯಾಂಡಲ್​ವುಡ್​ನ ಡಾಲಿ ಧನಂಜಯ್ ಜಾಲಿ ರೆಡ್ಡಿಯಾಗಿ ಅಬ್ಬರಿಸಿರೋದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಸೂಪರ್ ಹಿಟ್ ಪುಷ್ಪ ಸಿನಿಮಾದಲ್ಲಿ ಆರ್ಭಟಿಸಿದ್ದ ಜಾಲಿ ರೆಡ್ಡಿ, ಪುಷ್ಪ 2 ಚಿತ್ರದಲ್ಲೂ ಕಮಾಲ್ ಮಾಡಲು ಸಜ್ಜಾಗಿದ್ದು, ಅಭಿಮಾನಿಗಳ ನಿರೀಕ್ಷೆ ಬೆಟ್ಟದಷ್ಟಿದೆ.

ಇದನ್ನೂ ಓದಿ:ಪ್ರಿಯಾಂಕಾ ಚೋಪ್ರಾ ನಟನೆಯ 'ಸಿಟಾಡೆಲ್‌' ಫಸ್ಟ್ ಲುಕ್​ ರಿಲೀಸ್: ಪತಿ ನಿಕ್ ರಿಯಾಕ್ಷನ್ ಇಲ್ಲಿದೆ

ಪುಷ್ಪ 2021ರಲ್ಲಿ ಧೂಳೆಬ್ಬಿಸಿದ ಚಿತ್ರ. ಅಲ್ಲು ಅರ್ಜುನ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿ ಆಗಿತ್ತು. ನಿರ್ದೇಶಕ ಸುಕುಮಾರ್ ತಮ್ಮ ಯೋಚನಾ ಲಹರಿಯನ್ನೇ ಬದಲಿಸಿ ನಿರ್ದೇಶನ ಮಾಡಿದ್ದ ಈ ಪುಷ್ಪ ಸಿನಿಮಾ ಟಾಲಿವುಡ್ ಮಾತ್ರವಲ್ಲದೇ ಬಾಲಿವುಡ್​​ನಲ್ಲೂ ಕಮಾಲ್ ಮಾಡಿತ್ತು. ಪ್ರತಿ ಪಾತ್ರಗಳು ಪ್ರಮುಖವಾಗಿದ್ದು, ಇಂದಿಗೂ ಪ್ರೇಕ್ಷಕರ ಮನದಲ್ಲಿ ಜೀವಂತವಾಗಿವೆ. ಪುಷ್ಪರಾಜ್ ಅಲಿಯಾಸ್ ಪುಷ್ಪ ಆಗಿ ಅಲ್ಲು ಅರ್ಜುನ್ ಅಬ್ಬರಿಸಿದರೆ, ಶ್ರೀ ವಲ್ಲಿಯಾಗಿ ರಶ್ಮಿಕಾ ಮಂದಣ್ಣ ಸೊಂಟ ಬಳುಕಿಸಿ ಪ್ರೇಕ್ಷಕರನ್ನು ರಂಜಿಸಿದ್ದರು. ಜಾಲಿ ರೆಡ್ಡಿ ಪಾತ್ರದಲ್ಲಿ ಡಾಲಿ ಮೀಸೆ ತಿರುವಿದರೆ, ಸೂಪರ್​ ಹಿಟ್ ’ಊ ಅಂಟಾವ’ ಹಾಡಿಗೆ ನಟಿ ಸಮಂತಾ ರುತ್​ ಪ್ರಭು ಸಖತ್​ ಸ್ಟೆಪ್ ಹಾಕಿದ್ರು. ಚಿತ್ರ ಅಭೂತಪೂರ್ವ ಯಶಸ್ಸು ಕಂಡಿದ್ದು, ಅದರ ಮುಂದಿವರಿದ ಭಾಗದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಇದಕ್ಕಾಗಿ ಅವರ ಅಭಿಮಾನಿಗಳ ಬಳಗ ಕಾತರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ:ಬೇಸಿಗೆಯಲ್ಲಿ ಮತ್ತಷ್ಟು ಬಿಸಿ ಏರಿಸಿತು ಅಲಯಾ ಹಾಟ್ ಅವತಾರ

ABOUT THE AUTHOR

...view details