ಕರ್ನಾಟಕ

karnataka

ETV Bharat / entertainment

ಅದ್ಧೂರಿಯಾಗಿ ಸೆಟ್ಟೇರಿದ 'ಡಬಲ್​ ಇಸ್ಮಾರ್ಟ್': ರಾಮ್ ಪೋತಿನೇನಿ- ಪುರಿ ಜಗನ್ನಾಥ್​ ಕಾಂಬೋದಲ್ಲಿ ಮತ್ತೊಂದು ಸಿನಿಮಾ - ಈಟಿವಿ ಭಾರತ ಕನ್ನಡ

ಇಂದು ಹೈದರಾಬಾದ್​ನಲ್ಲಿ 'ಡಬಲ್​ ಇಸ್ಮಾರ್ಟ್' ಸಿನಿಮಾದ ಮುಹೂರ್ತ ಸಮಾರಂಭ ಅದ್ಧೂರಿಯಾಗಿ ನೆರವೇರಿದೆ.

double ismart
'ಡಬಲ್​ ಇಸ್ಮಾರ್ಟ್' ಸಿನಿಮಾದ ಮುಹೂರ್ತ ಸಮಾರಂಭ

By

Published : Jul 10, 2023, 7:34 PM IST

'ಡಬಲ್​ ಇಸ್ಮಾರ್ಟ್' ಸಿನಿಮಾದ ಮುಹೂರ್ತ ಸಮಾರಂಭ

ತೆಲುಗು ಸಿನಿಮಾ ಚಿತ್ರರಂಗದಲ್ಲಿ ಮಾಸ್​ ಅಂಡ್​ ಕ್ಲಾಸ್ ನಟನಾಗಿ ಮಿಂಚುತ್ತಿರುವವರು ​ಉಸ್ತಾದ್ ರಾಮ್ ಪೋತಿನೇನಿ. ಇದೀಗ ಸೆನ್ಸೇಷನಲ್​ ನಿರ್ದೇಶಕ ಪುರಿ ಜಗನ್ನಾಥ್ ಅವರ ಜೊತೆಗೆ ಮತ್ತೊಂದು ಸಿನಿಮಾ ಮಾಡಲು ಮುಂದಾಗಿದ್ದಾರೆ. ​'ಇಸ್ಮಾರ್ಟ್ ಶಂಕರ್' ಸಿನಿಮಾ ಮೂಲಕ ಮೋಡಿ ಮಾಡಿದ್ದ ಈ ಡೆಡ್ಲಿ ಕಾಂಬಿನೇಷನ್ ನಾಲ್ಕು ವರ್ಷದ ಬಳಿಕ ಸೀಕ್ವೆಲ್​ಗೆ ಕೈ ಹಾಕಿದೆ. ರಾಮ್​ ಹುಟ್ಟುಹಬ್ಬದಂದು ಸಿನಿಮಾದ ಶೀರ್ಷಿಕೆ ಮತ್ತು ರಿಲೀಸ್​ ಡೇಟ್​ ಅನೌನ್ಸ್​ ಮಾಡಲಾಗಿತ್ತು. ಇಂದು ಹೈದರಾಬಾದ್​ನಲ್ಲಿ ಸಿನಿಮಾದ ಮುಹೂರ್ತ ಸಮಾರಂಭ ಅದ್ಧೂರಿಯಾಗಿ ನೆರವೇರಿದೆ.

ಈ ವೇಳೆ ಚಾರ್ಮಿ 'ಡಬಲ್​ ಇಸ್ಮಾರ್ಟ್' ಸಿನಿಮಾಗೆ ಕ್ಲಾಪ್​ ಮಾಡಿದರೆ, ನಿರ್ದೇಶಕ ಪುರಿ ಜಗನ್ನಾಥ್​ ಮೊದಲ ಶಾಟ್​ಗೆ ಆ್ಯಕ್ಷನ್​ ಕಟ್​ ಹೇಳಿದರು. ಡಬಲ್ ಮಾಸ್ ಹಾಗೂ ಡಬಲ್ ಮನರಂಜನೆ ನೀಡಲು ಸಜ್ಜಾಗಿರುವ ಪುರಿ ಜಗನ್ನಾಥ್ ಅವರು ಡಬಲ್ ಇಸ್ಮಾರ್ಟ್ ಸಿನಿಮಾದ ಶೂಟಿಂಗ್ ಅನ್ನು ಇದೇ ತಿಂಗಳ 12 ರಿಂದ ಪ್ರಾರಂಭಿಸಲಿದ್ದಾರೆ. ಮುಂದಿನ ವರ್ಷ ಅಂದ್ರೆ 2024‌ ಮಾರ್ಚ್ 8 ರಂದು ಶಿವರಾತ್ರಿ ಹಬ್ಬಕ್ಕೆ ಈ ಚಿತ್ರ ತೆರೆಗೆ ಬರಲಿದೆ.

ಪುರಿ ಜಗನ್ನಾಥ್ ಕಥೆ ಬರೆದು ನಿರ್ದೇಶಿಸುತ್ತಿರುವ ಡಬಲ್ ಇಸ್ಮಾರ್ಟ್ ಸಿನಿಮಾವನ್ನು, ಪುರಿ ಕನೆಕ್ಟ್ಸ್ ಅಡಿ ಚಾರ್ಮಿ ಕೌರ್ ಹಾಗೂ ಪುರಿ ಜಗನ್ನಾಥ್ ನಿರ್ಮಿಸುತ್ತಿದ್ದಾರೆ. ಲೈಗರ್ ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಿದ್ದ ವಿಷು ರೆಡ್ಡಿ ಪುರಿ ಕನೆಕ್ಟ್ ಸಿಇಒ ಆಗಿ ಕೆಲಸ ಮಾಡುತ್ತಿದ್ದಾರೆ. ಭಾರಿ ಬಜೆಟ್ ನಲ್ಲಿ ತಯಾರಾಗುತ್ತಿರುವ ಈ ಸಿನಿಮಾ ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಕೂಡಿರಲಿದೆ. ಇದು ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು, ತೆಲುಗು, ತಮಿಳು, ಕನ್ನಡ, ಹಿಂದಿ ಹಾಗೂ‌ ಮಲಯಾಳಂ ಭಾಷೆಗಳಲ್ಲಿ ಮೂಡಿಬರಲಿದೆ. ಇನ್ನೂ ಉಳಿದ ತಾರಾಬಳಗ ಮತ್ತು ತಾಂತ್ರಿಕ ವರ್ಗದ ಮಾಹಿತಿ ಇನ್ನಷ್ಟೇ ಚಿತ್ರತಂಡ ಘೋಷಣೆ ಮಾಡಬೇಕಿದೆ.

ಇದನ್ನೂ ಓದಿ:ರಾಘವೇಂದ್ರ ರಾಜ್​ಕುಮಾರ್​ ನಟನೆಯ '13' ಸಿನಿಮಾದ ಸಿಂಗಲ್​ ಸೇವಂತಿ ಐಟಂ ಸಾಂಗ್​ ರಿಲೀಸ್​

'ಸ್ಕಂದ'ನಾಗಿ ರಾಮ್ ಪೋತಿನೇನಿ:ಉಸ್ತಾದ್ ರಾಮ್ ಪೋತಿನೇನಿ ಹಾಗೂ ಬೋಯಾಪಾಟಿ ಶ್ರೀನು ಕಾಂಬೀನೇಶನ್​ನಲ್ಲಿ ಹೊಸ ಸಿನಿಮಾ ರೆಡಿ ಆಗಿದೆ. ಸ್ಕಂದ'ನಾಗಿ ರಾಮ್​ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಮೊದಲ ಬಾರಿಗೆ ಲವರ್​ ಬಾಯ್​ ಮಾಸ್​ ಅವತಾರ ತಾಳಲಿದ್ದಾರೆ. ಕನ್ನಡತಿ ಶ್ರೀಲೀಲಾ ರಾಮ್​ಗೆ ಜೋಡಿಯಾಗಿದ್ದಾರೆ. ಸಂತೋಷ್ ಡಿಟೇಕ್ ಕ್ಯಾಮರಾ ವರ್ಕ್, ತಮನ್ ಎಸ್.ಎಸ್. ಮ್ಯೂಸಿಕ್ ಕಿಕ್ ಬಹುನಿರೀಕ್ಷಿತ ಚಿತ್ರಕ್ಕಿದೆ.

ಚಿತ್ರವನ್ನು ಶ್ರೀನಿವಾಸ್ ಸಿಲ್ವರ್ ಸ್ಕ್ರೀನ್ ಬ್ಯಾನರ್ ಅಡಿ ಶ್ರೀನಿವಾಸ್ ಚಿತ್ತೂರಿ ಅವರು ನಿರ್ಮಾಣ ಮಾಡಿದ್ದಾರೆ. ಜೀ ಸ್ಟುಡಿಯೋಸ್ ಸೌತ್ ಹಾಗೂ ಪವನ್ ಕುಮಾರ್ ಅರ್ಪಿಸುತ್ತಿರುವ ಸ್ಕಂದ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್​​ನಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗಿದೆ. ಸೆಪ್ಟಂಬರ್ 15ರಂದು ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿ ಈ ಸ್ಕಂದ ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

ಇದನ್ನೂ ಓದಿ:ವದಂತಿಗೆ ತೆರೆ.. ಅಲಿಬಾಗ್‌ನಲ್ಲಿ ರಣವೀರ್​ ಹುಟ್ಟುಹಬ್ಬ ಆಚರಿಸಿ ಮುಂಬೈಗೆ ಹಿಂತಿರುಗಿದ 'ದೀಪ್​ವೀರ್'​

ABOUT THE AUTHOR

...view details