ಕರ್ನಾಟಕ

karnataka

ETV Bharat / entertainment

ಮಂಡ್ಯದಲ್ಲಿ ಮೂರು ದಿನಗಳ ಕಾಲ ಪುನೀತೋತ್ಸವ - Punithotsava in pandavapura

ಪಾಂಡವಪುರ ಪಟ್ಟಣದಲ್ಲಿ ನವೆಂಬರ್ 25, 26, 27ರ ಮೂರು ದಿನಗಳ ಕಾಲ ಪುನೀತೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

Punithotsava for three days in Mandya
ಮಂಡ್ಯದಲ್ಲಿ ಮೂರು ದಿನಗಳ ಕಾಲ ಪುನೀತೋತ್ಸವ

By

Published : Nov 19, 2022, 1:33 PM IST

Updated : Nov 19, 2022, 2:44 PM IST

ಮಂಡ್ಯ: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹಾಗೂ ಪುನೀತ್ ರಾಜ್‍ಕುಮಾರ್ ಸ್ಮರಣಾರ್ಥ ಇದೇ ತಿಂಗಳು ಮೂರು ದಿನಗಳ ಕಾಲ ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದಲ್ಲಿ ಪುನೀತೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.

ಶಾಸಕ ಪುಟ್ಟರಾಜು

ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ಕ್ರೀಡಾಂಗಣದಲ್ಲಿ ನವೆಂಬರ್ 25, 26, 27ರ ಮೂರು ದಿನಗಳ ಕಾಲ ಮೇಲುಕೋಟೆ ಶಾಸಕ ಪುಟ್ಟರಾಜು ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಪುನೀತೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಈ ಮೂರು ದಿನ ಸಂಜೆ 5.30ರಿಂದ ರಾತ್ರಿ 10 ಗಂಟೆಯವರೆಗೆ ಕಾರ್ಯಕ್ರಮ ಜರುಗಲಿದೆ.

ಮಂಡ್ಯದಲ್ಲಿ ಮೂರು ದಿನಗಳ ಕಾಲ ಪುನೀತೋತ್ಸವ

ಇದನ್ನೂ ಓದಿ:ಪವರ್ ಸ್ಟಾರ್ ಆದರ್ಶದ ಹಾದಿಯಲ್ಲಿ ಗೋಲ್ಡನ್ ಸ್ಟಾರ್.. ಗಣೇಶ್ ಬಗ್ಗೆ ರಂಗಾಯಣ ರಘು ಗುಣಗಾನ

ಕಾರ್ಯಕ್ರಮಕ್ಕೆ ಪುನೀತ್​ ಸಹೋದರರಾದ ಶಿವ ರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್, ಅಶ್ವಿನಿ ಪುನೀತ್ ರಾಜ್‍ಕುಮಾರ್ ಸೇರಿದಂತೆ ರಾಜ್ ಕುಟುಂಬಸ್ಥರು ಭಾಗಿಯಾಗಲಿದ್ದಾರೆ ಎನ್ನುವ ಮಾಹಿತಿ ಇದೆ. ಇದಲ್ಲದೇ ಸ್ಯಾಂಡಲ್‍ವುಡ್‍ನ ಹಲವು ನಟ-ನಟಿಯರು, ಸಂಗೀತಗಾರು ಕಾರ್ಯಕ್ರಮದಲ್ಲಿ ಜನರನ್ನು ರಂಜಿಸಲಿದ್ದಾರೆ. ಮೂರು ದಿನವೂ ಸಹ ವಿಶೇಷ ಹಾಗೂ ವಿಭಿನ್ನ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.

Last Updated : Nov 19, 2022, 2:44 PM IST

ABOUT THE AUTHOR

...view details