ಕರ್ನಾಟಕ

karnataka

ETV Bharat / entertainment

ನಾಳೆ ಅಪ್ಪುವಿನ​ 'ಗಂಧದ ಗುಡಿ' ರಿಲೀಸ್‌; ಪ್ರೀಮಿಯರ್‌ ಶೋ ಟಿಕೆಟ್‌ ಸೋಲ್ಡೌಟ್‌! - ಸೌತ್ ಸಿನಿಮಾ ಇಂಡಸ್ಟ್ರಿ

ಅಕ್ಟೋಬರ್ 28ಕ್ಕೆ (ನಾಳೆ) 'ಗಂಧದ ಗುಡಿ' ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.

ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್​ ಪೋಸ್ಟರ್​
ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್​ ಪೋಸ್ಟರ್​

By

Published : Oct 27, 2022, 3:45 PM IST

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಕನಸಿನ ಚಿತ್ರ ಗಂಧದ ಗುಡಿ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಕರ್ನಾಟಕ ರತ್ನನ ದರ್ಶನ ಹೇಗಿರಬಹುದು ಅಂತ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ನಾಳೆ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಇಂದು ಸಂಜೆ ಪ್ರೀಮಿಯರ್ ಶೋ ಆಯೋಜಿಸಲಾಗಿದೆ. ಪೇಯ್ಡ್ ಪ್ರೀಮಿಯರ್‌ಗೆ ಟಿಕೆಟ್ ಬುಕಿಂಗ್ ಆರಂಭವಾಗುತ್ತಿದ್ದಂತೆ ಬಹುತೇಕ ಎಲ್ಲಾ ಥಿಯೇಟರ್‌ಗಳು ಹೌಸ್‌ಫುಲ್ ಆಗಿವೆ. ಈ ಮೂಲಕ ಅತಿ ಹೆಚ್ಚು ಪೇಯ್ಡ್ ಪ್ರೀಮಿಯರ್ ಶೋ ಆಗುತ್ತಿರುವ ಸಿನಿಮಾ ಎಂಬ ಹೆಗ್ಗಳಿಕೆಗೆ ಗಂಧದ ಗುಡಿ ಸೇರ್ಪಡೆ ಆಗುತ್ತಿದೆ.

ಪುನೀತ್ ರಾಜ್​ಕುಮಾರ್ ತಾನೊಬ್ಬ ಸ್ಟಾರ್ ಎನ್ನದೆ ಚಿತ್ರದಲ್ಲಿ ಸಾಮಾನ್ಯ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಒಂದು ವರ್ಷ ನಿರ್ದೇಶಕ, ವೈಲ್ಡ್ ಫೋಟೋಗ್ರಾಫರ್ ಅಮೋಘ ವರ್ಷ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅಪ್ಪು ಕನಸಿನ ಚಿತ್ರವನ್ನು ಪತ್ನಿ ಅಶ್ವಿನಿ ಪುನೀತ್ ರಾಜ್​ಕುಮಾರ್ ವಿಶ್ವದ್ಯಂತ ಬಿಡುಗಡೆ ಮಾಡುತ್ತಿದ್ದಾರೆ.

ಗಂಧದ ಗುಡಿ ಕನ್ನಡ ಚಿತ್ರರಂಗದಲ್ಲಿ ಒಂದು ವಿಶಿಷ್ಟ ಸಿನಿಮಾ. ಸ್ವತ: ಪುನೀತ್ ರಾಜ್‌ಕುಮಾರ್ ಕರ್ನಾಟಕದ ದರ್ಶನ ಮಾಡಿಸಲು ಹೊರಟಿರುವ ನಮ್ಮ ರಾಜ್ಯದ ಗಂಧದ ಗುಡಿ ಇದು. ಹೀಗಾಗಿ ಬೆಂಗಳೂರು ಹಾಗು ರಾಜ್ಯದ 72ಕ್ಕೂ ಚಿತ್ರಮಂದಿರಗಳಲ್ಲಿ ಪೇಯ್ಡ್ ಪ್ರೀಮಿಯರ್ ಶೋ ಅರೇಂಜ್ ಮಾಡಲಾಗಿದೆ.

ಪುನೀತ್ ರಾಜ್​ಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜ್​ಕುಮಾರ್

ಕನ್ನಡ ಚಿತ್ರರಂಗದಲ್ಲಿ 72ಕ್ಕೂ ಹೆಚ್ಚು ಥಿಯೇಟರ್​​ಗಳಲ್ಲಿ ಎಲ್ಲಾ ಪ್ರೀಮಿಯರ್ ಶೋಗಳ ಟಿಕೆಟ್ ಸೋಲ್ಡ್ ಔಟ್ ಆದ ಮೊದಲ ಸಿನಿಮಾ ಕೂಡಾ. ಇಂದು ಸಂಜೆ 7 ಗಂಟೆಯ ಬಳಿಕ ಪ್ರೀಮಿಯರ್ ಶೋ ಏರ್ಪಡಿಸಲಾಗಿದೆ ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ತಿಳಿಸಿದರು.

ಅಮೆರಿಕದ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಏಕಕಾಲಕ್ಕೆ ಬಿಡುಗಡೆ ಆಗಲಿದೆ. ಪ್ರಖ್ಯಾತ ಕ್ರಿಕೆಟ್ ಆಟಗಾರರಾದ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ವಿವಿಎಸ್ ಲಕ್ಷಣ್, ಅಮಿತ್ ಮಿಶ್ರಾ ಸೇರಿದಂತೆ ಸೌತ್ ಸಿನಿಮಾ ಇಂಡಸ್ಟ್ರಿಯ ಸ್ಟಾರ್​ಗಳು ಸಿನಿಮಾ ನೋಡಲು ಕಾತರರಾಗಿದ್ದಾರೆ.

ಇದನ್ನೂ ಓದಿ:ಗಂಧದಗುಡಿ ಶೂಟಿಂಗ್​ ವೇಳೆ ಪುನೀತ್​ ಜೊತೆ ನಾನೂ ಟ್ರಕ್ಕಿಂಗ್​ ಮಾಡಿದ್ದೆ.. ಅಶ್ವಿನಿ ಪುನೀತ್​ ರಾಜ್​ಕುಮಾರ್​

ABOUT THE AUTHOR

...view details