ಬಹುದೊಡ್ಡ ಕನಸಿನೊಂದಿಗೆ ಅಪ್ಪು ರೂಪಿಸಿರೋ ವೈಲ್ಡ್ ಲೈಫ್ ಜಗತ್ತಿನ ಕಥೆಯ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ಭಾರಿ ಮೆಚ್ಚುಗೆ ಗಳಿಸುತ್ತಿದೆ. ಗಂಧದ ಗುಡಿ ಟ್ರೈಲರ್ ಅನ್ನು ಅಭಿಮಾನಿಗಳು, ಸಿನಿರಂಗದವರು ಮಾತ್ರವಲ್ಲದೇ ದೇಶದ ಪ್ರಧಾನಿ ಸಹ ಮೆಚ್ಚಿ ಕೊಂಡಾಡಿದ್ದಾರೆ. ಅಭಿಮಾನಿಗಳ ಸಂಭ್ರಮಾಚರಣೆ ಸಹ ಜೋರಾಗಿದೆ.
ಕಳೆದ ವರ್ಷ ಅ.29 ರಂದು ಇಹಲೋಕ ತ್ಯಜಿಸಿದ ಪುನೀತ್ ರಾಜ್ಕುಮಾರ್ ಅವರ ಕನಸಿನ ಡಾಕ್ಯುಮೆಂಟರಿ ಗಂಧದ ಗುಡಿ ಟ್ರೈಲರ್ ರಿಲೀಸ್ ಆಗಿದೆ. ಇದರಲ್ಲಿ ಪ್ರಕೃತಿಯ ದೃಶ್ಯ ವೈಭವ ಅದ್ಭುತವಾಗಿದೆ. ಧುಮ್ಮಿಕ್ಕುವ ಜಲಪಾತಗಳು, ಬೆಟ್ಟ ಗುಡ್ಡಗಳು, ನದಿಗಳು, ಪ್ರಾಣಿ ಪಕ್ಷಿ, ಜಲ ಜೀವ ರಾಶಿ, ಕಾನನದ ಅದ್ಭುತ ದೃಶ್ಯ ವೈಭವವಿದೆ.
2021ರ ಅಕ್ಟೋಬರ್ 29ರಂದು ಅಪ್ಪು ನಿಧನ ಹೊಂದಿದರು. ಈ ಕಾರಣಕ್ಕೆ ಈ ವರ್ಷ ಅಕ್ಟೋಬರ್ 28ರಂದು 'ಗಂಧದ ಗುಡಿ'ಯನ್ನು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲಾಗುತ್ತಿದೆ.