ಬೆಂಗಳೂರು: ಶುಕ್ರವಾರ ಸಂಜೆ ಅರಮನೆ ಮೈದಾನದಲ್ಲಿ ಪುನೀತ ಪರ್ವ ಹೆಸರಿನಲ್ಲಿ ನಡೆದ ಗಂಧದ ಗುಡಿ ಪ್ರೀ ರಿಲೀಸ್ ಕಾರ್ಯಕ್ರಮವನ್ನು ನೋಡಲು ಲಕ್ಷಾಂತರ ಅಭಿಮಾನಿಗಳು ಆಗಮಿಸಿದ್ದರು. ಉಳಿದ ಕೋಟ್ಯಂತರ ಅಭಿಮಾನಿಗಳು ತಾವಿದ್ದ ಜಾಗದಿಂದಲೇ ಟಿವಿ, ಮೊಬೈಲ್ ಮೂಲಕ ಲೈವ್ ಕಾರ್ಯಕ್ರಮ ವೀಕ್ಷಿಸುತ್ತಿದ್ದರು. ಹೀಗೆ 'ಪುನೀತ್ ಪರ್ವ' ಕಾರ್ಯಕ್ರಮ ವೀಕ್ಷಿಸುತ್ತಿದ್ದಂತೆ ಓರ್ವ ಅಭಿಮಾನಿ ಹೃದಯಾಘಾತಕ್ಕೊಳಗಾಗಿ ಇಹಲೋಕ ತ್ಯಜಿಸಿದ್ದಾರೆ.
ಮಲ್ಲೇಶ್ವರನಲ್ಲಿರುವ ಅಪ್ಪು ಅಭಿಮಾನಿ ಗಿರಿರಾಜ್ ಮನೆಯಲ್ಲಿ ಟಿವಿ ಮೂಲಕ ಕಾರ್ಯಕ್ರಮ ವೀಕ್ಷಿಸುತ್ತಿದ್ದರು. ನಿತ್ಯ ಅಪ್ಪು ಫೋಟೋಗೆ ಪೂಜೆ ಮಾಡ್ತಿದ್ದ ಗಿರಿರಾಜ್ ನಿನ್ನೆ ಪುನೀತ್ ಪರ್ವ ಕಾರ್ಯಕ್ರಮ ನೋಡಿ ಬೇಸಗೊಂಡಿದ್ದರು. ''ಛೇ ಇಂಥ ಮನುಷ್ಯ ಹೋದರಲ್ಲಾ'' ಎಂದು ಪದೇ ಪದೆ ಹೇಳಿ ಬೇಸರ ಪಟ್ಟಿದ್ದರು. ರಾತ್ರಿ ಸುಮಾರು 10:30ರ ಹೊತ್ತಿಗೆ ಬಾತ್ ರೂಂಗೆ ಹೋದವರು ಅಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಇದನ್ನೂ ಓದಿ:ಅಪ್ಪು ಅವರನ್ನ ಇನ್ಫೋಸಿಸ್ ಮುಖ್ಯಸ್ಥೆ ಏನಂತಾ ಕರೆಯುತ್ತಿದ್ದರು ಗೊತ್ತಾ?