ಪುನೀತ್ ರಾಜ್‌ಕುಮಾರ್ ತೆರೆ ಮೇಲೆ ಅಷ್ಟೇ ಹೀರೋ ಅಲ್ಲ. ತೆರೆ ಹಿಂದೆಯೂ ಕೂಡ ರಿಯಲ್ ಹೀರೋ ಅನ್ನೋದು ಸಾಬೀತಾಗಿದೆ. ಅದಕ್ಕೆ ತಾಜಾ ಉದಾಹರಣೆ ಅಂದ್ರೆ ಪವರ್ ಸ್ಟಾರ್ ಸಿನಿಮಾ ಶೂಟಿಂಗ್ನಲ್ಲಿ ಎಷ್ಟೇ ಬ್ಯುಸಿ ಇದ್ದರೂ, ಪತ್ನಿ ಅಶ್ವಿನಿ ಹಾಗೂ ಮಕ್ಕಳ ಜೊತೆ ಕಾಲ ಕಳೆಯುತ್ತಿದ್ದರಂತೆ. ಅದಕ್ಕೆ ಸಾಕ್ಷಿ ಅವರು ಮಾಂಸಹಾರ ಊಟ ಮಾಡಿದ ನಂತರ ಬೀಡ ತಿನ್ನುವ ಹವ್ಯಾಸ. ಈ ಬೀಡ ತಿನ್ನೋದಕ್ಕೆ ಅಪ್ಪು ಪತ್ನಿ ಅಶ್ವಿನಿ ಹಾಗೂ ಮಕ್ಕಳ ಜೊತೆ ತಮಗಿಷ್ಟವಾದ ಸ್ಪಾಟ್ಗೆ ಕಾರಿನಲ್ಲಿ ಲಾಂಗ್ ಡ್ರೈವ್ ಹೋಗಿ, ಬೀಡ ಸವಿಯುತ್ತಿದ್ದರಂತೆ.
ಅಪ್ಪು, ಕುಟುಂಬಕ್ಕೆ ಈ ಅಂಗಡಿಯ ಬೀಡ ಅಂದ್ರೆ ಬಲು ಇಷ್ಟವಂತೆ! - ಪವರ್ ಸ್ಟಾರ್ ನಾನ್ ವೆಜ್ ಪ್ರಿಯ
ಪುನೀತ್ ರಾಜ್‍ಕುಮಾರ್ ಪತ್ನಿ ಅಶ್ವಿನಿ ಜೊತೆ ಆರ್ ಟಿ ನಗರದ ಶ್ರೀ ದುರ್ಗಾ ಪಾನ್ ಭಂಡಾರ್ ಅಂಗಡಿಗೆ ಹೋಗುತ್ತಿದ್ದರಂತೆ. ಒಂದು ವಾರದಲ್ಲಿ ಮೂರು ದಿನ ಇಲ್ಲಿಗೆ ಬಂದು ಬೀಡ ತಿನ್ನುತ್ತಿದ್ದರು ಎಂದು ತಿಳಿದುಬಂದಿದೆ.
![ಅಪ್ಪು, ಕುಟುಂಬಕ್ಕೆ ಈ ಅಂಗಡಿಯ ಬೀಡ ಅಂದ್ರೆ ಬಲು ಇಷ್ಟವಂತೆ! ಅಪ್ಪು ಮತ್ತು ಫ್ಯಾಮಿಲಿಗೆ ಈ ಅಂಗಡಿಯ ಬೀಡ ಅಂದ್ರೆ ಬಲು ಇಷ್ಟ](https://etvbharatimages.akamaized.net/etvbharat/prod-images/768-512-16770750-thumbnail-3x2-bin.jpg)
ಅಪ್ಪು ಮತ್ತು ಫ್ಯಾಮಿಲಿಗೆ ಈ ಅಂಗಡಿಯ ಬೀಡ ಅಂದ್ರೆ ಬಲು ಇಷ್ಟ
ಅಪ್ಪು ಮತ್ತು ಫ್ಯಾಮಿಲಿಗೆ ಈ ಅಂಗಡಿಯ ಬೀಡ ಅಂದ್ರೆ ಬಲು ಇಷ್ಟ
ಆರ್ ಟಿ ನಗರದ ಶ್ರೀ ದುರ್ಗಾ ಪಾನ್ ಭಂಡಾರ್ ಅಂಗಡಿಗೆ ಅಪ್ಪು ಕುಟುಂಬ ಸಮೇತ ಹೋಗುತ್ತಿದ್ದರಂತೆ. ಒಂದು ವಾರದಲ್ಲಿ ಮೂರು ದಿನ ಇಲ್ಲಿಗೆ ಬರ್ತಾ ಇದ್ದರು ಎಂದು ಅಂಗಡಿಯ ಮಾಲೀಕ ಗಂಗಾ ಸಾಗರ್ ಹೇಳುತ್ತಾರೆ. ಈ ಅಂಗಡಿಯಲ್ಲಿ ಸಿಗುವ ಸಾದಾ ಬೀಡ ಅಂದರೆ ಪವರ್ ಸ್ಟಾರ್ಗೆ ತುಂಬಾ ಇಷ್ಟವಂತೆ. ನಾಳಿನ ಅಪ್ಪು ಪುಣ್ಯಸ್ಮರಣೆಗೆ ಅವ್ರಿಗಿಷ್ಟವಾದ ಸಾದಾ ಬೀಡವನ್ನ ಗಂಗಾ ಸಾಗರ್ ಕಳುಹಿಸಿ ಕೊಡಲಿದ್ದಾರೆ.
ಇದನ್ನೂ ಓದಿ:'ಮನೇಲಿ ಹೆಂಡ್ತಿ ಮಕ್ಕಳು ಕಾಯ್ತಿರ್ತಾರೆ...': ಹೃದಯ ಕಲುಕಿದ ಅಪ್ಪು ಮಾತು