ರಾಜ್ಯ ಸರ್ಕಾರ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಟೀಕಿಸುವ ಭರದಲ್ಲಿ ಚಕ್ರವರ್ತಿ ಸೂಲಿಬೆಲೆ ನಟ ಪುನೀತ್ ರಾಜ್‌ಕುಮಾರ್ ನಿಧನವನ್ನು ಹೋಲಿಸಿ ಪೋಸ್ಟ್ ಮಾಡಿರುವ ಟ್ವೀಟ್ ಅಪ್ಪು ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿದೆ.
ಈ ಟ್ವೀಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ಪುನೀತ್ ಅಭಿಮಾನಿಗಳ ಆಕ್ರೋಶಕ್ಕೆ ಎಡೆಮಾಡಿ ಕೊಟ್ಟಿದೆ. ಚಕ್ರವರ್ತಿ ಸೂಲಿಬೆಲೆ ತಮ್ಮ ಟ್ಟಿಟ್ಟರ್‌ನಲ್ಲಿ, ತಮ್ಮದೇ ಪಕ್ಷದ ಶಾಸಕರ ಕಡತಗಳಿಗೆ ಸಹಿ ಮಾಡಲು ಸಿಎಂಗೆ ಸಮಯದ ಅಭಾವವಿದೆ ಎಂದು ಪಕ್ಷದವರೇ ಟೀಕಿಸಿದ್ದಾರೆ. ಆದರೆ, ಸಿಎಂಗೆ ಸಿನಿಮಾಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಮಯವಿದೆ. ಪ್ರೀಮಿಯರ್ ಶೋಗೆ ಹೋಗಿ, ಸಿನಿಮಾ ನೋಡಿ ಕಣ್ಣೀರು ಹಾಕಲು ಸಮಯವಿದೆ. ನಟರೊಬ್ಬರು ನಿಧನರಾದಾಗ 3 ದಿನಗಳ ಸಮಯವನ್ನು ಅದಕ್ಕಾಗಿ ಕೊಟ್ಟಿದ್ದಾರೆ. ಈಗ ಈ ಜನಾಕ್ರೋಶ ಇಲ್ಲದೇ ಹೋಗದ್ದಿದ್ದರೆ ವಿಕ್ರಾಂತ್ ರೋಣ ಸಿನಿಮಾವನ್ನೂ ನೋಡಿರುತ್ತಿದ್ದರು ಎಂದು ಅಣಕಿಸಿದ್ದಾರೆ.