ಮುಂಬೈ: ಬಾಲಿವುಡ್ ಕಿಂಗ್ ಶಾರುಖ್ ಖಾನ್ ತಮ್ಮ ಅದ್ಭುತ ನಟನೆಯಿಂದ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕೆಲವೊಮ್ಮೆ ಸೂಪರ್‌ಸ್ಟಾರ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗುತ್ತಲೇ ಇರುತ್ತಾರೆ. ಏತನ್ಮಧ್ಯೆ, ದೆಹಲಿ ಅಪಘಾತದಲ್ಲಿ ಬಲಿಯಾದ ಅಂಜಲಿ ಸಿಂಗ್ ಅವರ ಕುಟುಂಬಕ್ಕೆ ಸಹಾಯ ಮಾಡಿದ್ದಕ್ಕಾಗಿ ನಟ ಶಾರುಖ್ ಖಾನ್ 'Proud of Shah Rukh Khan' ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದ್ದಾರೆ. ಅಭಿಮಾನಿಗಳು ತಮ್ಮ ನೆಚ್ಚಿನ ಸೂಪರ್‌ಸ್ಟಾರ್‌ನ ಇಂತಹ ಸಾಮಾಜಿಕ ಸೇವೆಗೆ ಪ್ರೀತಿಯ ಸುರಿಮಳೆಯನ್ನೇ ಹರಿಸಿದ್ದಾರೆ.
ಶಾರುಖ್ ಖಾನ್ ಅವರು ಇತ್ತೀಚೆಗಷ್ಟೇ 'ಪಠಾಣ್' ಚಿತ್ರದ 'ಬೇಷರಂ ರಂಗ್' ಹಾಡಿಗೆ ಭಾರಿ ವಿರೋಧ ಎದುರಿಸಬೇಕಾಯಿತು. ಹೀಗಿರುವಾಗ ಟ್ವಿಟ್ಟರ್ ನಲ್ಲಿ ಅಭಿಮಾನಿಗಳು ಕಿಂಗ್ ಖಾನ್ ಅವರನ್ನು ಹೊಗಳಿದ್ದಾರೆ. ಕೆಲವರು ಡ್ಯಾನ್ಸ್ ವಿಡಿಯೋ ಮಾಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಡ್ಯಾನ್ಸ್ ವಿಡಿಯೋ ಶಾರುಖ್ ಖಾನ್ ಅವರ ನೃತ್ಯ ಸಂಯೋಜಕ ಮತ್ತು ಅಭಿಮಾನಿ ಕುನಾಲ್ ಮೋರ್ ಅವರದ್ದು. ವಿಡಿಯೋದಲ್ಲಿ ಕುನಾಲ್ ಮತ್ತು ಕೆಲವು ನರ್ತಕರು ಪುಣೆಯ ಬೀದಿಗಳಲ್ಲಿ 'ಜೂಮೇ ಜೋ ಪಠಾಣ್' ಹಾಡಿಗೆ ನೃತ್ಯ ಮಾಡುತ್ತಿದ್ದಾರೆ.
ಇದನ್ನೂ ಓದಿ:ಪಠಾಣ್ ಬಿಡುಗಡೆಗೆ ಆಕ್ಷೇಪ: ಚಿತ್ರದ ಪೋಸ್ಟರ್ಗಳನ್ನು ಹರಿದ ಭಜರಂಗ ದಳದ ಕಾರ್ಯಕರ್ತರು
ಡಿ. 3 ರ ರಾತ್ರಿ ಅಂಜಲಿ ಸಿಂಗ್ ತನ್ನ ಸ್ನೇಹಿತೆ ನಿಧಿಯೊಂದಿಗೆ ಮನೆಗೆ ಹಿಂದಿರುಗುತ್ತಿದ್ದರು. ಆದರೆ, ಆಕೆ ಆ ಕರಾಳ ರಾತ್ರಿ ಅಂಜಲಿ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಳು. ದೆಹಲಿಯ ಕಾಂಜಾವಾಲಾ ರಸ್ತೆಯಲ್ಲಿ ಎದುರಿನಿಂದ ವೇಗವಾಗಿ ಬಂದ ಕಾರು ಅಂಜಲಿಯ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಅಂಜಲಿಯ ಸ್ನೇಹಿತೆ ನಿಧಿ ಪ್ರಾಣಾಪಾಯದಿಂದ ಪಾರಾಗಿದ್ದು, ಅಂಜಲಿ ಕಾರಿನಡಿ ಸಿಲುಕಿ ಸಾವನ್ನಪ್ಪಿದ್ದಳು. ಸದ್ಯ ಪ್ರಕರಣದ ತನಿಖೆ ನಡೆಯುತ್ತಿದೆ.
ಸಹಾಯ ಹಸ್ತ ಚಾಚಿದ ಬಾಲಿವುಡ್‌ನ 'ಬಾದ್‌ಶಾ':ಅಂಜಲಿ ಸಿಂಗ್ ಕುಟುಂಬಕ್ಕೆ 'ಬಾದ್‌ಶಾ' ಶಾರುಖ್ ಖಾನ್ ಆರ್ಥಿಕ ಸಹಾಯ ನೀಡಿದ್ದಾರೆ ಎನ್ನಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಶಾರುಖ್ ಖಾನ್ ಅವರ ಚಾರಿಟಿ ಫೌಂಡೇಶನ್ 'ಮೀರ್ ಫೌಂಡೇಶನ್' ಮೂಲಕ ಅಂಜಲಿ ಸಿಂಗ್ ಅವರ ಕುಟುಂಬಕ್ಕೆ ಸಹಾಯದ ಮೊತ್ತವನ್ನು ನೀಡಿದ್ದಾರೆ. ಶಾರುಖ್ ಖಾನ್ 2013ರಲ್ಲಿ ತನ್ನ ದಿವಂಗತ ತಂದೆ ಮೀರ್ ತಾಜ್ ಮೊಹಮ್ಮದ್ ಹೆಸರಿನಲ್ಲಿ ಎನ್‌ಜಿಒ ಮೀರ್ ಫೌಂಡೇಶನ್ ಅನ್ನು ತೆರೆದರು. ಕೆಳಸ್ತರದ ಬಡವರು ಮತ್ತು ನಿರ್ಗತಿಕರಿಗೆ ಎಲ್ಲ ರೀತಿಯಲ್ಲೂ ಸಹಾಯ ನೀಡುವುದು ಈ ಎನ್‌ಜಿಒನ ಉದ್ದೇಶವಾಗಿದೆ.