ಕರ್ನಾಟಕ

karnataka

ETV Bharat / entertainment

ಮುಂಬೈನಲ್ಲಿ ಬನಾರಸ್ ಜೋಡಿ: ಭರ್ಜರಿ ಪ್ರಚಾರದಲ್ಲಿ ಚಿತ್ರ ತಂಡ - ಕಾಶಿಯ ಎಲ್ಲಾ ಘಾಟ್​ನಲ್ಲೂ ಬನಾರಸ್ ಚಿತ್ರದ ಚಿತ್ರೀಕರಣ

ಬೆಲ್ ಬಾಟಮ್ ಖ್ಯಾತಿಯ ನಿರ್ದೇಶಕ ಜಯತೀರ್ಥ ನಿರ್ದೇಶನದ ಬನಾರಸ್ ಚಿತ್ರದ ಪ್ರಮೋಷನ್ ಮುಂಬೈನಲ್ಲಿ ಮಾಡಲಾಗುತ್ತಿದೆ. ನಾಯಕ ಝೈದ್ ಖಾನ್ ಹಾಗು ಸೋನಾಲ್ ಮಾಂಟೆರೊ‌ ಭರ್ಜರಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.

Promotion of Banaras in Mumbai
ಮುಂಬೈನಲ್ಲಿ ಬನಾರಸ್ ಜೋಡಿ

By

Published : Oct 5, 2022, 9:36 PM IST

ಶಾಸಕ ಜಮೀರ್ ಅಹಮದ್ ಖಾನ್ ಪುತ್ರ‌ ಝೈದ್ ಖಾನ್ ಅಭಿನಯದ ಬನಾರಸ್ ಟ್ರೇಲರ್​ನಿಂದಲೇ ಸೌತ್ ಸಿನಿಮಾ‌ ಇಂಡಸ್ಟ್ರಿಯಲ್ಲಿ ಜನಮನ್ನಣೆ ಗಳಿಸಿದೆ. ನವೆಂಬರ್​ ನಾಲ್ಕಕ್ಕೆ ತೆರೆಗೆ ಬರುವುದಾಗಿ ಚಿತ್ರ ತಂಡ ಹೇಳಿಕೊಂಡಿದೆ. ಟ್ರಾವೆಲ್ ಲವ್ ಸ್ಟೋರಿ ಜೊತೆಗೆ ಫ್ಯಾಮಿಲಿ ಸೆಂಟಿಮೆಂಟ್ ಹೊಂದಿರುವ ಬನಾರಸ್ ಚಿತ್ರ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿದೆ.

ಬೆಲ್ ಬಾಟಮ್ ಖ್ಯಾತಿಯ ನಿರ್ದೇಶಕ ಜಯತೀರ್ಥ ನಿರ್ದೇಶನದ ಬನಾರಸ್ ಚಿತ್ರದ ಪ್ರಮೋಷನ್ ಚಿತ್ರತಂಡ ಭರ್ಜರಿಯಾಗಿ ಮಾಡುತ್ತಿದೆ. ಸದ್ಯ ಯುವ ನಟ ಝೈದ್ ಖಾನ್ ಹಾಗು ಸೋನಾಲ್ ಮಾಂಟೆರೊ‌ ಮುಂಬೈನಲ್ಲಿ ಬನಾರಸ್ ಚಿತ್ರದ ಪ್ರಚಾರ ಮಾಡುತ್ತಿದ್ದಾರೆ. ಮುಂಬೈನ ಪ್ರಚಾರದ ಪ್ರಮೋಷನ್ ಮೇಕಿಂಗ್ ವಿಡಿಯೋವನ್ನು ಅನಾವರಣ ಮಾಡಿದೆ.

ಮುಂಬೈನಲ್ಲಿ ಬನಾರಸ್ ಜೋಡಿ, ಭರ್ಜರಿ ಪ್ರಚಾರದಲ್ಲಿ ತೊಡಗಿರುವ ಚಿತ್ರ ತಂಡ

ವಿಭಿನ್ನ ಪ್ರೇಮಕಥೆಯ ಹೊಂದಿರುವ ಈ ಚಿತ್ರದ ಬಹುತೇಕ ಚಿತ್ರೀಕರಣ ಕಾಶಿಯಲ್ಲಿ ನಡೆದಿದೆ.‌‌ ಕಾಶಿಗೂ ಚಿತ್ರದ ಕಥೆಗೂ ಸಂಬಂಧವಿದೆ ಹಾಗಾಗಿ ಅಲ್ಲೇ ಹೆಚ್ಚಿನ ಚಿತ್ರೀಕರಣವಾಗಿದೆ. ಸಹಜ ಸೌಂದರ್ಯದ ಕಾಶಿಯ ಎಲ್ಲ ಘಾಟ್​ನಲ್ಲೂ ಬನಾರಸ್ ಚಿತ್ರದ ಚಿತ್ರೀಕರಣ ನಡೆದಿದೆ. ಉಳಿದಂತೆ ಬೆಂಗಳೂರು, ಮೈಸೂರು, ಗೋವಾದಲ್ಲೂ ಚಿತ್ರೀಕರಣವಾಗಿದೆ. ಇದೇ ಮೊದಲು ಕಾಶಿಯ ಪರಂಪರೆ, ಸಂಸ್ಕೃತಿಯನ್ನು ಈ ಚಿತ್ರದಲ್ಲಿ ಚಿತ್ರೀಕರಣವಾಗಿದೆ.

ಇನ್ನು ಈ ಚಿತ್ರದಲ್ಲಿ ದೇವರಾಜ್, ಅಚ್ಯುತ‌ಕುಮಾರ್, ಸುಜಯ್ ಶಾಸ್ತ್ರಿ, ಸ್ವಪ್ನ ರಾಜ್, ಬರ್ಕತ್ ಆಲಿ, ಚಿರಂತ್, ರೋಹಿತ್ ತಾರಾಗಣ ಇದೆ. ಚಿತ್ರದ ಸುಮಧುರ ಹಾಡುಗಳಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಅದ್ವೈತ ಗುರುಮೂರ್ತಿ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಹರ್ಷ ನೃತ್ಯ ನಿರ್ದೇಶನ ಹಾಗೂ ವಿಜಯ್ ಮಾಸ್ಟರ್, ಡಿಫರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ರಘು ನಿಡವಳ್ಳಿ ಸಂಭಾಷಣೆ ಬರೆದಿದ್ದಾರೆ. ರಶ್ಮಿ ವಸ್ತ್ರವಿನ್ಯಾಸ ಮಾಡಿದ್ದಾರೆ.

ನ್ಯಾಷನಲ್ ಖಾನ್ಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಿಲಕ್ ರಾಜ್ ಬಲ್ಲಾಳ್ ನಿರ್ಮಿಸಿರುವ ಈ ಚಿತ್ರಕ್ಕೆ ಮುಜಮ್ಲಿಲ್‌ ಅಹಮದ್ ಖಾನ್ ಅವರ ಸಹ ನಿರ್ಮಾಣವಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿರುವ ಬನಾರಸ್ ಸಿನಿಮಾ ಮೂಲಕ ಝೈದ್ ಖಾನ್ ಪ್ರೇಕ್ಷಕರ ಹೃದಯ ಗೆಲ್ಲುತ್ತಾರೆ ಅನ್ನೋದು ಮುಂದಿನ ತಿಂಗಳು ನವೆಂಬರ್​ನಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ :ಪ್ರೇಮಕಥೆಯುಳ್ಳ ಕೃಷ್ಣನ ದಿಲ್ ಪಸಂದ್ ಟೀಸರ್ ರಿಲೀಸ್​​

ABOUT THE AUTHOR

...view details