ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ, ನಾಗ್ ಅಶ್ವಿನ್ ನಿರ್ದೇಶನದ ವೈಜ್ಞಾನಿಕ, ಆ್ಯಕ್ಷನ್ ಚಿತ್ರ 'ಪ್ರಾಜೆಕ್ಟ್ ಕೆ' ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ. ಈ ಸಿನಿಮಾ ಭಾರತದಲ್ಲಿ ಈವರೆಗೆ ನಿರ್ಮಾಣವಾದ ಪ್ರಾಜೆಕ್ಟ್ಗಳ ಪೈಕಿ ಅತ್ಯಂತ ದುಬಾರಿ ಯೋಜನೆ ಎಂದು ಹೇಳಲಾಗುತ್ತಿದೆ.
'ಪ್ರಾಜೆಕ್ಟ್ ಕೆ' ಅಂದ್ರೆ ಏನು? ಸೂಪರ್ ಸ್ಟಾರ್ ಕಮಲ್ ಹಾಸನ್ ಅವರು ಚಿತ್ರದ ಭಾಗವಾಗಲಿದ್ದಾರೆ ಎಂದು ಚಿತ್ರ ತಯಾರಕರು ಘೋಷಿಸಿದಾಗಿನಿಂದ ಪ್ರಾಜೆಕ್ಟ್ ಕೆ ಸುತ್ತಲಿನ ಕುತೂಹಲ ದುಪ್ಪಟ್ಟಾಯಿತು. ಹಿರಿಯ, ಪ್ರತಿಭಾನ್ವಿತ, ಬಹುಬೇಡಿಕೆ ನಟರಾದ ಅಮಿತಾಭ್ ಬಚ್ಚನ್ ಮತ್ತು ಕಮಲ್ ಹಾಸನ್ ಅವರು ಲಾಂಗ್ ಬ್ರೇಕ್ ಬಳಿಕ ಮತ್ತೆ ಒಂದಾಗುತ್ತಿದ್ದಾರೆ ಎಂಬುದನ್ನರಿತ ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಹೆಚ್ಚಾಯಿತು. ಚಿತ್ರದ ಬಗ್ಗೆ ವಿವರಗಳನ್ನು ಬಿಟ್ಟುಕೊಡದ ನಿರ್ಮಾಪಕರು ಈಗ 'ಪ್ರಾಜೆಕ್ಟ್ ಕೆ' ಅಂದ್ರೆ ಏನೆಂದು ಬಹಿರಂಗಪಡಿಸಲು ಸಿದ್ಧರಾಗಿದ್ದಾರೆ.
ಸಂಜೆ 7:10ಕ್ಕೆ ಬಹಿರಂಗ: ಸಿನಿಮಾ ಪ್ರೊಡಕ್ಷನ್ ಹೌಸ್ ವೈಜಯಂತಿ ಮೂವೀಸ್ ಇಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದೆ. '' ProjectK ಎಂದರೇನು? ಜಗತ್ತು ಈ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಿದೆ, ಹತ್ತಿರ ಬನ್ನಿ, ಇಂದು ಸಂಜೆ 7:10ಕ್ಕೆ " ಎಂದು ಬರೆದುಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ಮುಂಬರುವ ಈ ಚಿತ್ರದ ಅಪ್ಡೇಟ್ಸ್ ಅಭಿಮಾನಿಗಳ ಕುತೂಹಲ ಹೆಚ್ಚಳಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾದಲ್ಲಿ ನೆಟ್ಟಿಗರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು: ಈ ಉತ್ಸಾಹದ ನಡುವೆ ಮತ್ತೊಂದು ಗಮನಾರ್ಹ ವಿಷಯವೇನು ಗೊತ್ತೇ?. ಪ್ರಾಜೆಕ್ಟ್ ಕೆ ಚಿತ್ರತಂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಲಿದೆ. ಜುಲೈ 19 ರಂದು ಪ್ರತಿಷ್ಠಿತ ಸ್ಯಾನ್ ಡಿಯಾಗೋ ಕಾಮಿಕ್-ಕಾನ್ ಈವೆಂಟ್‌ನಲ್ಲಿ (San Diego Comic-Con event) ಪ್ರಾಜೆಕ್ಟ್ ಕೆ ಯ ಫಸ್ಟ್ ಗ್ಲಿಂಪ್ಸ್ ಅನ್ನು ಅನಾವರಣಗೊಳಿಸಲಿದ್ದಾರೆ. ಪ್ರಾಜೆಕ್ಟ್ ಕೆ ತಂಡವು 'ಇದು ಪ್ರಾಜೆಕ್ಟ್ ಕೆ: ಭಾರತದ ಮೈಥೋ-ಸೈನ್ಸ್-ಫಿಕ್ಷನ್ ಎಪಿಕ್‌ನ ಮೊದಲ ನೋಟ' ಎಂಬ ಶೀರ್ಷಿಕೆಯ ಕಾರ್ಯಕ್ರಮ ಆಯೋಜಿಸಲಿದೆ. ಚಿತ್ರದ ಪೂರ್ಣ ಶೀರ್ಷಿಕೆ, ಟೀಸರ್ ಮತ್ತು ಬಿಡುಗಡೆ ದಿನಾಂಕವನ್ನು ಈ ಗ್ರ್ಯಾಂಡ್ ಈವೆಂಟ್‌ನಲ್ಲಿ ಅಧಿಕೃತವಾಗಿ ಘೋಷಿಸಲಾಗುತ್ತದೆ. ಅಮೆರಿಕದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಇತ್ತೀಚಿನ ವರದಿಗಳ ಪ್ರಕಾರ ನಾಯಕ ನಟನಿಗೆ ಪ್ರತಿಸ್ಪರ್ಧಿಯಾಗಿ ನಟಿಸುತ್ತಿರುವ ಕಮಲ್ ಹಾಸನ್ ಅವರೂ ಕೂಡ ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆ.
ಇದನ್ನೂ ಓದಿ:Rishab Shetty birthday Photos: 'ಸಾಯುವವರೆಗೂ ಸಿನಿಮಾಗಳ ಮೂಲಕ ನಿಮ್ಮ ಋಣ ತೀರುಸುತ್ತೇನೆ' - ರಿಷಬ್ ಶೆಟ್ಟಿ
ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣ ಆಗುತ್ತಿರುವ ಪ್ರಾಜೆಕ್ಟ್ ಕೆ ಸಿನಿಮಾವನ್ನು ನಾಗ್ ಅಶ್ವಿನ್ ನಿರ್ದೇಶಿಸುತ್ತಿದ್ದಾರೆ. ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ಕಮಲ್ ಹಾಸನ್, ದಿಶಾ ಪಟಾನಿ ನಟಿಸುತ್ತಿದ್ದಾರೆ. ದೀಪಿಕಾ ಪಡುಕೋಣೆ ಅವರಿಗಿದು ಚೊಚ್ಚಲ ತೆಲುಗು ಚಿತ್ರ. ಈ ಸಿನಿಮಾಗಾಗಿ ತಾರೆಯರು ಎಷ್ಟು ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ? ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ.
ಇದನ್ನೂ ಓದಿ:Watch Video: ಅಭಿಮಾನಿಗಳೊಂದಿಗೆ ಅದ್ಧೂರಿಯಾಗಿ ಜನ್ಮದಿನ ಆಚರಿಸಿಕೊಂಡ ರಿಷಬ್ ಶೆಟ್ಟಿ