ಕರ್ನಾಟಕ

karnataka

ETV Bharat / entertainment

ಊರ್ವಶಿ ರೌಟೇಲಾ ನಟನೆಯ ಹಿಂದಿ ಸಿನಿಮಾ ನಿರ್ಮಿಸುವ ಕನ್ನಡ ನಿರ್ಮಾಪಕ - ಎಂ. ರಮೇಶ್ ರೆಡ್ಡಿ

ಊರ್ವಶಿ ರೌಟೇಲಾ ಅಭಿನಯಿಸುತ್ತಿರುವ ಬಾಲಿವುಡ್​ ಚಿತ್ರಕ್ಕೆ ಕನ್ನಡ ನಿರ್ಮಾಪಕರು ಬಂಡವಾಳ ಹೂಡಿದ್ದಾರೆ.

Urvashi Rautela lead character
ದಿಲ್ ಹೈ ಗ್ರೇ ಸಿನಿಮಾದಲ್ಲಿ ಊರ್ವಶಿ ರೌಟೇಲಾ

By

Published : Apr 8, 2022, 4:23 PM IST

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಉಪ್ಪು ಹುಳಿ ಖಾರ, ನಾತಿಚರಾಮಿ, ಪಡ್ಡೆಹುಲಿ, 100 ಸಿನಿಮಾ, ಗಾಳಿಪಟ 2.. ಹೀಗೆ ವಿಭಿನ್ನ ಶೈಲಿಯ ಸಿನಿಮಾಗಳನ್ನು ನಿರ್ಮಾಣ ಮಾಡಿ ಎಂ. ರಮೇಶ್ ರೆಡ್ಡಿ ವಿಶೇಷ ಛಾಪು ಮೂಡಿಸಿದ್ದಾರೆ. ಇವರು ಇದೀಗ ಕನ್ನಡ ಸಿನಿಮಾಗಳು ಮಾತ್ರವಲ್ಲದೇ ಬಾಲಿವುಡ್​ ಚಿತ್ರನಿರ್ಮಾಣಕ್ಕೂ ಮುಂದಾಗಿದ್ದಾರೆ.

ಐರಾವತ ಸಿನಿಮಾ ಮೂಲಕ ಕನ್ನಡದಲ್ಲಿ ನಟಿಸಿದ್ದ ಊರ್ವಶಿ ರೌಟೇಲಾ ಜೊತೆಗೆ ನಿರ್ಮಾಪಕ ಎಂ. ರಮೇಶ್ ರೆಡ್ಡಿ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ 'ದಿಲ್ ಹೈ ಗ್ರೇ' ಟೈಟಲ್ ಇಟ್ಟು ಬಹುತೇಕ ಚಿತ್ರೀಕರಣ ಮುಗಿಸಿದ್ದಾರೆ. ಶೀರ್ಷಿಕೆಯೇ ಹೇಳುವಂತೆ ಇದೊಂದು ಕ್ರೈಂ ಥ್ರಿಲ್ಲರ್ ಸಿನಿಮಾ. ಮೂರು ಪ್ರಧಾನ ಪಾತ್ರಗಳಲ್ಲಿ ಸಿನಿಮಾ ಸಾಗಲಿದೆ.

ಊರ್ವಶಿ ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ವಿನೀತ್ ಪೊಲೀಸ್ ಇನ್​ಸ್ಪೆಕ್ಟರ್ ಆಗಿ ಕಾಣಿಸಿಕೊಂಡರೆ, ಅಕ್ಷಯ್ ಆನ್​ಲೈನ್​ನಲ್ಲಿ ಯುವತಿಯರನ್ನು ಬಲೆಗೆ ಬೀಳಿಸಿಕೊಳ್ಳುವ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸುಸಿ ಗಣೇಶನ್ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು, ತಾರಿಕ್ ಮಹಮ್ಮದ್, ನವೀನ್ ಪ್ರಕಾಶ್ ಚಿತ್ರದ ಬರವಣಿಗೆಯಲ್ಲಿ ಸಾಥ್ ನೀಡಿದ್ದಾರೆ.

ಊರ್ವಶಿ ರೌಟೇಲಾ

ಈ ಬಗ್ಗೆ ಒಂದಷ್ಟು ಮಾಹಿತಿ ನೀಡುವ ನಿರ್ಮಾಪಕ ರಮೇಶ್ ರೆಡ್ಡಿ, ಈ ಚಿತ್ರದ ಕಥೆಯೇ ರೋಚಕವಾಗಿದೆ. ಈ ಸಿನಿಮಾದಲ್ಲಿ ಕಥೆಯೇ ಹೀರೋ. ಕ್ರೈಂ ಥ್ರಿಲ್ಲರ್ ಎಳೆಯಲ್ಲಿ ಸಾಗುವ ಈ ಸಿನಿಮಾ ಪ್ರಸ್ತುತ ಕಾಲಘಟ್ಟ ಸೂಕ್ತವಾಗಿದೆ. ಇಂಥ ಸಿನಿಮಾ ಕಟ್ಟಿಕೊಡುವಲ್ಲಿ ನಿರ್ದೇಶಕರು ಮತ್ತವರ ತಂಡ ಯಶಸ್ವಿಯಾಗಿದೆ. ಬಹುತೇಕ ಕೆಲಸಗಳು ಮುಕ್ತಾಯದ ಹಂತದಲ್ಲಿದೆ. ಜುಲೈನಲ್ಲಿ ತೆರೆಗೆ ಬರಲಿದ್ದೇವೆ ಎಂದರು.

ಇದನ್ನೂ ಓದಿ:'ಮ್ಯೂಟ್' ಟ್ರೈಲರ್ ಅನಾವರಣ ಮಾಡಲಿರುವ ಬಾಲಿವುಡ್ ನಟಿ ರವೀನಾ ಟಂಡನ್

ABOUT THE AUTHOR

...view details